ADVERTISEMENT

ನಾರಾಯಣಗುರುಗಳ ಸಂದೇಶ ಅಳವಡಿಸಿಕೊಳ್ಳಿ: ಗೀತಾಂಜಲಿ

​ಪ್ರಜಾವಾಣಿ ವಾರ್ತೆ
Published 26 ಜುಲೈ 2015, 6:39 IST
Last Updated 26 ಜುಲೈ 2015, 6:39 IST

ಪಡುಬಿದ್ರಿ : ವಿದ್ಯೆಯಿಂದ ಉದ್ಯೋಗ ಗಳಿಸುವ ಮೂಲಕ ಸ್ವತಂತ್ರರಾಗಿರಿ ಎಂಬ ಬ್ರಹ್ಮಶ್ರೀ ನಾರಾಯಣ ಗುರುಗಳ ತತ್ವ ಸಂದೇಶವನ್ನು ನಮ್ಮ ಜೀವನದಲ್ಲಿ ಅಳವಡಿಸಿಕೊಂಡು ಬಾಳಬೇಕು ಎಂದು ಉಡುಪಿ ಜಿಲ್ಲಾ ಪಂಚಾಯಿತಿ ಸದಸ್ಯ ಗೀತಾಂಜಲಿ ಎಂ. ಸುವರ್ಣ ಹೇಳಿದರು.

ಭಾನುವಾರ ರೇಶ್ಮೀ ಸಭಾಭವನ ದಲ್ಲಿ ನಡೆದ ಉಚ್ಚಿಲ ಬ್ರಹ್ಮಶ್ರೀ ನಾರಾಯಣ ಗುರು ಸ್ವಾಮಿ ಬಿಲ್ಲವರ ಸೇವಾ ಸಂಘದ ವತಿಯಿಂದ ನಡೆದ ವಾರ್ಷಿಕ ಮಹಾಸಭೆಯಲ್ಲಿ ವಿದ್ಯಾರ್ಥಿ ವೇತನ ವಿತರಿಸಿ ಅವರು ಮಾತನಾಡಿದರು. ಸಂಘದ ಅಧ್ಯಕ್ಷ ಬಾಲಕೃಷ್ಣ ಜಿ. ಪೂಜಾರಿ ಮಾತನಾಡಿ, ಅಕ್ಷರದ ಜೊತೆ ವಿದ್ಯಾರ್ಥಿಗಳು ಶುದ್ಧ ಮನಸ್ಸುಳ್ಳವ ರಾಗಬೇಕು. ದಾನಿಗಳಿಗೆ ಕೈಯೊಡ್ಡಿ ಸಂಘದ ವತಿಯಿಂದ ನೀಡುತ್ತಿರುವ ಈ ಶೈಕ್ಷಣಿಕ ಪುರಸ್ಕಾರದ ಪ್ರೋತ್ಸಾಹವನ್ನು ಜೀವನವೀಡೀ ಸ್ಮರಿಸುವುದರ ಜೊತೆಗೆ ಸಮಾಜಮುಖಿಯಾಗಿ ಬೆಳೆದು ನಿಲ್ಲಬೇ ಕೆಂದು ಆಶಿಸಿದರು.

ಕಾರ್ಯಕ್ರಮದಲ್ಲಿ ಸಮಾಜದ 48 ವಿದ್ಯಾರ್ಥಿಗಳಿಗೆ ವಿದ್ಯಾರ್ಥಿ ವೇತನ, ಪ್ರತಿಭಾ ಪುರಸ್ಕಾರ, ಶೈಕ್ಷಣಿಕ ಪರಿಕರ ವಿತರಿಸಲಾಯಿತು. ಅನಿವಾಸಿ ಭಾರ ತೀಯ ರತ್ನಾಕರ ಕೋಟ್ಯಾನ್, ದಾನಿ ಗಳಾದ ಕರುಣಾಕರ ಕೋಟ್ಯಾನ್, ವಸಂತ ಪೂಜಾರಿ ದೇಜಾಡಿ, ನಾಗೇಶ್ ಕೋಟ್ಯಾನ್, ಸಂಘದ ಉಪಾಧ್ಯಕ್ಷ ಮುದ್ದು ಪೂಜಾರಿ, ಜೊತೆ ಕಾರ್ಯದರ್ಶಿ ಉಷಾ ಆರ್. ಕೋಟ್ಯಾನ್, ಮಹಿಳಾ ಮಂಡಳಿಯ ಉಪಾಧ್ಯಕ್ಷೆ ಗುಣವತಿ ಚಂದ್ರಶೇಖರ ಕೋಟ್ಯಾನ್, ವಿನೋದ ಶೇಖರ, ಸುಧಾಕರ ಕೋಟ್ಯಾನ್, ಮಿಥುನ್ ಕೋಟ್ಯಾನ್, ಚಂದ್ರಶೇಖರ ಕೋಟ್ಯಾನ್ ಉಪಸ್ಥಿತರಿದ್ದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.