ADVERTISEMENT

ಪಾಕಶಾಲೆ ಪರಿಕರಗಳು ಕಲಾ ಶ್ರೀಮಂತಿಕೆ ಪ್ರತೀಕ

ಅಡುಗೆ ಪರಿಕರ ಸಂಗ್ರಹಾಲಯ: ಬಾಣಸಿಗ ವಿಕಾಸ್‌ ಖನ್ನಾ

​ಪ್ರಜಾವಾಣಿ ವಾರ್ತೆ
Published 7 ಏಪ್ರಿಲ್ 2018, 11:42 IST
Last Updated 7 ಏಪ್ರಿಲ್ 2018, 11:42 IST

ಉಡುಪಿ: ‘ಪೂರ್ವಿಕರು ದಿನನಿತ್ಯ ಅಡುಗೆಗೆ ಬಳುಸುತ್ತಿದ್ದ ಹಾಗೂ ಈಗ ಬಳಕೆಯಾಗುತ್ತಿರುವ ಪಾಕ ಶಾಲೆಯ ಪರಿಕರಗಳನ್ನು ಸಂರಕ್ಷಿಸಿ ಮುಂದಿನ ಪೀಳಿಗೆಗೂ ಪರಿಚಯಿಸುವ ಜವಾಬ್ದಾರಿ ನಮ್ಮ ಮೇಲಿದೆ’ ಎಂದು ಅಂತರರಾಷ್ಟ್ರೀಯ ಖ್ಯಾತಿಯ ಬಾಣಸಿಗ ವಿಕಾಸ್‌ ಖನ್ನಾ ಹೇಳಿದರು.

ಮಣಿಪಾಲ ಉನ್ನತ ಶಿಕ್ಷಣ ಸಂಸ್ಥೆ ಹಾಗೂ ವೆಲ್‌ಕಮ್‌ ಗ್ರೂಪ್‌ ಗ್ರಾಜುಯೇಟ್‌ ಸ್ಕೂಲ್‌ ಆಫ್‌ ಹೋಟೆಲ್‌ ಅಡ್ಮಿನಿಸ್ಟ್ರೇಶನ್ ಸಂಸ್ಥೆ ಸಹಯೋಗದಲ್ಲಿ ನಿರ್ಮಿಸಲಾದ ಪುರಾತನ ಅಡುಗೆ ಪರಿಕಗಳ ವಿಭಾಗ(ಕಲಿನರಿ ಆರ್ಟ್ಸ್‌) ಮತ್ತು ವಸ್ತು ಸಂಗ್ರಹಾಲಯದ ನೂತನ ಕಟ್ಟಡವನ್ನು ಉದ್ಘಾಟಿಸಿ ಮಾತನಾಡಿದರು.

ಭಾರತ ದೇಶದ ಸಂಸ್ಕೃತಿ ಅತ್ಯಂತ ಶ್ರೀಮಂತವಾಗಿದೆ. ಆಚಾರ ವಿಚಾರಗಳನ್ನು ತೆಗೆದುಕೊಂಡರೆ ಸಮುದಾಯದಿಂದ ಸಮುದಾಯಕ್ಕೆ ಸಾಕಷ್ಟು ಅಂತರವಿದೆ. ಅಡುಗೆಗೆ ಬಳಸುವ ಸಲಕರಣೆಗಳಲ್ಲಿ ಸಹ ವಿಭಿನ್ನತೆ ಇದೆ. 700 ವರ್ಷಗಳ ಮಣ್ಣಿನ ಪಾತ್ರೆಗಳು ಇನ್ನೂ ಹಾಳಾಗದೆ ಉಳಿದಿವೆ. ಆ ಕಲಾ ಶ್ರೀಮಂತಿಕೆಯನ್ನು ಒಂದು ಸೂರಿನಡಿಯಲ್ಲಿ ನೋಡುವುದೇ ಕಣ್ಣಿಗೆ ಹಬ್ಬವಾಗಿರುತ್ತದೆ ಎಂದು ಅಭಿಪ್ರಾಯಟ್ಟರು.

ADVERTISEMENT

ಇಲ್ಲಿಯವರೆಗೆ ಭಾರತದ ವಸ್ತು ಪ್ರದರ್ಶನದಲ್ಲಿ ದೇಶದ ಸಂಸ್ಕೃತಿಯನ್ನು ಬಿಂಬಿಸುವ ಚಿನ್ನಾಭರಣ, ವಸ್ತ್ರಗಳ ಪ್ರದರ್ಶನ ಏರ್ಪಡಿಸಲಾಗುತ್ತಿತ್ತು. ಸಾವಿರಾರು ವರ್ಷಗಳ ಇತಿಹಾಸವಿರುವ ಅಡುಗೆ ಪರಿಕರಗಳನ್ನು ಹೋಟೆಲ್ ನಿರ್ವಹಣಾ ಕಾಲೇಜಿನಲ್ಲಿ ಇಡಲಾಗಿದೆ. ಈ ಪರಿಕಗಳು ಮುಂದಿನ ದಿನದಲ್ಲಿ ಆಯೋಜಿಸುವ ವಸ್ತು ಪ್ರದರ್ಶನದಲ್ಲಿ ಪಾಲ್ಗೊಳ್ಳುವಂತಾಗಬೇಕು ಎಂದರು.

ಮಾಹೆ ಸಹಕುಲಪತಿ ಡಾ.ಎಚ್‌.ಎಸ್‌ ಬಾಲ್ಲಾಳ್‌, ಕುಲಸಚಿವ ಡಾ. ನಾಯಾಣ ಸಭಾಹಿತ್‌, ಸಹ ಕುಲಪತಿ ಪೂರ್ಣಿಮಾ ಬಾಳಿಗಾ, ಇಂದಿರಾ ಬಲ್ಲಾಳ್‌ ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.