ADVERTISEMENT

ಪ್ರವಾಸಿಗರ ಮಾಹಿತಿಗೆ ‘ಟೂರಿಸ್ಟ್ ಮಿತ್ರರ’ ನೇಮಕ

​ಪ್ರಜಾವಾಣಿ ವಾರ್ತೆ
Published 9 ಜೂನ್ 2018, 8:05 IST
Last Updated 9 ಜೂನ್ 2018, 8:05 IST

ಉಡುಪಿ: ಜಿಲ್ಲೆಯ ಪ್ರವಾಸಿ ತಾಣಗಳಲ್ಲಿ ಸುರಕ್ಷತೆ ಹಾಗೂ ಪ್ರವಾಸಿಗರಿಗೆ ಮಾರ್ಗದರ್ಶನ ನೀಡುವ ನಿಟ್ಟಿನಲ್ಲಿ ಪ್ರವಾಸೋದ್ಯಮ ಇಲಾಖೆಯಿಂದ ‘ಟೂರಿಸ್ಟ್ ಮಿತ್ರ’ ಗೃಹರಕ್ಷಕರನ್ನು ನಿಯೋಜನೆಗೊಳಿಸಿದೆ.

ಮಳೆಗಾಲದಲ್ಲಿ ಪ್ರವಾಸಿ ತಾಣಗಳಲ್ಲಿ ಸುರಕ್ಷಿತ ಪ್ರವಾಸೋ ದ್ಯಮ ವಾತಾವರಣ ಹಾಗೂ ಭದ್ರತಾ ದೃಷ್ಟಿಯಿಂದ ಪ್ರವಾಸಿ ಮಿತ್ರರನ್ನು ನೇಮಕ ಮಾಡ ಲಾಗಿದೆ. ಈಗಾಗಲೇ ಇವರಿಗೆ ಅಗತ್ಯ ತರಬೇತಿ ನೀಡಲಾಗಿದ್ದು, ಪ್ರವಾಸಿ ಗರಿಗೆ ಅಗತ್ಯ ಮಾರ್ಗದರ್ಶನ ನೀಡಲಿದ್ದಾರೆ.

ಜಿಲ್ಲೆಯಲ್ಲಿ 20 ಪ್ರವಾಸಿ ಮಿತ್ರರು ವಿವಿಧ ಪ್ರವಾಸಿ ತಾಣದಲ್ಲಿ ಕರ್ತವ್ಯ ನಿವರ್ಹಿಸಲಿದ್ದಾರೆ. ಜಿಲ್ಲಾಡಳಿತ ಮೆಗಾ ಫೋನ್‌ ವಿತರಿಸಿದ್ದರೆ, ಕರಾವಳಿ ಪ್ರವಾಸೋದ್ಯಮ ಸಮಿತಿಯ ಮನೋಹರ್ ಶೆಟ್ಟಿ ಪ್ರವಾಸಿ ಸಮವಸ್ತ್ರ, ಕ್ಯಾಪ್ ಹಾಗೂ ಬೆಲ್ಟ್‌ಗಳನ್ನು ಕೊಡುಗೆ ನೀಡಿದ್ದಾರೆ. ಪರಿಕರಗಳನ್ನು ಜಿಲ್ಲಾಧಿಕಾರಿ ಪ್ರಿಯಾಂಕ ಮೇರಿ ಫ್ರಾನ್ಸಿಸ್ ಈಚೆಗೆ ನಡೆದ ಕಾರ್ಯಕ್ರಮದಲ್ಲಿ ವಿತರಿಸಿದರು.

ADVERTISEMENT

ಕುಂದಾಪುರ ಉಪ ವಿಭಾಗಾ ಧಿಕಾರಿ ಭೂ ಬಾಲನ್, ಹೆಚ್ಚುವರಿ ಜಿಲ್ಲಾಧಿಕಾರಿ ಅನುರಾಧ, ಎಎಸ್‌ಪಿ ಕುಮಾರ್ ಚಂದ್ರ, ಪ್ರವಾಸೋದ್ಯಮ ಇಲಾಖೆಯ ಸಹಾಯಕ ನಿರ್ದೇಶಕಿ ಅನಿತಾ ಉಪಸ್ಥಿತರಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.