ಉಡುಪಿ: ಮಲ್ಪೆ, ಕೋಡಿ ಕನ್ಯಾಯ ಬಂದರಿನ ಹೂಳೆತ್ತಲು (ಡ್ರೆಜ್ಜಿಂಗ್) ಹಣ ಮಂಜೂರಾಗಿದ್ದರೂ ಕೆಲಸ ಆರಂಭಿಸದಿ ರುವುದಕ್ಕೆ ಹಾಗೂ ರಾಷ್ಟ್ರೀಯ ಮಾಧ್ಯ ಮಿಕ ಶಿಕ್ಷಣ ಅಭಿಯಾನದಲ್ಲಿ ಮಂಜೂ ರಾಗಿರುವ ಶಾಲಾ ಕೊಠಡಿಗಳ ನಿರ್ಮಾಣ ಕಾಮಗಾರಿ ಪೂರ್ಣವಾಗದಿರುವುದಕ್ಕೆ ಸಂಸದೆ ಶೋಭಾ ಕರಂದ್ಲಾಜೆ ತೀವ್ರ ಅಸಮಾಧಾನ ವ್ಯಕ್ತಪಡಿಸಿದರು.
ಜಿಲ್ಲಾ ಪಂಚಾಯಿತಿ ಸಭಾಂಗಣದಲ್ಲಿ ಶುಕ್ರವಾರ ನಡೆದ ಜಿಲ್ಲಾ ಜಾಗೃತ ಮತ್ತು ಉಸ್ತುವಾರಿ ಸಮಿತಿ ಸಭೆಯ ಅಧ್ಯಕ್ಷತೆ ವಹಿಸಿ ಮಾತನಾಡಿದ ಅವರು, ಮಲ್ಪೆ ಹಾಗೂ ಕೋಡಿಕನ್ಯಾನ ಬಂದರಿನ ಹೂಳೆತ್ತುವ ಕಾಮಗಾರಿಗೆ ಕ್ರಮವಾಗಿ ₨ 2.15 ಕೋಟಿ ಹಾಗೂ ₨6 ಕೋಟಿ ಬಿಡು ಗಡೆಯಾಗಿದೆ. ಆದರೂ ಏಕೆ ಕೆಲಸ ಆರಂ ಭಿಸಿಲ್ಲ ಎಂದು ಅಧಿಕಾರಿಗಳನ್ನು ಪ್ರಶ್ನಿಸಿ ದರು. ಆದಷ್ಟು ಬೇಗ ಕೆಲಸ ಆರಂಭಿಸಿ ಮೀನುಗಾರರಿಗೆ ಅನುಕೂಲ ಮಾಡಿ ಕೊಡಿ ಎಂದು ಸೂಚನೆ ನೀಡಿದರು.
ಮಾಧ್ಯಮಿಕ ಶಿಕ್ಷಣ ಅಭಿಯಾನ ಯೋಜನೆಯಲ್ಲಿ 2012–13ರಲ್ಲಿ ಆರಂಭಿ ಸಿದ 40 ಶಾಲೆಗಳ ಕೊಠಡಿ ಹಾಗೂ ಎರಡು ಶಾಲೆಗಳ ನೂತನ ಕಟ್ಟಡ ನಿರ್ಮಾಣ ಕಾಮಗಾರಿ ಇನ್ನೂ ಏಕೆ ಪೂರ್ಣವಾಗಿಲ್ಲ ಎಂದು ಅಧಿಕಾರಿಯನ್ನು ಪ್ರಶ್ನಿಸಿದರು. ಇದಕ್ಕೆ ಉತ್ತರ ನೀಡಿದ ಸರ್ವ ಶಿಕ್ಷಣ ಅಭಿಯಾನದ ಯೋಜನಾ ಸಮನ್ವಯ ಅಧಿಕಾರಿ, ಡಿಸೆಂಬರ್ ಅಂತ್ಯಕ್ಕೆ ಕಾಮಗಾರಿ ಪೂರ್ಣಗೊಳಿಸ ಲಾಗುವುದು ಎಂದು ಗುತ್ತಿಗೆದಾರರು ತಿಳಿಸಿದ್ದಾರೆ ಎಂದರು.
ನಿಯಮಬಾಹಿರವಾಗಿ ಕೊಳೆ ರೋಗದ ಪರಿಹಾರವನ್ನು ವಿತರಣೆ ಮಾಡಿರುವ ಬಗ್ಗೆ ಚರ್ಚೆ ನಡೆಯಿತು. ಅಧಿಕ ಹಣ ಪಡೆದವರಿಂದ ಹಣ ವಸೂಲಿ ಮಾಡಿ. ಯಾವ ತಹಶೀಲ್ದಾರ್ ಪರಿಹಾರ ನೀಡಿದ್ದಾರೆಯೋ ಅವರನ್ನೇ ತನಿಖೆ ಹಾಗೂ ಹಣ ವಸೂಲಿಗೆ ನೇಮಕ ಮಾಡಬೇಡಿ ಎಂದು ಅವರು ಸಲಹೆ ನೀಡಿದರು.
ಉಡುಪಿ ತಾಲ್ಲೂಕಿನಲ್ಲಿ 12 ಮಂದಿ ಯಿಂದ ಹಾಗೂ ಕುಂದಾಪುರದಲ್ಲಿ ಇಬ್ಬರಿಂದ ಹಣ ವಸೂಲಿ ಮಾಡಬೇಕಿದೆ ಎಂದು ತೋಟಗಾರಿಕಾ ಇಲಾಖೆ ಉಪ ನಿರ್ದೇಶಕರು ಉತ್ತರ ನೀಡಿದರು.
ಯಾವುದೇ ಯೋಜನೆಯ ಕಡತ ಸಚಿವಾಲಯ ಅಥವಾ ಸರ್ಕಾರದ ಮಟ್ಟದಲ್ಲಿ ಬಾಕಿ ಇದ್ದರೆ ಅದನ್ನು ಗಮನಕ್ಕೆ ತನ್ನಿ. ಪ್ರಸ್ತಾವ ಸಲ್ಲಿಸಿದ ನಂತರ ಅದಕ್ಕೆ ಒಪ್ಪಿಗೆ ಸಿಗುವ ವರೆಗೂ ಆ ವಿಷಯದ ಬಗ್ಗೆ ಗಮನ ಹರಿಸಬೇಕು ಎಂದು ಜಿಲ್ಲಾಧಿಕಾರಿ ಡಾ. ಆರ್. ವಿಶಾಲ್ ಅಧಿಕಾರಿಗಳಿಗೆ ಸೂಚನೆ ನೀಡಿದರು.
ನಗರ ಆರೋಗ್ಯ ಯೋಜನೆಯಲ್ಲಿ ಆರೋಗ್ಯ ಕೇಂದ್ರ ಆರಂಭಿಸಲು ಅವಕಾಶ ಇದೆ. ಹೆಚ್ಚಿನ ಜನರಿಗೆ ಉಪಯೋಗ ವಾಗುವಂತಹ ಜಾಗದಲ್ಲಿ ಆರೋಗ್ಯ ಕೇಂದ್ರ ತೆರಿಯಿರಿ ಎಂದು ಆರೋಗ್ಯ ಮತ್ತು ಕುಟುಂಬ ಕಲ್ಯಾಣಧಿಕಾರಿಗೆ ತಾಕೀತು ಮಾಡಿದರು.
ಕೇಂದ್ರ ಸರ್ಕಾರದಿಂದ ಬರಬೇಕಾ ಗಿರುವ ವಿದ್ಯಾರ್ಥಿ ವೇತನ ಎರಡು ವರ್ಷಗಳಿಂದ ಬಂದಿಲ್ಲ, ತಾಲ್ಲೂಕು ಕ್ರೀಡಾಂಗಣ ನಿರ್ಮಾಣಕ್ಕೆ ಮಂಜೂರಾ ಗಿದ್ದ ಅನುದಾನ ಈ ವರೆಗೆ ಬಿಡುಗಡೆಯಾಗಿಲ್ಲ ಎಂದು ಅಧಿಕಾರಿ ಗಳು ಗಮನ ಸೆಳೆದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.