ADVERTISEMENT

ಯಕ್ಷಗಾನ ಅರ್ಥಧಾರಿ ಜಬ್ಬಾರ್‌ಗೆ ಸನ್ಮಾನ

​ಪ್ರಜಾವಾಣಿ ವಾರ್ತೆ
Published 10 ಅಕ್ಟೋಬರ್ 2011, 9:55 IST
Last Updated 10 ಅಕ್ಟೋಬರ್ 2011, 9:55 IST

ಸುರತ್ಕಲ್: ಯುವಕರಿಂದ ಯಕ್ಷಗಾನದ ಭವಿಷ್ಯ ಕಾಣಬಹುದು. ಯುವಕರು ಯಕ್ಷಗಾನ ಕ್ಷೇತ್ರದ `ಟಾನಿಕ್~ ಇದ್ದಂತೆ ಎಂದು ಪ್ರಸಿದ್ಧ ಯಕ್ಷಗಾನ ಅರ್ಥಧಾರಿ ಜಬ್ಬಾರ್ ಸಮೋ ಹೇಳಿದರು.ಯಕ್ಷಮಿತ್ರರು ಸುರತ್ಕಲ್ ವತಿಯಿಂದ ಇಡ್ಯಾ ಮಹಾಲಿಂಗೇಶ್ವರ ದೇವಸ್ಥಾನದಲ್ಲಿ ಭಾನುವಾರ ನಡೆದ ಯಕ್ಷಗಾನ ತಾಳಮದ್ದಲೆ ಸಮಾರಂಭದಲ್ಲಿ ಸನ್ಮಾನ ಸ್ವೀಕರಿಸಿ ಅವರು ಮಾತನಾಡಿದರು.

ಇಡ್ಯಾ ಮಹಾಲಿಂಗೇಶ್ವರ ದೇವಸ್ಥಾನದ ಅನುವಂಶಿಕ ಅರ್ಚಕ ಐ.ರಮಾನಂದ ಭಟ್, ಗೋವಿಂದದಾಸ ಕಾಲೇಜು ನಿವೃತ್ತ ಪ್ರಾಚಾರ್ಯ ಪಿ.ಕೆ.ಮೊಯಿಲಿ, ಮುಂಬೈ ಆದಾಯ ತೆರಿಗೆ ಇಲಾಖೆ ಸಹಾಯಕ ಆಯುಕ್ತ ಕೆ.ಎಲ್.ಪೂಜಾರಿ, ಸಂಸ್ಥೆ ಗೌರವಾಧ್ಯಕ್ಷ ಮಹಾಬಲ ಪೂಜಾರಿ ಕಡಂಬೋಡಿ,

ಅಧ್ಯಕ್ಷ ನಾಗರಾಜ ಕಡಂಬೋಡಿ, ರಾಜೇಶ್ ಕುಮಾರ್, ಜಗದೀಪ್ ಶೆಟ್ಟಿ, ಪ್ರದೀಪ್ ಕುಮಾರ್, ಭಾಸ್ಕರ ಅಗರಮೇಲು, ಪ್ರಕಾಶ್ ಶೆಟ್ಟಿ, ಗಿರೀಶ್ ಸುವರ್ಣ, ಸುಭಾಷ್ ಸುವರ್ಣ, ಕುಸುಮಾಕರ ಖಂಡಿಗೆ, ವಾಸುದೇವ ಆಚಾರ್ಯ ಕುಳಾಯಿ ಇದ್ದರು

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.