ADVERTISEMENT

ಯಕ್ಷಗಾನ ಪರಿಪೂರ್ಣ ಕಲೆ

​ಪ್ರಜಾವಾಣಿ ವಾರ್ತೆ
Published 21 ಆಗಸ್ಟ್ 2012, 8:30 IST
Last Updated 21 ಆಗಸ್ಟ್ 2012, 8:30 IST

ಬೆಳ್ತಂಗಡಿ: `ಯಕ್ಷಗಾನವು ಪರಿಪೂರ್ಣ ಜಾನಪದ ಕಲೆಯಾಗಿದ್ದು ಕಥಕ್ಕಳಿಗೆ ಸಿಕ್ಕಿದಂತೆ ಯಕ್ಷಗಾನಕ್ಕೂ ಶಾಸ್ತ್ರೀಯ ಸ್ಥಾನಮಾನ ದೊರಕಬೇಕು~ ಎಂದು ಮೂಡುಬಿದಿರೆಯ ಆಳ್ವಾಸ್ ಶಿಕ್ಷಣ ಪ್ರತಿಷ್ಠಾನದ ಆಧ್ಯಕ್ಷ ಡಾ. ಎಂ. ಮೋಹನ ಆಳ್ವ ಹೇಳಿದರು.

ಉಜಿರೆಯಲ್ಲಿ ಸೋಮವಾರ ಹಿರಿಯ ಯಕ್ಷಗಾನ ಕಲಾವಿದ ಬಾಬು ಕುಡ್ತಡ್ಕ ಆವರಿಗೆ ಶೇಣಿ ಪ್ರಶಸ್ತಿ ಪ್ರದಾನ ಸಮಾ ರಂಭದಲ್ಲಿ ಆವರು ಮಾತನಾಡಿದರು.

ಶಾಲಾ- ಕಾಲೇಜುಗಳಲ್ಲಿ ಯಕ್ಷಗಾನ ತರಬೇತಿ ನೀಡಬೇಕೆಂದು ಸಲಹೆ ನೀಡಿದ ಆವರು, ಯಕ್ಷಗಾನ ಕಲೆಯನ್ನು ಉಳಿಸಿ ಬೆಳೆಸುವ ಬದ್ಧತೆ ನಮಗಿರಬೇಕು. ಆಳ್ವಾಸ್ ಶಿಕ್ಷಣ ಸಂಸ್ಥೆಗಳಲ್ಲಿ 50ಕ್ಕೂ ಮಿಕ್ಕಿ ವಿದ್ಯಾರ್ಥಿಗಳು ಯಕ್ಷಗಾನ ಪರಿಣತರಾಗಿದ್ದು ಮೂರು ಗಂಟೆ ಆವಧಿಯ ಯಕ್ಷಗಾನ ಪ್ರದರ್ಶನ ನೀಡುವ ಸಾಮರ್ಥ್ಯ ಹೊಂದಿದ್ದಾರೆ. ಹುಡುಗಿಯರು ಕೂಡಾ ಯಕ್ಷಗಾನದಲ್ಲಿ ಆಸಕ್ತಿ ಬೆಳೆಸುತ್ತಿರುವುದು ಶ್ಲಾಘನೀಯ ವಾಗಿದೆ ಎಂದರು.

ಆಭಿನಂದನಾ ಭಾಷಣ ಮಾಡಿದ ಉಜಿರೆ ಅಶೋಕ ಭಟ್, ಶೇಣಿಯವರ ಒಡನಾಡಿಯಾಗಿ ಯಕ್ಷಗಾನ ರಂಗದಲ್ಲಿ ಮೆರೆದ ಬಾಬು ಕುಡ್ತಡ್ಕ ಸರಳ ಹಾಗೂ ಸಜ್ಜನಿಕೆಯ ಕಲಾವಿದ. ನಾಟಕೀಯ ಪಾತ್ರಗಳಿಗೆ ಹೊಸ ಆಯಾಮ ನೀಡಿದ ಇವರು ಕಲಾವಿದರಾಗಿ, ತಾಳ ಮದ್ದಳೆ ಕೂಟದಲ್ಲಿ ಅರ್ಥಧಾರಿಯಾಗಿ, ವೇಷಭೂಷಣ ತಯಾರಿ ಪರಿಣತರಾಗಿ ಜನಪ್ರಿಯರಾಗಿದ್ದಾರೆ ಎಂದರು.

ರೂ. 20ಸಾವಿರ ನಗದು ಮತ್ತು ಸ್ಮರಣಿಕೆ ನೀಡಿ  ಗೌರವಿಸಲಾಯಿತು. ಸನ್ಮಾನಕ್ಕೆ ಕೃತಜ್ಞತೆ ವ್ಯಕ್ತಪಡಿಸಿದ ಬಾಬು ಕುಡ್ತಡ್ಕ, `ಶೇಣಿಯವರ ಒಡನಾಟದಿಂದ ತಾನು ಪ್ರಬುದ್ಧ ಕಲಾವಿದನಾಗಿ ಬೆಳೆಯಲು ಸಾಧ್ಯವಾ ಯಿತು. ತಾನು ರಚಿಸಿದ ಯಕ್ಷಗಾನ ಪ್ರಸಂಗಗಳಿಗೆ ಮುನ್ನುಡಿ ಬರೆದು ಶೇಣಿಯವರು ಪ್ರೋತ್ಸಾಹಿಸಿದ್ದಾರೆ~ ಎಂದು ಹೇಳಿದರು.

ಆಧ್ಯಕ್ಷತೆ ವಹಿಸಿದ ಹರಿಕೃಷ್ಣ ಪುನರೂರು, `ಯಕ್ಷಗಾನದ ಮೂಲಕ ಯುವಜನತೆಯಲ್ಲಿ ಭಾರತೀಯ ಸಂಸ್ಕೃತಿಯ ಬಗ್ಗೆ ಆರಿವು ಜಾಗೃತಿ ಮೂಡಿಸಲು ಸಾಧ್ಯ~ ಎಂದರು.

ವಿಜಯರಾಘವ ಪಡ್ವೆಟ್ನಾಯ ಮತ್ತು ಸಾಮೆತ್ತಡ್ಕ ಗೋಪಾಲಕೃಷ್ಣ ಭಟ್ ಉಪಸ್ಥಿತರಿದ್ದರು. ಬಳಿಕ ತ್ರಿಪುರ ಮಥನ ಎಂಬ ಯಕ್ಷಗಾನ ಬಯಲಾಟ ಪ್ರದರ್ಶನ ನಡೆಯಿತು.

ಶೇಣಿ ಸ್ಮೃತಿ: ಶೇಣಿ ಸಂಸ್ಮರಣ ಭಾಷಣ ಮಾಡಿದ ವಿದ್ವಾಂಸ ಡಾ. ಎಂ.ಪ್ರಭಾಕರ ಜೋಶಿ, ಯಕ್ಷಗಾನದಲ್ಲಿ ಶೇಣಿ ಸರ್ವಶ್ರೇಷ್ಠ ಕಲಾವಿದರಾಗಿದ್ದರು. ಕಲಾಚಿಂತಕರಾಗಿ ಆವರ ಕಲಾ ಸೇವೆ ಎಂದೂ ಮರೆಯಲಾಗದ ಹೊಸತನ ಕಂಡಿದೆ~ ಎಂದು ಆಭಿಪ್ರಾಯಪಟ್ಟರು.

ಬೆಳ್ಳಾರೆ ರಾಮ ಜೋಯಿಸ, ಮೂಡಂಬೈಲು ಗೋಪಾಲ ಕೃಷ್ಣ ಶಾಸ್ತ್ರಿ, ಉಜಿರೆ ಆಶೋಕ ಭಟ್, ಸುರೇಶ ಕುದ್ರೆಂತಾಯ ಯಕ್ಷಗಾನ ರಂಗಕ್ಕೆ ಶೇಣಿಯವರ ಕೊಡುಗೆ ಸ್ಮರಿಸಿದರು.
 

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.