ADVERTISEMENT

`ವಿದ್ಯಾರ್ಥಿ ದೆಸೆಯಲ್ಲೇ ನಾಯಕತ್ವ ಸಂಪಾದಿಸಿ'

​ಪ್ರಜಾವಾಣಿ ವಾರ್ತೆ
Published 19 ಡಿಸೆಂಬರ್ 2012, 11:11 IST
Last Updated 19 ಡಿಸೆಂಬರ್ 2012, 11:11 IST

ಶಿರ್ವ: ಮೊಬೈಲ್, ಫೇಸ್‌ಬುಕ್‌ನಲ್ಲಿ ಹರಟೆ ಹೊಡೆಯುವ ಬದಲು ಗುಣಮಟ್ಟದ ಶಿಕ್ಷಣವನ್ನು ಪಡೆದು ಆಂತರಿಕ ಸೌಂದರ್ಯವನ್ನು  ವೃದ್ಧಿಸಿ, ಉತ್ತಮ ನಾಯಕತ್ವ ಹಾಗೂ ನಿಸ್ವಾರ್ಥ ಸೇವೆಗೆ  ವಿದ್ಯಾರ್ಥಿ ಮುಂದಾಗಬೇಕು ಎಂದು ಪುತ್ತೂರು ಸಂತ ಲೋಮಿನಾ ಕಾಲೇಜಿನ  ಭೌತಶಾಸ್ತ್ರ ಪ್ರಾಧ್ಯಾಪಕ ಡಾ.ಆಂಟನಿ ಪ್ರಕಾಶ್ ಮೊಂತೇರೊ ನುಡಿದರು.

ಶಿರ್ವ ಸಂತಮೇರಿ ಪದವಿಪೂರ್ವ ಕಾಲೇಜಿನಲ್ಲಿ ಇತ್ತೀಚೆಗೆ ವಾರ್ಷಿಕೋತ್ಸವದಲ್ಲಿ ಅವರು ಮಾತನಾಡಿದರು.
ಸಮಾರಂಭದ ಅಧ್ಯಕ್ಷತೆಯನ್ನು ವಿದ್ಯಾಸಂಸ್ಥೆಗಳ ಸಂಚಾಲಕ ಫಾದರ್ ಸ್ಟ್ಯಾನಿ ತಾವ್ರೊ ವಹಿಸಿದ್ದರು. ನಿವೃತ್ತ ಪ್ರಾಂಶುಪಾಲ ಫೆಲಿಕ್ಸ್ ಅಂದ್ರಾದೆ ಅವರನ್ನು ಸನ್ಮಾನಿಸಲಾಯಿತು. ಈ ಸಂದರ್ಭದಲ್ಲಿ ರಾಜ್ಯ ಹಾಗೂ ರಾಷ್ಟ್ರಮಟ್ಟದ ತಂಡಗಳಲ್ಲಿ ಗುರುತಿಸಿಕೊಂಡ ಕ್ರೀಡಾಪಟುಗಳಾದ ಶರಧಿ ಭಟ್ (ಕಬಡ್ಡಿ), ಡೀನ್ ಬ್ರೆಂಡನ್ ಮೆಂಡೋನ್ಸಾ (ವಾಲಿಬಾಲ್), ಫ್ರೆನಿ ಮಾರ್ಟಿಸ್ (ಫುಟ್‌ಬಾಲ್), ಮತ್ತು ನಿಶಾಂತ್ ಸುಹಾನಿ (ಹ್ಯಾಂಡ್‌ಬಾಲ್) ಅವರನ್ನು ಸನ್ಮಾನಿಸಲಾಯಿತು.

ಫ್ರೌಢಶಾಲಾ ವಿಭಾಗದ ಮುಖ್ಯಸ್ಥ ದೇವೇಂದ್ರ ನಾಯಕ್ ಸ್ವಾಗತಿಸಿದರು. ಕಾಲೇಜಿನ ಪ್ರಭಾರ ಪ್ರಾಂಶುಪಾಲರಾದ ಐರಿನ್ ಮೆಂಡೋನ್ಸಾ ವರದಿ ಓದಿದರು.  ವಿದ್ಯಾರ್ಥಿ ವೇತನ ಪಡೆದ ವಿದ್ಯಾರ್ಥಿಗಳನ್ನು ಪ್ಲೇವಿ ಪುರ್ಟಾಡೊ ಪರಿಚಯಿಸಿದರು. ಶಿಕ್ಷಕ ಗಿಲ್ಬರ್ಟ್ ಪಿಂಟೊ, ರಿಯಾನ್ ಕ್ವಾಡ್ರಸ್, ಪ್ಯಾಟ್ಸಿ, ಪವನ್‌ರಾಜ್  ಸ್ಪರ್ಧಾ ವಿಜೇತರನ್ನು ಪರಿಚಯಿಸಿದರು. ಕಾಲೇಜು ವಿಭಾಗದ ನಾಯಕ ಅನುಷ್ ಶೆಟ್ಟಿ ಇದ್ದರು. ಪ್ರಾಂಕ್‌ಲಿನ್, ಪ್ರನ್ಸಿಟಾ ನಿರೂಪಿಸಿದರು. ಫ್ರೌಢಶಾಲಾ ನಾಯಕ  ಸುಜಿತ್ ಕ್ವಾಡ್ರಸ್ ಧನ್ಯವಾದ ಅರ್ಪಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.