ADVERTISEMENT

ವೈಜ್ಞಾನಿಕ ವಿಧಾನದಿಂದ ಧಾನ್ಯ ಸಂಗ್ರಹ: ಸಲಹೆ

​ಪ್ರಜಾವಾಣಿ ವಾರ್ತೆ
Published 6 ಜುಲೈ 2013, 6:54 IST
Last Updated 6 ಜುಲೈ 2013, 6:54 IST

ಬ್ರಹ್ಮಾವರ: ಅನಾದಿ ಕಾಲದಿಂದಲೂ ಧಾನ್ಯಗಳ ಸಂಗ್ರಹಣೆ ಮಾಡಿಕೊಂಡು ನಾವು ಬರುತ್ತಿದ್ದೇವೆ. ಅದನ್ನೇ ವೈಜ್ಞಾನಿಕ ರೀತಿಯಲ್ಲಿ ಸಂಗ್ರಹಣೆ ಮಾಡಿದಾಗ ಹೆಚ್ಚಿನ ದಿನಗಳ ಕಾಲ ಧ್ಯಾನ್ಯಗಳನ್ನು ಕೀಟ ಬಾಧೆಯಿಂದ ರಕ್ಷಿಸಬಹುದು ಎಂದು ಬ್ರಹ್ಮಾವರ ವಲಯ ಕೃಷಿ ಸಂಶೋಧನಾ ಕೇಂದ್ರದ ಸಹ ಸಂಶೋ ಧನಾ ನಿರ್ದೇಶಕ ಡಾ.ಎಂ.ಹನು ಮಂತಪ್ಪ ಹೇಳಿದರು.

ಬ್ರಹ್ಮಾವರ ಕೃಷಿ ವಿಜ್ಞಾನ ಕೇಂದ್ರ ಮತ್ತು ಬೆಂಗಳೂರು ಕೇಂದ್ರ ಉಗ್ರಾಣ ನಿಗಮದ ಸಹಯೋಗದೊಂದಿಗೆ ಗುರು ವಾರ ನಡೆದ ಕೊಯ್ಲಿನ ನಂತರದ ನಷ್ಟ ಗಳನ್ನು ಕಡಿಮೆಗೊಳಿಸುವ ತಾಂತ್ರಿಕತೆಗಳ ತರಬೇತಿಗೆ ಚಾಲನೆ ನೀಡಿ ಅವರು ಮಾತನಾಡಿದರು.
ಬೆಂಗಳೂರು ಕೇಂದ್ರ ಉಗ್ರಾಣ ನಿಗಮ ಮಂಡಳಿಯ ಅಧೀಕ್ಷಕ ಡಿ.ಕೆ.ಸಲೀಂ ಉಗ್ರಾಣದ ನಿಗಮ ಮತ್ತು ಚಟುವಟಿಕೆಗಳ ಬಗ್ಗೆ ತಿಳಿಸಿಕೊಟ್ಟರು.

ಕೃಷಿ ಕೇಂದ್ರದ ಸಹ ಪ್ರಾಧ್ಯಾಪಕ ಡಾ.ಯು.ಎಸ್.ಪಾಟೀಲ್ ಆಹಾರ ಭದ್ರತೆಯನ್ನು ಒದಗಿಸುವಲ್ಲಿ ಉಗ್ರಾಣ ಗಳು ಮಹತ್ವದ ಪಾತ್ರವಹಿಸುತ್ತವೆ ಎಂದು ಅಭಿಪ್ರಾಯಪಟ್ಟರು. ಕಾರ್ಯ ಕ್ರಮ ಸಂಯೋಜಕಿ ಡಾ.ವಿಜಯಲಕ್ಷ್ಮೀ ಎನ್ ಹೆಗಡೆ, ಉಗ್ರಾಣ ವ್ಯವಸ್ಥಾಪಕ ಎಚ್.ಗಂಗಾಧರ್ ಉಪಸ್ಥಿತರಿದ್ದರು.

ಡಾ.ರಾಜಶೇಖರ್ ಟಿ. ಬಸಾ ನಾಯಕ್ ಸ್ವಾಗತಿಸಿದರು. ಮಹೇಶ್ವರ ಕೆ.ಜೆ ವಂದಿಸಿದರು. ಸಂಜೀವ ಕ್ಯಾತಪ್ಪ ನವರ್ ನಿರೂಪಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.