ADVERTISEMENT

ಶೈಕ್ಷಣಿಕ ಅಭಿವೃದ್ಧಿಗೆ ಸಚಿವ ಸೊರಕೆ ಸಲಹೆ

​ಪ್ರಜಾವಾಣಿ ವಾರ್ತೆ
Published 20 ಸೆಪ್ಟೆಂಬರ್ 2013, 10:15 IST
Last Updated 20 ಸೆಪ್ಟೆಂಬರ್ 2013, 10:15 IST

ಉಡುಪಿ: ವಿಶ್ವಕರ್ಮ ಸಮಾಜ ಸೇವಾ ಸಂಘ ಹಿರೇಬೆಟ್ಟಿನಲ್ಲಿ ನಿರ್ಮಾಣ ಮಾಡುವ ವಿಶ್ವಕರ್ಮ ಕಲಾಕೇಂದ್ರ ಹಾಗೂ ಸಮುದಾಯ ಭವನದ ಶಿಲಾನ್ಯಾಸವನ್ನು ಸಚಿವ ವಿನಯ ಕುಮಾರ್ ಸೊರಕೆ ಸೋಮವಾರ ನೆರವೇರಿಸಿದರು.

ನಂತರ ನಡೆದ ಸಭಾ ಕಾರ್ಯಕ್ರಮದಲ್ಲಿ ಮಾತನಾಡಿದ ಸೊರಕೆ ವಿಶ್ವಕರ್ಮ ಸಮಾಜದ ಸದಸ್ಯರು ಅನೋನ್ಯತೆ ಹಾಗೂ ಪರಿಶ್ರಮದ ಮೂಲಕ ಸಮಾಜದ ಅಭಿವೃದ್ಧಿಗೆ ಶ್ರಮಿಸಬೇಕು ಎಂದರು.

ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿ ಮಾತನಾಡಿದ ಉಡುಪಿ ಮತ್ತು ದಕ್ಷಿಣ ಕನ್ನಡ ಜಿಲ್ಲೆಯ ವಿಶ್ವಕರ್ಮ ಒಕ್ಕೂಟದ ಅಧ್ಯಕ್ಷ ಯೊಗೀಶ್ ಆಚಾರ್ಯ ವಿಶ್ವಕರ್ಮ ಸಮಾಜಬಾಂಧವರು ಶೈಕ್ಷಣಿಕವಾಗಿ ಅಭಿವೃದ್ಧಿಯ ಜೊತೆಗೆ ಸಮಾಜದ ಕಸೂತಿ ಕೆಲಸದ ಬಗ್ಗೆ ಹೆಚ್ಚು ಒತ್ತು ನೀಡಬೇಕು ಎಂದರು.

ಉದ್ಯಮಿ ಶಿವಪ್ರಸಾದ್ ಹೆಗ್ಡೆ, ಉಡುಪಿ ತಾಲ್ಲೂಕು ಪಂಚಾಯಿತಿ ಸದಸ್ಯ ಗುರುದಾಸ ಭಂಡಾರಿ, 38ನೇ ಆತ್ರಾಡಿ ಹಿರೇಬೆಟ್ಟಿನ ಗ್ರಾಮ ಪಂಚಾಯಿತಿ ಅಧ್ಯಕ್ಷೆ ಕುಸುಮ ಪೂಜಾರಿ, ವಕೀಲ ಎಚ್. ಎಂ. ಗಂಗಾಧರ , ಹಿರೇಬೆಟ್ಟು ವಿಶ್ವಕರ್ಮ ಬ್ರಾಹ್ಮಣ ಸಮಾಜ ಸೇವಾ ಸಂಘ ಅಧ್ಯಕ್ಷ  ಎನ್‌ ವಾಸುದೇವ ಆಚಾರ್ಯ ಪರ್ಕಳ, ಉಪಾಧ್ಯಕ್ಷ ಶ್ಯಾಮರಾಯ ಬಾಳ್ಕಟ್ಟ, ಗ್ರಾಮದ ಮೊಕ್ತೇಸರ ನಲ್ಲೂರು ಎನ್‌. ಮಂಜು ನಾಥ ಆಚಾರ್ಯ ಉಪಸ್ಥಿತರಿದ್ದರು.

ಯಜ್ಞನಾಥ ಆಚಾರ್ಯ ಸ್ವಾಗತಿ ಸಿದರು. ಪ್ರದೀಪ್ ಆಚಾರ್ಯ ಕಾರ್ಯ ಕ್ರಮ ನಿರೂಪಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.