ADVERTISEMENT

ಸಮಾಜೋತ್ಸವಕ್ಕೆ ಬಂದವರಿಗೆಲ್ಲ ಹೊಟ್ಟೆ ತುಂಬ ಭೋಜನ

​ಪ್ರಜಾವಾಣಿ ವಾರ್ತೆ
Published 27 ನವೆಂಬರ್ 2017, 5:40 IST
Last Updated 27 ನವೆಂಬರ್ 2017, 5:40 IST
ಶೋಭಾ ಕರದ್ಲಾಂಜೆ
ಶೋಭಾ ಕರದ್ಲಾಂಜೆ   

ಉಡುಪಿ: ‘ಪ್ರಧಾನ ಮಂತ್ರಿ ನರೇಂದ್ರ ಮೋದಿ ಹುಲಿ ಹಾಗೂ ಮುಖ್ಯಮಂತ್ರಿ ಸಿದ್ದರಾಮಯ್ಯ ಇಲಿ ಇದ್ದಂತೆ. ಆದ್ದರಿಂದ ಅವರಿಬ್ಬರನ್ನು ಹೋಲಿಕೆ ಮಾಡುವುದು ಸರಿಯಲ್ಲ’ ಎಂದು ಸಂಸದೆ ಶೋಭಾ ಕರಂದ್ಲಾಜೆ ವ್ಯಂಗ್ಯವಾಡಿದರು.

ಇಲ್ಲಿ ನಡೆಯುತ್ತಿರುವ ಧರ್ಮ ಸಂಸತ್‌ನಲ್ಲಿ ಪಾಲ್ಗೊಂಡಿದ್ದ ಸಂಸದೆ ಶೋಭಾ ಕರಂದ್ಲಾಜೆ ಅವರು ಭಾನುವಾರ ಪತ್ರಕರ್ತರೊಂದಿಗೆ ಮಾತನಾಡಿ, ‘ರಚನಾ ಸಭೆ ಸಂವಿಧಾನವನ್ನು ಅಂಗೀಕರಿಸಿದ ದಿನದ ಅಂಗವಾಗಿ ಭಾನುವಾರ ಕೇಂದ್ರ ಸರ್ಕಾರ ಪ್ರಕಟಿಸಿರುವ ಜಾಹೀರಾತಿನಲ್ಲಿ ಪ್ರಧಾನಿ ಅವರ ಭಾವಚಿತ್ರ ಚಿಕ್ಕದಾಗಿದೆ. ಆದರೆ, ರಾಜ್ಯ ಸರ್ಕಾರ ನೀಡಿರುವ ಜಾಹೀರಾತಿನಲ್ಲಿ ಮುಖ್ಯಮಂತ್ರಿ ಅವರ ಚಿತ್ರ ದೊಡ್ಡದಾಗಿದೆ ಮತ್ತು ಅವರ ಚಿತ್ರ ಮಾತ್ರವಿದೆ. ಅಂಬೇಡ್ಕರ್ ಅವರ ಛಾಯಾಚಿತ್ರ ಬಳಸದೆ ಅವಮಾನ ಮಾಡಲಾಗಿದೆ’ ಎಂದು ಹೇಳಿದರು.

‘ಸಿಎಂ ಸಿದ್ದರಾಮಯ್ಯ ತಾನೊಬ್ಬ ದೊಡ್ಡ ನಾಯಕರೆಂದು ಪೋಸ್‌ ನೀಡುತ್ತಿದ್ದಾರೆ. ಅವರು ಅಂಬೇಡ್ಕರ್‌ಗಿಂತ ದೊಡ್ಡ ವ್ಯಕ್ತಿನಾ? ಕಾಂಗ್ರೆಸ್‌ನಿಂದ ಅಂಬೇಡ್ಕರ್‌ಗೆ ನಿರಂತರ ಅವಮಾನವಾಗುತ್ತಿದೆ. ಆದ್ದರಿಂದ ಸಿಎಂ ರಾಜ್ಯದ ಜನತೆಯ ಕ್ಷಮೆಯಾಚಿಸಬೇಕು’ ಎಂದು ಆಗ್ರಹಿಸಿದರು.

ADVERTISEMENT

ಉಡುಪಿ: ಸಮಾಜೋತ್ಸವದಲ್ಲಿ ಭಾಗವಹಿಸಲು ಬಂದಿದ್ದವರಿಗೆಲ್ಲ ಭೋಜನದ ವ್ಯವಸ್ಥೆ ಮಾಡಲಾಗಿತ್ತು. ಕಾರ್ಕಳ, ಕುಂದಾಪುರ, ಮಂಗಳೂರು ಹಾಗೂ ಇತರ ಜಿಲ್ಲೆಗಳಿಂದಲೂ ಭಾರಿ ಸಂಖ್ಯೆಯಲ್ಲಿ ಕಾರ್ಯಕರ್ತರು ಉಡುಪಿಗೆ ಬಂದಿದ್ದರು. ಮಂಗಳೂರಿನಿಂದ ಬಂದವರಿಗೆ ಉದ್ಯಾವರದ ಸೇತುವೆ ಬಳಿ ಊಟ ಮಾಡಲು ವ್ಯವಸ್ಥೆಯಾಗಿತ್ತು.

ಬೈಂದೂರು, ಕುಂದಾಪುರದಿಂದ ಬಂದವರು ಕಲ್ಯಾಣಪುರ ಎಸ್‌ವಿಡಿ ಶಾಲೆ ಮೈದಾನದಲ್ಲಿ ಊಟ ಮಾಡಿದರು. ಕಾರ್ಕಳ, ಹೆಬ್ರಿ, ಮೂಡಬಿದಿರೆಯಿಂದ ಬಂದಿದ್ದವರು ಪರ್ಕಳದ ಶಾಲೆಯಲ್ಲಿ ಊಟ ಸವಿದರು. ನಾಲ್ಕೂ ಕೇಂದ್ರಗಳು ಸೇರಿ ಸುಮಾರು ಒಂದು ಲಕ್ಷ ಜನರಿಗೆ ಆಗುವಂತೆ ಊಟ ತಯಾರಿಸಲಾಗಿತ್ತು. ಧರ್ಮ ಸಂಸತ್ ನಡೆದ ರಾಯಲ್ ಗಾರ್ಡನ್‌ನ ‘ಕೃಷ್ಣ ಪ್ರಸಾದಂ’ ಅನ್ನ ಕೇಂದ್ರದಲ್ಲಿಯೂ ಸಂತರು ಹಾಗೂ ಸ್ವಯಂ ಸೇವಕರಿಗೆ ಭೋಜನದ ವ್ಯವಸ್ಥೆ ಮಾಡಲಾಗಿತ್ತು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.