ADVERTISEMENT

`ಸಾಮೂಹಿಕ ಪ್ರಾರ್ಥನೆಯಿಂದ ಕಷ್ಟ ದೂರ'

ಅಮೃತ ಸಂಜೀವಿನಿ ಮೃತ್ಯುಂಜಯ ಮಹಾಯಾಗ

​ಪ್ರಜಾವಾಣಿ ವಾರ್ತೆ
Published 17 ಡಿಸೆಂಬರ್ 2012, 10:43 IST
Last Updated 17 ಡಿಸೆಂಬರ್ 2012, 10:43 IST

ಶಿರ್ವ: ಉಡುಪಿ ತಾಲೂಕಿನ ಶಿರ್ವ ಸಮೀಪದ ಕುತ್ಯಾರು  ಪರಶುರಾಮೇಶ್ವರ ಕ್ಷೇತ್ರದಲ್ಲಿ ಪ್ರಕೃತಿ ವಿಕೋಪ ಪರಿಹಾರಾರ್ಥ ಹಾಗೂ ವಿಶ್ವ ಮನುಕುಲದ ಕಲ್ಯಾಣಾರ್ಥ ವಿವಿಧ ಧಾರ್ಮಿಕ ಕಾರ್ಯಕ್ರಮಗಳು ಕಳತ್ತೂರು ವೇದಮೂರ್ತಿ ಕರುಣಾಕರ ತಂತ್ರಿಯವರ  ಮಾರ್ಗದರ್ಶನದಲ್ಲಿ ಭಾನುವಾರ ಆರಂಭಗೊಂಡವು.

ಸೂರ್ಯ ಭಗವಾನ್‌ಗೆ  ಸೌರಸೂಕ್ತ ಯಾಗ, ಮೃತ್ಯುಂಜಯ ಶಿವನಿಗೆ  ಅಮೃತ ಸಂಜೀವಿನಿ ಹಾಗೂ ಪರಶುರಾಮ ದೇವರಿಗೆ ಕುಂಭಾಭಿಷೇಕ, ಪರಶುರಾಮೇಶ್ವರ ದೇವರಿಗೆ ಕಲಶಾಭಿಷೇಕ ಮುಂತಾದ ಕಾರ್ಯಕ್ರಮಗಳು ಆರಂಭಗೊಂಡವು.
ಮಾಜಿ ಮುಖ್ಯಮಂತ್ರಿ ಡಿ.ವಿ.ಸದಾನಂದ ಗೌಡ ಪರಶುರಾಮ ದೇವರಿಗೆ ಕಲಶಾಭಿಷೇಕ ನೆರವೇರಿಸುವ ಮೂಲಕ ಚಾಲನೆ ನೀಡಿದರು.

ಕಾಪು ಶಾಸಕ ಲಾಲಾಜಿ ಆರ್. ಮೆಂಡನ್, ಮಾಜಿ ಸಚಿವ ವಸಂತ ವಿ.ಸಾಲಿಯಾನ್,  ಉಡುಪಿ ಜಿಲ್ಲಾ ಪಂಚಾಯಿತಿ ಮಾಜಿ ಅಧ್ಯಕ್ಷ ಕಟಪಾಡಿ ಶಂಕರ ಪೂಜಾರಿ, ಬಳ್ಳಾರಿಯ ಉದ್ಯಮಿ ಗುರ್ಮೆ ಸುರೇಶ ಶೆಟ್ಟಿ ಜಿಲ್ಲಾ ಪಂಚಾಯಿತಿ ಸದಸ್ಯೆ ಗೀತಾಂಜಲಿ ಸುವರ್ಣ, ಉದ್ಯಮಿ ಎಸ್.ಕೆ ಸಾಲಿಯಾನ್, ಧರ್ಮದರ್ಶಿ ಶಂಭುದಾಸ್ ಗುರೂಜಿ ಹಾಗೂ ಧಾರ್ಮಿಕ ಅನುಷ್ಠಾನ ಸಮಿತಿ ಅಧ್ಯಕ್ಷ ಎರ್ಮಾಳು ಬೀಡು ಅಶೋಕ್‌ರಾಜ್ ಸಾಮೂಹಿಕವಾಗಿ ಪರಶುರಾಮ ದೇವರಿಗೆ ಕಲಶಾಭಿಷೇಕ ನೆರವೇರಿಸುವ ಮೂಲಕ ಚಾಲನೆ ನೀಡಿದರು.

ಈ ಸಂದರ್ಭದಲ್ಲಿ ಸಂಚಾಲಕರಾದ ಕುತ್ಯಾರು ನವೀನ್ ಶೆಟ್ಟಿ, ಕೊಲ್ಲಬೆಟ್ಟು ರವೀಂದ್ರ ಶೆಟ್ಟಿ, ಉಪಾಧ್ಯಕ್ಷ ಜಿನೇಶ್ ಬಲ್ಲಾಳ್ ಕುತ್ಯಾರು ಅರಮನೆ ಪಾಲ್ಗೊಂಡಿದ್ದರು.ನಂತರ ನಡೆದ ಧಾರ್ಮಿಕ ಸಮಾರಂಭದ ಅಧ್ಯಕ್ಷತೆಯನ್ನು ಸಮಿತಿ ಅಧ್ಯಕ್ಷ ಎರ್ಮಾಳು ಬೀಡು ಅಶೋಕ್ ರಾಜ್ ವಹಿಸಿದ್ದರು. ಉಡುಪಿ ಜಿಲ್ಲಾ ಪಂಚಾಯಿತಿ ಮಾಜಿ ಅಧ್ಯಕ್ಷ ಕಟಪಾಡಿ ಶಂಕರ ಪೂಜಾರಿ ಮಾತನಾಡಿ, ಶೃದ್ಧೆ, ಭಕ್ತಿ ಇದ್ದಲ್ಲಿ ಭಗವಂತನ ಸಾನಿಧ್ಯವಿದೆ. ತುಳುನಾಡಿನ ವಿಶಿಷ್ಟ ಪರಂಪರೆ ಸಂಸ್ಕೃತಿ,  ಜೀವನ ಪದ್ದತಿಯಲ್ಲಿ ನಂಬಿಕೆ, ನಡವಳಿಕೆಯ ಮೇಲೆ ಬದುಕು ಸಾಕಾರಗೊಂಡಿದೆ. ಸಾಮೂಹಿಕ ಪ್ರಾರ್ಥನೆಯಿಂದ ಕಷ್ಟಗಳು ದೂರವಾಗುತ್ತವೆ ಎಂದರು.

ಉದ್ಯಮಿ ಗುರ್ಮೆ ಸುರೇಶ ಶೆಟ್ಟಿ, ತಾಲ್ಲೂಕು ಪಂಚಾಯಿತಿ ಮಾಜಿ ಅಧ್ಯಕ್ಷ ಕೆ.ದೇವದಾಸ ಹೆಬ್ಬಾರ್,  ಮುಂಬಯಿಯ ಸುಂಕ ಅಧಿಕಾರಿ ಎರ್ಮಾಳು ರೋಹಿತ್ ಹೆಗ್ಡೆ, ರೋಟರಿ ವಲಯ ಮಾಜಿ ಸಹಾಯಕ ಗವರ್ನರ್ ರಮೇಶ ಭಂಡಾರಿ, ಮಾತನಾಡಿದರು.  ಸಾಮೂಹಿಕ ಮಹಾ ಮೃತ್ಯುಂಜಯ ಮಂತ್ರ ಹಾಗೂ ಗಾಯತ್ರಿ ಮಹಾಮಂತ್ರ ಪಠಣ ಮಾಡಿಸಿದರು. ಉಪನ್ಯಾಸಕ ಎಚ್.ಎಸ್.ಗೋಪಾಲ್ ನಿರೂಪಿಸಿದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.