ADVERTISEMENT

ಸೀತಾನದಿ ಗಣಪಯ್ಯ ಶೆಟ್ಟಿ ಸಂಸ್ಮರಣೆ, ಪ್ರಶಸ್ತಿ ಪ್ರದಾನ

​ಪ್ರಜಾವಾಣಿ ವಾರ್ತೆ
Published 10 ಅಕ್ಟೋಬರ್ 2013, 9:21 IST
Last Updated 10 ಅಕ್ಟೋಬರ್ 2013, 9:21 IST
ಖ್ಯಾತ ಪ್ರಸಂಗಕರ್ತ ಸೀತಾನದಿ ಗಣಪಯ್ಯ ಶೆಟ್ಟರ 26ನೇ ವರ್ಷದ ಸಂಸ್ಮರಣೆ ಮತ್ತು ಪ್ರಶಸ್ತಿ ಪ್ರದಾನ ಸಮಾರಂಭದಲ್ಲಿ ಉಭಯತಿಟ್ಟುಗಳ ಭಾಗವತ ಪೊಲ್ಯ ಲಕ್ಷ್ಮೀನಾರಾಯಣ ಶೆಟ್ಟರಿಗೆ ಸೀತಾನದಿ ಪ್ರಶಸ್ತಿ ಪ್ರದಾನ ಮಾಡಲಾಯಿತು. 			 	(ಬ್ರಹ್ಮಾವರ ಚಿತ್ರ)
ಖ್ಯಾತ ಪ್ರಸಂಗಕರ್ತ ಸೀತಾನದಿ ಗಣಪಯ್ಯ ಶೆಟ್ಟರ 26ನೇ ವರ್ಷದ ಸಂಸ್ಮರಣೆ ಮತ್ತು ಪ್ರಶಸ್ತಿ ಪ್ರದಾನ ಸಮಾರಂಭದಲ್ಲಿ ಉಭಯತಿಟ್ಟುಗಳ ಭಾಗವತ ಪೊಲ್ಯ ಲಕ್ಷ್ಮೀನಾರಾಯಣ ಶೆಟ್ಟರಿಗೆ ಸೀತಾನದಿ ಪ್ರಶಸ್ತಿ ಪ್ರದಾನ ಮಾಡಲಾಯಿತು. (ಬ್ರಹ್ಮಾವರ ಚಿತ್ರ)   

ಬ್ರಹ್ಮಾವರ: ಖ್ಯಾತ ಪ್ರಸಂಗ ಕರ್ತ,ಯಕ್ಷಗಾನ ಅರ್ಥದಾರಿ ಸೀತಾನದಿ ಗಣಪಯ್ಯ ಶೆಟ್ಟರ 26ನೇ ವರ್ಷದ ಸಂಸ್ಮರಣೆ ಮತ್ತು ಪ್ರಶಸ್ತಿ ಪ್ರದಾನ ಸಮಾರಂಭ ಇತ್ತೀಚೆಗೆ ಪರ್ಕಳದ ವಿಘ್ನೇಶ್ವರ ಸಭಾ ಭವನ ದಲ್ಲಿ ನಡೆಯಿತು.

ಮಂಗಳೂರು ಮಹಾನಗರ ಪಾಲಿಕೆ ಆಯುಕ್ತ ಶಾನಾಡಿ ಅಜಿತ್‌ ಕುಮಾರ್‌ ಹೆಗ್ಡೆ ಅವರ ಅಧ್ಯಕ್ಷತೆಯಲ್ಲಿ ನಡೆದ ಈ ಸಮಾರಂಭದಲ್ಲಿ ಸೀತಾ ನದಿ ಪ್ರಶಸ್ತಿಯನ್ನು ಉಭಯ ತಿಟ್ಟುಗಳ ಭಾಗವತ ಪೊಲ್ಯ ಲಕ್ಷ್ಮೀ ನಾರಾಯಣ ಶೆಟ್ಟರಿಗೆ ನೀಡಲಾ ಯಿತು. ಪ್ರಶಸ್ತಿಯು ₨10ಸಾವಿರ ನಗದನ್ನು ಒಳಗೊಂಡಿರುತ್ತದೆ.

ಪ್ರತಿಭಾವಂತ ವಿದ್ಯಾರ್ಥಿಗಳಿಗೆ ಸೀತಾನದಿ ಟ್ರಸ್ಟ್‌ನಿಂದ ವಿದ್ಯಾರ್ಥಿ ವೇತನ ವಿತರಿಸಲಾತು. ಯಕ್ಷಗಾನ ಬಯಲಾಟ ಅಕಾಡೆ ಮಿಯ ಅಧ್ಯಕ್ಷ ಪ್ರೊ.ಎಂ.ಎಲ್‌ ಸಾಮಗ, ಉಡುಪಿ ಗೋವಿಂದ ಪೈ ಸಂಶೋಧನಾ ಕೆೇಂದ್ರದ ನಿರ್ದೇಶಕ ಹೆರಂಜೆ ಕೃಷ್ಣ ಭಟ್, ಮಣಿಪಾಲ ವೈಷ್ಣವಿ ದುರ್ಗಾ ದೇವಸ್ಥಾನದ ಧರ್ಮದರ್ಶಿ ಜಯರಾಜ ಹೆಗ್ಡೆ, ಸೀತಾನದಿ ಪ್ರತಿಷ್ಟಾನದ ಸದಸ್ಯರಾದ ಆತ್ರಾಡಿ ದಿಲೀಪ್‌ರಾಜ ಹೆಗ್ಡೆ, ರಾಜೀವ ಶೆಟ್ಟಿ, ಕಾರ್ಯಕ್ರಮದ ಪ್ರಾ ಯೋಜಕ ಹರ್ಷರಾಜ ಹೆಗ್ಡೆ ಮತ್ತಿತರರು ಉಪಸ್ಥಿತರಿದ್ದರು.

ಪ್ರಾಧ್ಯಾಪಕ ಪ್ರೊ.ಎಸ್‌.ವಿ. ಉದಯ ಕುಮಾರ್‌ ಶೆಟ್ಟಿ ಸನ್ಮಾನಿತರನ್ನು  ಪರಿಚಯಿಸಿದರು. ಉಪಾಧ್ಯಕ್ಷ ಜಯರಾಮ ಶೆಟ್ಟಿ ಸಂಸ್ಮರಣಾ ಭಾಷಣ ಮಾಡಿದರು. ಪ್ರತಿಷ್ಠಾನದ ಅಧ್ಯಕ್ಷ ಪಿ.ಕಿಶನ್ ಹೆಗ್ಡೆ ಸ್ವಾಗತಿಸಿದರು. ಸೀತಾನದಿ ವಿಠಲ ಶೆಟ್ಟಿ ಕಾರ್ಯಕ್ರಮ ನಿರೂಪಿಸಿದರು. ಕಾರ್ಯದರ್ಶಿ ಸರ್ಪು ಸದಾನಂದ ಪಾಟೀಲ್ ವಂದಿಸಿದರು. ನಂತರ ಬಡಗುತಿಟ್ಟಿನ ಪ್ರಸಿದ್ಧ ಕಲಾವಿದರಿಂದ ಶಶಿಪ್ರಭಾ ಪರಿಣಯ ಯಕ್ಷಗಾನ ಕಾರ್ಯಕ್ರಮ ನಡೆಯಿತು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.