ADVERTISEMENT

ಸೌಂದರ್ಯಕ್ಕೆ ರೂಪ ಕೊಡುವುದೇ ಕಲೆ

ನೃತ್ಯ ಉಪನ್ಯಾಸ –ಪ್ರಾತ್ಯಕ್ಷಿಕೆ ಮತ್ತು ಪ್ರದರ್ಶನ: ಡಾ.ಲೀಲಾ ಉಪಾಧ್ಯಾಯ ಹೇಳಿಕೆ

​ಪ್ರಜಾವಾಣಿ ವಾರ್ತೆ
Published 1 ಅಕ್ಟೋಬರ್ 2016, 6:35 IST
Last Updated 1 ಅಕ್ಟೋಬರ್ 2016, 6:35 IST

ಮಂಗಳೂರು: ‘ಸತ್ಯ ಮತ್ತು ಸೌಂದ ರ್ಯಕ್ಕೆ ರೂಪು ಕೊಡುವುದೇ ಕಲೆ. ಕಲೆಯು ನಮ್ಮ ಚೈತನ್ಯ ಮತ್ತು ಸ್ವಭಾವ ವನ್ನು ಸಂಗಮಗೊಳಿಸುತ್ತದೆ’ ಎಂದು ಶಾರದಾ ವಿದ್ಯಾಲಯದ ಶೈಕ್ಷಣಿಕ ಸಲಹೆ ಗಾರರಾದ ಡಾ. ಲೀಲಾ ಉಪಾಧ್ಯಾಯ ಹೇಳಿದರು.

ಶಾರದಾ ವಿದ್ಯಾಲಯದಲ್ಲಿ ಶುಕ್ರ ವಾರ ಕರ್ನಾಟಕ ಕರಾವಳಿ  ನೃತ್ಯ ಕಲಾ ಪರಿಷತ್‌ ಮತ್ತು ಕನ್ನಡ ಸಂಸ್ಕೃತಿ ಇಲಾ ಖೆಯ ಸಹಭಾಗಿತ್ವದಲ್ಲಿ ನಡೆದ ‘ನೃತ್ಯ ಉಪನ್ಯಾಸ –ಪ್ರಾತ್ಯಕ್ಷಿಕೆ ಮತ್ತು ಪ್ರದ ರ್ಶನ’ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು.

ಅಂತರಂಗ ಮತ್ತು ಬಹಿರಂಗವನ್ನು ನಾವು ಗಮನಿಸಿದರೂ ಬಹಿರಂಗದ ಸೌಂದರ್ಯಕ್ಕೆ ಮಾತ್ರ ಹೆಚ್ಚು ಒತ್ತು ಕೊಡುತ್ತೇವೆ. ಆದರೆ ಅಂತರಂಗವು ಶ್ರೀಮಂತವಾಗಿದ್ದಾಗ ಬಹಿರಂಗವು ಸಹಜವಾಗಿಯೇ ಸುಂದರವಾಗುತ್ತದೆ. ಕಲಾ ಪ್ರಕಾರಗಳು ವ್ಯಕ್ತಿಯ ಅಂತರಂಗ ವನ್ನು ಶ್ರೀಮಂತಗೊಳಿಸಲು ಸಹಕಾರಿ ಆಗುತ್ತವೆ. ಅಂತರಂಗದ ಚಿಂತನೆಯನ್ನು ಪ್ರಚೋದಿಸುವುದಲ್ಲದೆ, ನಮ್ಮ ಯೋಚನೆಗಳನ್ನು ಸುಂದರ ಗೊಳಿಸುವುದಕ್ಕೆ ಕಲೆ ಸಹಕಾರಿ ಆಗುತ್ತದೆ ಎಂದು ಅವರು ಹೇಳಿದರು.

ಹಿರಿಯ ನೃತ್ಯ ಕಲಾವಿದೆ ವಿದುಷಿ ಮಂಜುಳಾ ಸುಬ್ರಹ್ಮಣ್ಯ ಅವರು ನೃತ್ಯ ಬಂಧ ಜಾವಳಿಯ ಬಗ್ಗೆ ಉಪನ್ಯಾಸ ನೀಡಿದರು. ಜಾವಳಿಯ ವಸ್ತು ಶೃಂಗಾರ ಅಥವಾ ಮಧುರ ಭಾವವೇ ಆಗಿರುತ್ತದೆ. ಒಂದು ನೃತ್ಯ ಪ್ರಸ್ತುತಿಯ ಒಟ್ಟಂದಕ್ಕೆ ಮಹತ್ವದ ಕೊಡುಗೆ ನೀಡುತ್ತದೆ ಎಂದರು.

ಹಿರಿಯ ನೃತ್ಯ ಗುರುಗಳಾದ ವಿದುಷಿ ಶಾರದಾ ಮಣಿಶೇಖರ್‌, ವಿದುಷಿ ಅಶ್ವಿನಿ ಕೊಟ್ಟಾರಿ ಮತ್ತು ವಿದುಷಿ ಮಂಜುಳಾ ಸುಬ್ರಹ್ಮಣ್ಯ ಅವರು ಜಾವಳಿಯ ಪ್ರಾತ್ಯಕ್ಷಿಕೆಯನ್ನು ಪ್ರಸ್ತುತಪಡಿಸಿದರು.

ಅಧ್ಯಕ್ಷತೆಯನ್ನು ನೃತ್ಯಕಲಾ ಪರಿ ಷತ್‌ನ ಅಧ್ಯಕ್ಷ ಪಿ. ಕಮಲಾಕ್ಷ ಆಚಾರ್‌ ವಹಿಸಿದ್ದರು. ವಿದುಷಿ ಗೀತಾ ಸರಳಾಯ, ಪ್ರತಿಮಾ ಶ್ರೀಧರ್‌, ಶ್ರೀಧರ್‌, ಚಂದ್ರ ಶೇಖರ ನಾವಡ ಮತ್ತಿತರರು ಇದ್ದರು.

***
ಯಶಸ್ಸಿಗೆ ಯಾವುದೇ ಒಳದಾರಿ ಗಳಿಲ್ಲ. ಕಠಿಣ ಪರಿಶ್ರಮ ಮತ್ತು ಶಿಸ್ತಿನ ಮೂಲಕ ಕಲಾವಿದ ಬೆಳೆಯುವುದು ಸಾಧ್ಯ ಎಂದ ಅವರು ಬಾಳಿನಲ್ಲಿ ನಡೆದ ಷ್ಟೂ ದಾರಿ ಇದೆ. ಪಡೆದಷ್ಟೂ ಭಾಗ್ಯವಿದೆ.
-ಡಾ. ಲೀಲಾ ಉಪಾಧ್ಯಾಯ, ಶಾರದಾ ವಿದ್ಯಾಲಯದ ಶೈಕ್ಷಣಿಕ ಸಲಹೆಗಾರರು

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.