ಬ್ರಹ್ಮಾವರ: ಚಾಂತಾರು ಗ್ರಾಮ ಪಂಚಾ ಯಿತಿ ವ್ಯಾಪ್ತಿಯ ಹೇರೂರು ಗ್ರಾಮದ ಕೃಷಿ ಕೇಂದ್ರದ ಬಳಿ ಅನಧಿಕೃತವಾಗಿ ನಿರ್ಮಿಸಿದ್ದ ಗುಡಿಸಲನ್ನು ಬ್ರಹ್ಮಾವರದ ವಿಶೇಷ ತಹಶೀಲ್ದಾರ್ ಮತ್ತು ಕಂದಾಯ ಅಧಿಕಾರಿಗಳು ಬುಧವಾರ ಸಂಜೆ ತೆರವುಗೊಳಿಸಿದರು.
ಸುಮಾರು10 ವರ್ಷದಿಂದ ಬ್ರಹ್ಮಾ ವರದ ವಿವಿಧೆಡೆ ಬಾಡಿಗೆ ಮನೆಯಲ್ಲಿ ವಾಸವಾಗಿ ಸರ್ಕಾರಿ ಜಾಗದಲ್ಲಿ ಮನೆ ನಿವೇಶನಕ್ಕೆ ಕೆಲವು ವರ್ಷದಿಂದ ಅರ್ಜಿ ಸಲ್ಲಿಸಿದ್ದರೂ, ಯಾವುದೇ ನಿವೇಶನ ಲಭಿಸದೇ, ಉಳಿಯಲು ಯಾವುದೇ ಮನೆಯಿಲ್ಲದೇ ಸರ್ಕಾರಿ ಜಾಗದಲ್ಲಿ ಗುಡಿಸಲು ಕಟ್ಟಿ ವಾಸವಾಗಿದ್ದ ಕುಟುಂಬಕ್ಕೆ ಕಂದಾಯ ಇಲಾಖೆ ಕಾನೂ ನಿನ ಕ್ರಮ ಜರುಗಿಸಿರುವ ಬಗ್ಗೆ ಸ್ಥಳ ದಲ್ಲಿದ್ದ ಎರಡೂ ಪಕ್ಷಗಳ ತಂಡಗಳ ನಡುವೆ ಮಾತಿನ ಚಕಮಕಿ ನಡೆಯಿತು.
ಇದೇ ಪರಿಸರದಲ್ಲಿ ಗ್ರಾಮ ಪಂಚಾ ಯಿತಿ ಸದಸ್ಯರಿಗೆ ಸರ್ಕಾರದ 3 ಮನೆ ಗಳು ಇದ್ದ ದಾಖಲೆ ಇದೆ. ಏನೂ ಇಲ್ಲದ ಬಡವರ ಇಂತಹ ಮನೆ ಮುರಿಯುವ ಕಾರ್ಯ ಮಾಡಲಾಗುತ್ತದೆ ಎಂದು ನೆರೆದಿದ್ದ ಜನರು ದೂರಿದರು.
ಮಾಜಿ ಶಾಸಕ ಕೆ.ರಘುಪತಿ ಭಟ್ ಘಟನೆಯ ಸ್ಥಳಕ್ಕೆ ಆಗಮಿಸಿ ಕಾನೂನು ನೆಲೆಯಲ್ಲಿ ಸರಿ ಅಂತ ಕಂಡರೂ ಮಾನವೀಯ ನೆಲೆಯಲ್ಲಿ ನಾನು ನನ್ನ ಶಾಸಕತ್ವದ ಅವಧಿಯಲ್ಲಿ ಇಂತಹ ಘಟನೆಗೆ ಅವಕಾಶ ನೀಡಿಲ್ಲ ಎಂದರು.
ಘಟನಾ ಸ್ಥಳದಲ್ಲಿ ಬ್ರಹ್ಮಾವರ ವಿಶೇಷ ತಹಶೀಲ್ದಾರ ಜಿ.ಎಂ.ಬೋರ್ಕರ್, ಪ್ರಭಾರ ಕಂದಾಯ ಪರಿವೀಕ್ಷಕ ಲಕ್ಷ್ಮೀನಾರಾಯಣ ಭಟ್, ಗ್ರಾಮಕರಣಿಕ ಸುಧೀರ್ ಶೆಟ್ಟಿ ಮತ್ತು ಪಂಚಾಯಿತಿ ಅಭಿವೃದ್ಧಿ ಅಧಿಕಾರಿ ಸುರೇಶ್ ಮತ್ತು ಕಂದಾಯ ಇಲಾಖೆಯ ನೌಕರರು ಇದ್ದರು. ತೆರವು ಕಾರ್ಯಕ್ಕೆ ಬ್ರಹ್ಮಾವರ ಪೋಲಿಸ್ ಸೂಕ್ತ ರಕ್ಷಣಾ ವ್ಯವಸ್ಥೆ ಕಲ್ಪಿಸಿದ್ದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.