ADVERTISEMENT

‘ಯಕ್ಷಗಾನ ಸೀಮೋಲ್ಲಂಘನೆ ಅಗತ್ಯ’

​ಪ್ರಜಾವಾಣಿ ವಾರ್ತೆ
Published 21 ಸೆಪ್ಟೆಂಬರ್ 2013, 10:29 IST
Last Updated 21 ಸೆಪ್ಟೆಂಬರ್ 2013, 10:29 IST
ಉಡುಪಿ ಶ್ರೀ ಕೃಷ್ಣಮಠ, ಪರ್ಯಾಯ ಸೋದೆ ವಾದಿರಾಜ ಮಠದ ಆಶ್ರಯದಲ್ಲಿ ಶಿವಮೊಗ್ಗದ ನಾಟ್ಯಶ್ರೀ ಕಲಾತಂಡ ನಗರದ ರಾಜಾಂಗಣದಲ್ಲಿ ಏರ್ಪಡಿಸಿರುವ ಮೂರು ದಿನಗಳ ಯಕ್ಷಗಾನ ಪ್ರದರ್ಶನ ’ಯಕ್ಷೋತ್ಸವ’ಕ್ಕೆ ಪರ್ಯಾಯ ಸೋದೆ ವಾದಿರಾಜ ಮಠದ ವಿಶ್ವವಲ್ಲಭ ಸ್ವಾಮೀಜಿ ಚಾಲನೆ ನೀಡಿದರು. ಹಿರಿಯ ಯಕ್ಷಗಾನ ಕಲಾವಿದ ಕುಂಬಳೆ ಸುಂದರರಾವ್‌, ವಿಧಾನಪರಿಷತ್‌ ಸದಸ್ಯ ಗಣೇಶ್‌ ಕಾರ್ಣಿಕ್‌, ಯಕ್ಷಗಾನ ಅಕಾಡೆಮಿಯ ಮಾಜಿ ಅಧ್ಯಕ್ಷ ಪ್ರೊ. ಎಂ.ಎಲ್‌. ಸಾಮಗ, ಕಲಾವಿದ ಮೋಹನ್‌ ಹೆಗಡೆ, ಶೃಂಗೇರಿಯ ಕಾಳಿಂಗ ನಾವುಡ ಪ್ರತಿಷ್ಠಾನದ ಸಂಸ್ಥಾಪಕ ರಮೇಶ್‌ ಬೇಗಾರು ಇತರರು ಇದ್ದಾರೆ.

ಉಡುಪಿ:‘ಯಕ್ಷಗಾನ ಉಳಿದು ಬೆಳೆಯಬೇಕಾದರೆ ಕಲೆಯ ಸೀಮೋ ಲ್ಲಂಘನೆ ಆಗಬೇಕು. ಭೌಗೋಳಿಕವಾಗಿ ವಿಸ್ತರಣೆ ಯಾಗದಿದ್ದರೆ ಈ ಕಲೆಗೆ ದೊಡ್ಡ ಭವಿಷ್ಯ ಸಿಗದು’ ಎಂದು ಹಿರಿಯ ಯಕ್ಷಗಾನ ಕಲಾವಿದ ಕುಂಬಳೆ ಸುಂದರರಾವ್‌ ಹೇಳಿದರು.

ಉಡುಪಿ ಶ್ರೀ ಕೃಷ್ಣಮಠ, ಪರ್ಯಾಯ ಸೋದೆ ವಾದಿರಾಜ ಮಠದ ಆಶ್ರಯದಲ್ಲಿ ಶಿವಮೊಗ್ಗದ ನಾಟ್ಯಶ್ರೀ ಕಲಾತಂಡ ನಗರದ ರಾಜಾಂಗಣದಲ್ಲಿ ಏರ್ಪಡಿಸಿರುವ ಮೂರು ದಿನಗಳ ಯಕ್ಷಗಾನ ಪ್ರದರ್ಶನ ’ಯಕ್ಷೋತ್ಸವ 2013’ ಮತ್ತು ಪ್ರಶಸ್ತಿ ಪ್ರದಾನ ಸಮಾರಂಭದ ಉದ್ಘಾಟನಾ ಸಮಾ ರಂಭದಲ್ಲಿ ಶುಕ್ರವಾರ ಅವರು ಮಾತನಾಡಿದರು.

ಯಕ್ಷಗಾನ ಉಳಿದು ಬೆಳೆಯುವ ಬಗ್ಗೆ ಹತ್ತು ವರ್ಷಗಳ ಹಿಂದೆ ಅನುಮಾನ ವ್ಯಕ್ತಪಡಿಸಲಾಗುತ್ತಿತ್ತು. ಆದರೆ ಯಕ್ಷಗಾನ ಅಳಿಯುವ ಕಲೆಯಲ್ಲ ಎಂಬುದನ್ನು ಎಲ್ಲರೂ ಒಪ್ಪಿಕೊ ಳ್ಳಬೇಕು. ಯಕ್ಷಗಾನವನ್ನು ಕರಾವಳಿ ಕಲೆ ಎಂದು ಸೀಮಿತಗೊಳಿಸದೆ ನಮ್ಮ ರಾಜ್ಯದ ಪ್ರಾತಿನಿಧಿಕ ಕಲೆ ಎಂದು ಬಿಂಬಿ ಸಬೇಕು  ಎಂದು ಅವರು ಹೇಳಿದರು.

ಯಕ್ಷಗಾನ ಅಧ್ಯಯನ ಕೇಂದ್ರದ ಅಗತ್ಯವಿದ್ದು, ಯಕ್ಷಗಾನ ಅಕಾಡೆಮಿ ಮೂಲಕ ಒತ್ತಡ ತರಬೇಕು. ನಿವೃತ್ತಿ ಕಲಾವಿದರಿಗೆ ಪಿಂಚಣಿ ನೀಡಬೇಕು ಎಂದರು. ‘ಯಕ್ಷಗಾನ ಕಲೆ ಬೇರೆ ರಾಜ್ಯ– ದೇಶಕ್ಕೆ ಹೋಗಬೇಕು. ಯಕ್ಷಗಾನವನ್ನು ದೇಶದ ಕಲೆ ಎಂದು ನೋಡಬೇಕು’ ಎಂದು ಸೆಲ್ಕೊ ಇಂಡಿಯಾ ಸಂಸ್ಥೆಯ ಸಹ ಸಂಸ್ಥಾಪಕ ಹರೀಶ್‌ ಹಂದೆ ಅಭಿಪ್ರಾಯಪಟ್ಟರು. ಪರ್ಯಾಯ ಸೋದೆ ವಾದಿರಾಜ ಮಠದ ವಿಶ್ವವಲ್ಲಭ ಸ್ವಾಮೀಜಿ ಯಕ್ಷೋತ್ಸವವನ್ನು ಉದ್ಘಾಟಿಸಿದರು.

ವಿಧಾನಪರಿಷತ್‌ ಸದಸ್ಯ ಗಣೇಶ್‌ ಕಾರ್ಣಿಕ್‌, ಯಕ್ಷಗಾನ ಅಕಾಡೆಮಿಯ ಮಾಜಿ ಅಧ್ಯಕ್ಷ ಪ್ರೊ. ಎಂ.ಎಲ್‌. ಸಾಮಗ, ಕಲಾವಿದ ಮೋಹನ್‌ ಹೆಗಡೆ, ಶೃಂಗೇರಿಯ ಕಾಳಿಂಗ ನಾವುಡ ಪ್ರತಿ ಷ್ಠಾನದ ಸಂಸ್ಥಾಪಕ ರಮೇಶ್‌ ಬೇಗಾರು ಉಪಸ್ಥಿತರಿದ್ದರು. ನಾಟ್ಯಶ್ರೀ ಕಲಾ ತಂಡದ ವಿದ್ವಾನ್‌ ದತ್ತಮೂರ್ತಿ ಭಟ್‌ ಸ್ವಾಗತಿಸಿ ಪ್ರಾಸ್ತಾವಿಕವಾಗಿ ಮಾತನಾಡಿದರು. ಜಿ.ಪಿ.ಸಂಸ್ಕೃತಿ ಪ್ರಾರ್ಥಿಸಿದರು. ಪ್ರಭಾ ಕರ ಕಾರ್ಯಕ್ರಮ ನಿರೂಪಿಸಿದರು. 

ಕಾರ್ಯಕ್ರಮದ ನಂತರ ‘ರಾಜ ಉಗ್ರ ಸೇನ ಶರಸೇತು ಬಂಧ’ ಯಕ್ಷಗಾನ ಪ್ರದ ರ್ಶನ ನಡೆಯಿತು. 21ರಂದು ಬ್ರಹ್ಮಕಪಾಲ, 22ರಂದು ಕರ್ಣ ಪರ್ವ ಯಕ್ಷಗಾನ ಪ್ರದರ್ಶನ ನಡೆಯಲಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.