ADVERTISEMENT

1.450 ಕೆಜಿ ಗಾಂಜಾ ವಶ: ಇಬ್ಬರ ಬಂಧನ

​ಪ್ರಜಾವಾಣಿ ವಾರ್ತೆ
Published 7 ನವೆಂಬರ್ 2019, 15:47 IST
Last Updated 7 ನವೆಂಬರ್ 2019, 15:47 IST
ಉಡುಪಿಯ ಪಂದುಬೆಟ್ಟು ಬಳಿ ಗಾಂಜಾ ಮಾರಾಟ ಮಾಡುತ್ತಿದ್ದ ಶಿವಮೊಗ್ಗ ಮೂಲದ ಫೈರೋಜ್, ಮೊಹಮ್ಮದ್ ಮೊಸೀನ್ ಎಂಬ ಆರೋಪಿಗಳನ್ನು ಗುರುವಾರ ಪೊಲೀಸರು ಬಂಧಿಸಿದ್ದಾರೆ.
ಉಡುಪಿಯ ಪಂದುಬೆಟ್ಟು ಬಳಿ ಗಾಂಜಾ ಮಾರಾಟ ಮಾಡುತ್ತಿದ್ದ ಶಿವಮೊಗ್ಗ ಮೂಲದ ಫೈರೋಜ್, ಮೊಹಮ್ಮದ್ ಮೊಸೀನ್ ಎಂಬ ಆರೋಪಿಗಳನ್ನು ಗುರುವಾರ ಪೊಲೀಸರು ಬಂಧಿಸಿದ್ದಾರೆ.   

ಉಡುಪಿ: ಪಂದುಬೆಟ್ಟು ಬಳಿ ಗಾಂಜಾ ಮಾರಾಟ ಮಾಡುತ್ತಿದ್ದ ಶಿವಮೊಗ್ಗ ಮೂಲದ ಫೈರೋಜ್, ಮೊಹಮ್ಮದ್ ಮೊಸೀನ್ ಎಂಬ ಆರೋಪಿಗಳನ್ನು ಗುರುವಾರ ಪೊಲೀಸರು ಬಂಧಿಸಿದ್ದಾರೆ.

ಆರೋಪಿಗಳಿಂದ 1.450 ಕೆ.ಜಿ ಗಾಂಜಾ, 2 ಮೊಬೈಲ್ ಫೋನ್, ಗಾಂಜಾ ತೂಕ ಮಾಡುವ ಮೆಷಿನ್‌, ನಗದು ವಶಪಡಿಸಿಕೊಳ್ಳಲಾಗಿದೆ. ಸ್ವಾಧೀನಪಡಿಸಿಕೊಂಡ ಸ್ವತ್ತುಗಳ ಮೌಲ್ಯ ₹ 33,000.ನಗರ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ಡಿಸಿಐಬಿ ಘಟಕದ ಎಎಸ್ಐ ರವಿಚಂದ್ರ, ಸಿಬ್ಬಂದಿ ಸುರೇಶ, ಸಂತೋಷ ಕುಂದರ್, ಚಂದ್ರಶೆಟ್ಟಿ, ರಾಮು ಹೆಗ್ಡೆ, ರಾಘವೇಂದ್ರ ಉಪ್ಪುಂದ, ರಾಜ್ ಕುಮಾರ್, ದಯಾನಂದ ಪ್ರಭು, ಶಿವಾನಂದ ಪೂಜಾರಿ, ಶಾಂತಾರಾಮ ಭಾಗವಹಿಸಿದ್ದರು.

ADVERTISEMENT

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.