ಕಾರ್ಕಳ: ನಿಟ್ಟೆ ಮಹಾಲಿಂಗ ಅಡ್ಯಂತಾಯ ಸ್ಮಾರಕ ತಾಂತ್ರಿಕ ಕಾಲೇಜು, ಫ್ರೋನಿಯಸ್ ಸಂಸ್ಥೆ ಸಹಯೋಗದಲ್ಲಿ ರಾಣಿ ಚೆನ್ನಮ್ಮ ಮಹಿಳಾ ವೆಲ್ಡರ್ ತರಬೇತಿ ಕಾರ್ಯಕ್ರಮಕ್ಕೆ ಈಚೆಗೆ ಚಾಲನೆ ನೀಡಲಾಯಿತು.
ಪ್ರಜ್ ಜೆನ್ ಎಕ್ಸ್ ಸಂಸ್ಥೆ ವ್ಯವಸ್ಥಾಪಕಿ ಪ್ರಜ್ವಲ್ ಶೆಟ್ಟಿ ಮಾತನಾಡಿ, ‘ಆಧುನಿಕ ಉದ್ಯಮದಲ್ಲಿ ಮಹಿಳಾ ವೆಲ್ಡರ್‌ಗಳಿಗೆ ಅವಕಾಶಗಳು ಹೆಚ್ಚುತ್ತಿವೆ. ಸಾಂಪ್ರದಾಯಿಕ ಪುರುಷ ಪ್ರಾಬಲ್ಯದ ಕ್ಷೇತ್ರಗಳಲ್ಲಿ ಹೊಸ ದೃಷ್ಟಿಕೋನ ತರುವ ಮೂಲಕ ಮಹಿಳೆಯರು ನುರಿತ ಕಾರ್ಯಪಡೆಯಲ್ಲಿ ಕ್ರಾಂತಿಕಾರಕ ಬದಲಾವಣೆ ಮಾಡಲು ಇಂತಹ ತರಬೇತಿ ಸಹಕಾರಿಯಾಗಿವೆ’ ಎಂದರು.
ಅಧ್ಯಕ್ಷತೆ ವಹಿಸಿದ್ದ ನಿಟ್ಟೆ ತಾಂತ್ರಿಕ ಕಾಲೇಜಿನ ಪ್ರಾಂಶುಪಾಲ ನಿರಂಜನ್ ಎನ್.ಚಿಪ್ಲುಂಕರ್ ಮಾತನಾಡಿ, ‘ತಾಂತ್ರಿಕ ಕ್ಷೇತ್ರಗಳಲ್ಲಿ ಮಹಿಳೆಯರಲ್ಲಿ ಕೌಶಲದ ಅಂತರ ಕಡಿಮೆ ಮಾಡುವ ಅಗತ್ಯವಿದೆ. ವೆಲ್ಡಿಂಗ್ ಉದ್ಯಮದಲ್ಲಿ ಮಹಿಳೆಯರಿಗೆ ವಿಪುಲ ಅವಕಾಶಗಳಿದ್ದು, ಸರಿಯಾದ ತರಬೇತಿಯೊಂದಿಗೆ ಉದ್ಯಮ ಮತ್ತು ಸಮಾಜ ಎರಡಕ್ಕೂ ಗಣನೀಯವಾದ ಕೊಡುಗೆ ನೀಡಬಹುದು’ ಎಂದರು.
ಫ್ರೋನಿಯಸ್ ಇಂಡಿಯಾ ಸಂಸ್ಥೆಯ ಪ್ರಾದೇಶಿಕ ವ್ಯವಸ್ಥಾಪಕ ಅಭಯ್ ಪೈ ಮಾತನಾಡಿದರು. ಮೆಕ್ಯಾನಿಕಲ್ ಎಂಜಿನಿಯರಿಂಗ್ ವಿಭಾಗದ ಮುಖ್ಯಸ್ಥ ಶ್ರೀನಿವಾಸ ಪಿ.ಪೈ, ಸಹ ಪ್ರಾಧ್ಯಾಪಕ ವಿಜೀಶ್ ವಿ., ಸಹಾಯಕ ಪ್ರಾಧ್ಯಾಪಕ ರಜತ್ ಎನ್.ರಾವ್ ಮತ್ತು ರಾಘವೇಂದ್ರ ಪೈ ಸಹಯೋಗ ನೀಡಿದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.