ADVERTISEMENT

ವಿದ್ಯುತ್ ಕೊರತೆಯಿಂದ ಯೋಜನೆ ಮೊಟಕು

​ಪ್ರಜಾವಾಣಿ ವಾರ್ತೆ
Published 1 ಜನವರಿ 2018, 12:31 IST
Last Updated 1 ಜನವರಿ 2018, 12:31 IST

ಬದಿಯಡ್ಕ: ಎಂಡೋಸಲ್ಫಾನ್ ಪೀಡಿತರಾದ ಅನೇಕ ರೋಗಿಗಳು ಇರುವ ಕುಂಬ್ಡಾಜೆ ಗ್ರಾಮ ಪಂಚಾಯಿತಿಯ ವಿವಿಧ ಪ್ರದೇಶದಲ್ಲಿ ಅನೇಕ ವರ್ಷಗಳ ಹಿಂದೆ ನೀರಾವರಿ ವ್ಯವಸ್ಥೆಗೆ ರೂಪು ನೀಡಿದ್ದರು. ಆದರೆ ವಿದ್ಯುತ್ ಸಂಪರ್ಕ ದೊರೆಯದ ಕಾರಣ ಯೋಜನೆಯು ಬಹುತೇಕ ಮೊಟಕುಗೊಂಡಿದೆ. ಸಂಬಂಧಿಸಿದ ಇಲಾಖೆಯ ಅಧಿಕಾರಿಗಳು ನಿರ್ಲಕ್ಷ್ಯಿಸಿದ್ದಾರೆ’ ಎಂಬ ಆರೋಪ ಇದೆ.

ಕುಂಬ್ಡಾಜೆ ಗ್ರಾಮ ಪಂಚಾಯಿತಿನ 1 ಹಾಗೂ 2ನೇ ವಾರ್ಡ್‌ಗೆ ನೀರು ಸರಬರಾಜು ಮಾಡಲು ಈ ಯೋಜನೆಯನ್ನು ಅನುಷ್ಠಾನಗೊಳಿಸಲಾಗಿತ್ತು. ಇದಕ್ಕಾಗಿ ₹ 42 ಲಕ್ಷ ವೆಚ್ಚವಾಗಿತ್ತು. ನಬಾರ್ಡ್‌ ಯೋಜನೆಯಂತೆ ನಿರ್ಮಾಣವಾದ ಈ ಯೋಜನೆಯಿಂದ ನೇರಪ್ಪಾಡಿ, ಮುನಿಯೂರು, ಪೊಡಿಪಳ್ಳದ ಜನತೆಗೆ ಜಲ ಸೌಲಭ್ಯ ನೀಡಲು ಯೋಜಿಸಲಾಗಿತ್ತು. ಏತಡ್ಕ ಹೊಳೆಯಲ್ಲಿ ಕೊಳವೆ ಬಾವಿ ಹಾಗೂ ನೇರಪ್ಪಾಡಿಯಲ್ಲಿ ಮೋಟರ್ ಶೆಡ್‌ ಕೂಡಾ ನಿರ್ಮಾಣವಾಗಿತ್ತು.

ಪೊಡಿಪಳ್ಳದಲ್ಲಿ ಬೃಹತ್ ಟ್ಯಾಂಕ್ ನಿರ್ಮಿಸಿದ ನೀರಾವರಿ ವ್ಯವಸ್ಥೆಗೆ ಯೋಜನೆ ರೂಪಿಸಲಾಗಿತ್ತು. ಆದರೆ ಲೋಕೋಪಯೋಗಿ ಇಲಾಖೆ ತಕರಾರು ಒಂದು ವರ್ಷ ತಡಮಾಡಿತು. ಶೀಘ್ರದಲ್ಲಿ ಯೋಜನೆ ಅನುಷ್ಠಾನಗೊಳ್ಳಲಿದೆ ಎಂದು ಅಧಿಕಾರಿಗಳು ಭರವಸೆ ನೀಡುತ್ತಿದ್ದಾರೆ. ಯೋಜನೆ ಶೀಘ್ರ ಆರಂಭಿಸಬೇಕು ಎಂದು ಸ್ಥಳೀಯರು ಒತ್ತಾಯಿಸಿದ್ದಾರೆ.

ADVERTISEMENT

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.