ADVERTISEMENT

ಕುಂದಾಪುರ: ಬರಲಿದೆ ವಾದಿರಾಜರ ಜೀವನಾಧಾರಿತ ಸಿನಿಮಾ

​ಪ್ರಜಾವಾಣಿ ವಾರ್ತೆ
Published 3 ಫೆಬ್ರುವರಿ 2023, 5:16 IST
Last Updated 3 ಫೆಬ್ರುವರಿ 2023, 5:16 IST
ವಿಶ್ವವಲ್ಲಭತೀರ್ಥ ಸ್ವಾಮೀಜಿ
ವಿಶ್ವವಲ್ಲಭತೀರ್ಥ ಸ್ವಾಮೀಜಿ   

ಕುಂದಾಪುರ: ಶತಮಾನದ ಹಿಂದೆ ಜೀವಿಸಿದ್ದ, ಒಳ್ಳೆಯ ಸಂದೇಶಗಳನ್ನು ನೀಡಿದ ಸೋದೆ ವಾದಿರಾಜ ಯತಿಗಳ ಜೀವನಚರಿತ್ರೆಯನ್ನು ಚಲನಚಿತ್ರವನ್ನಾಗಿ ಮಾಡಲು ನಿರ್ಧರಿಸಲಾಗಿದೆ ಎಂದು ಉಡುಪಿ ಸೋದೆ ವಾದಿರಾಜ ಮಠದ ವಿಶ್ವವಲ್ಲಭತೀರ್ಥ ಶ್ರೀಪಾದರು ತಿಳಿಸಿದರು.

ಹೂವಿನಕೆರೆಯ ಮೂಲ ವಾದಿರಾಜರ ಮಠದಲ್ಲಿ ಗುರುವಾರ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, ವಾದಿರಾಜರ ಜೀವನದ ಪ್ರಮುಖ ಘಟನೆಗಳನ್ನು ಪರಿಣಾಮಕಾರಿಯಾಗಿ ತಿಳಿಯಪಡಿಸುವ ಚಲನಚಿತ್ರಕ್ಕಾಗಿ ಮಠದ ಭಕ್ತರು ಆಸಕ್ತಿಯಿಂದ ಮುಂದೆ ಬಂದಿದ್ದಾರೆ. ಚಿತ್ರದಲ್ಲಿ ವಾದಿರಾಜರ ಸಿದ್ದಾಂತ, ಚಿಂತನೆ, ವ್ಯಕ್ತಿತ್ವವನ್ನು ಸಮಾಜದ ಮುಂದಿಡಲಾಗುವುದು ಎಂದರು.

ಚಿತ್ರ ನಿರ್ದೇಶಕ ಹಯವದನ್ ಮಾತನಾಡಿ, ದೊಡ್ಡ ಬಜೆಟ್‍ನಲ್ಲಿ ಒಂದು ವರ್ಷದಲ್ಲಿ ಚಿತ್ರ ನಿರ್ಮಿಸುವ ಗುರಿ ಇರಿಸಿಕೊಳ್ಳಲಾಗಿದೆ. ವಾದಿರಾಜರ ಜನನ, ಬಾಲ್ಯ, ಸನ್ಯಾಸ ಸ್ವೀಕಾರ, ಸಮಾಜಮುಖಿ ಕಾರ್ಯಗಳು, ಕೊಡುಗೆಗಳನ್ನು ಚಿತ್ರದಲ್ಲಿ ತೋರಿಸಲಾಗುವುದು. ಹೂವಿನಕೆರೆ ಸುತ್ತ ಮುತ್ತ ನಡೆಯುವ ಚಿತ್ರೀಕರಣದಲ್ಲಿ ಅವರ ಜೀವಿತಾವಧಿಯ 15-16ನೇ ಶತಮಾನದ ಕಾಲಘಟ್ಟಕ್ಕೆ ಹೊಂದಿಸುವ ಸಿದ್ಧತೆಗಳನ್ನು ಮಾಡಲಾಗುವುದು. ಅವರು ರಚಿಸಿದ ಜನಪ್ರಿಯ ಹಾಡುಗಳನ್ನು ಬಳಸಿಕೊಳ್ಳಲಾಗುವುದು. ಅವರ ಪಾತ್ರವನ್ನು ಯಾರು ಮಾಡುತ್ತಾರೆಂಬುದು ಇನ್ನೂ ನಿರ್ಧಾರವಾಗಿಲ್ಲ ಎಂದರು.

ADVERTISEMENT

ಪವನ್ ಸಿಮಿಕೇರೆ, ವಿಕ್ರಮ್ ಹತ್ವಾರ್, ಸಚಿನ್ ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.