
ಬ್ರಹ್ಮಾವರ: ಇಲ್ಲಿನ ಆಭರಣ ಜ್ಯುವೆಲ್ಲರ್ಸ್ ಮಳಿಗೆಯಲ್ಲಿ ಸೈನಿಕ ದಿನಾಚರಣೆ ಸಂಭ್ರಮದಿಂದ ಆಚರಿಸಲಾಯಿತು.
ಮಳಿಗೆಯ ಪ್ರಬಂಧಕ ಗಣೇಶ ಪ್ರಭು ನೇತೃತ್ವದಲ್ಲಿ ಮಾಜಿ ಸೈನಿಕರು ದೀಪ ಬೆಳಗುವುದರ ಮೂಲಕ ಕಾರ್ಯಕ್ರಮಕ್ಕೆ ಚಾಲನೆ ನೀಡಿದರು.
ಜಿಲ್ಲಾ ಮಾಜಿ ಸೈನಿಕರ ಸಂಘಟನೆಯ ಸುರೇಶ ಸಿ. ರಾವ್ ಸನ್ಮಾನ ಸ್ವೀಕರಿಸಿ ಮಾತನಾಡಿ, ಆಭರಣ ಜ್ಯುವೆಲ್ಲರ್ಸ್‌ನವರು ದೇಶ ರಕ್ಷಿಸುವ ಸೈನಿಕರು ಮತ್ತು ಅವರ ಕಾರ್ಯವನ್ನು ಗುರುತಿಸಿದ್ದು ವಿಶೇಷ. ಸಂಸ್ಥೆಯು ತನ್ನ ವ್ಯವಹಾರದೊಂದಿಗೆ ಸೈನಿಕರನ್ನು ಅವಿಭಾಜ್ಯ ಅಂಗ ಎಂದು ತಿಳಿದು ಗೌರವಿಸಿದೆ. ಭವಿಷ್ಯದಲ್ಲಿ ಸೇನೆಗೆ ಸೇರುವ ಯುವಕರಿಗೆ ಪ್ರೋತ್ಸಾಹ ನೀಡಿದೆ ಎಂದು ಹೇಳಿದರು.
ಸೈನಿಕರನ್ನು ಗೌರವಿಸಲಾಯಿತು. ಆಭರಣ ಸಂಸ್ಥೆಯ ಕಟ್ಟಡದ ಮ್ಯಾನೇಜರ್ ರಾಘವೇಂದ್ರ ನಾಯಕ್, ಮಳಿಗೆಯ ಸಚಿನ್ ಪಾಲ್ಗೊಂಡಿದ್ದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.