ADVERTISEMENT

ನಾಟಿ ಮಾಡಿ ಟ್ರ್ಯಾಕ್ಟರ್ ಓಡಿಸಿದ ಕೃಷಿ ಸಚಿವ

​ಪ್ರಜಾವಾಣಿ ವಾರ್ತೆ
Published 26 ಜೂನ್ 2021, 11:53 IST
Last Updated 26 ಜೂನ್ 2021, 11:53 IST
ಕೃಷಿ ಸಚಿವ ಬಿ.ಎಸ್.ಪಾಟೀಲ್‌ ಶನಿವಾರ ಉಡುಪಿಯ ಕಡೆಕಾರಿನಲ್ಲಿ ಭತ್ತದ ಗದ್ದೆಗಿಳಿದು ನಾಟಿ ಮಾಡಿ, ಟ್ರಾಕ್ಟರ್‌ ಓಡಿಸಿದರು. ಶಾಸಕ ರಘುಪತಿ ಭಟ್‌ ಚಿತ್ರದಲ್ಲಿ ಇದ್ದಾರೆ.
ಕೃಷಿ ಸಚಿವ ಬಿ.ಎಸ್.ಪಾಟೀಲ್‌ ಶನಿವಾರ ಉಡುಪಿಯ ಕಡೆಕಾರಿನಲ್ಲಿ ಭತ್ತದ ಗದ್ದೆಗಿಳಿದು ನಾಟಿ ಮಾಡಿ, ಟ್ರಾಕ್ಟರ್‌ ಓಡಿಸಿದರು. ಶಾಸಕ ರಘುಪತಿ ಭಟ್‌ ಚಿತ್ರದಲ್ಲಿ ಇದ್ದಾರೆ.   

ಉಡುಪಿ: ಕೃಷಿ ಸಚಿವ ಬಿ.ಎಸ್.ಪಾಟೀಲ್‌ ಶನಿವಾರ ಕಡೆಕಾರಿನಲ್ಲಿ ಭತ್ತದ ಗದ್ದೆಗಿಳಿದು ನಾಟಿ ಮಾಡಿದರು. ಕೆಸರು ಗದ್ದೆಯಲ್ಲಿ ಟ್ರಾಕ್ಟರ್‌ ಓಡಿಸಿ ಗಮನ ಸೆಳೆದರು.

ಕೇದಾರೋತ್ಥಾನ ಟ್ರಸ್ಟ್‌ನಿಂದ ತಾಲ್ಲೂಕಿನಾದ್ಯಂತ ನಡೆಯುತ್ತಿರುವ ಹಡಿಲುಭೂಮಿ ಕೃಷಿ ಆಂದೋಲನದಲ್ಲಿ ಭಾಗವಹಿಸಿದ್ದ ಸಚಿವ ಬಿ.ಸಿ.ಪಾಟೀಲ್‌, ಕಡೆಕಾರ್‌, ಮೂಡಬೆಟ್ಟು, ತೆಂಕ ನಿಡಿಯೂರು, ಚೇಕಾರ್ಡಿ ಗ್ರಾಮಗಳಲ್ಲಿ ಭತ್ತದ ನಾಟಿ ಮಾಡಿದರು.

ಬಳಿಕ ಮಾತನಾಡಿ, ‘ನನಗೆ ಕೃಷಿ ಹೊಸದಲ್ಲ, ನಾನೂ ರೈತನ ಮಗನೇ. ರಂಟೆ ಹೊಡೆದಿದ್ದೇನೆ, ಸಲಕೆ ಹಿಡಿದು ಕೆಲಸ ಮಾಡಿದ್ದೇನೆ, ನಾಟಿ ಮಾಡಿದ್ದೇನೆ. ಪೊಲೀಸ್ ಅಧಿಕಾರಿ ಹಾಗೂ ನಟನಾದ ಬಳಿಕ ಕೃಷಿ ಕಾರ್ಯ ಮರೆತುಹೋದಂತಾಗಿತ್ತು. ಈಗ ಮತ್ತೆ ಹಳೆ ನೆನಪುಗಳು ಮರುಕಳಿಸಿದಂತಾಯಿತು’ ಎಂದರು.

ADVERTISEMENT

ಜಾರಕಿಹೊಳಿಗೆ ಸೂಕ್ತ ಸ್ಥಾನಮಾನ: ರಮೇಶ್ ಜಾರಕಿಹೊಳಿ ಶಾಸಕ ಸ್ಥಾನಕ್ಕೆ ರಾಜೀನಾಮೆ ಕೊಡುವ ಅವಶ್ಯಕತೆ ಇಲ್ಲ. ಅವರ ವಿರುದ್ಧ ಪಿತೂರಿ ನಡೆಸಿ ಪ್ರಕರಣದಲ್ಲಿ ಸಿಲುಕಿಸಲಾಗಿದೆ. ಆರೋಪ ಮುಕ್ತರಾದ ಬಳಿಕ ಜಾರಕಿಹೊಳಿಗೆ ಸೂಕ್ತ ಸ್ಥಾನಮಾನ ಸಿಗಲಿದೆ. ಸಚಿವ ಯೋಗೇಶ್ವರ್ ದೆಹಲಿ ಪ್ರವಾಸಕ್ಕೆ ವಿಶೇಷ ಅರ್ಥ ಕಲ್ಪಿಸುವ ಅಗತ್ಯವಿಲ್ಲ. ಇಲಾಖೆಯ ಕಾರ್ಯನಿಮಿತ್ತ ಹೋಗಿರಬಹುದು ಎಂದರು.

ರಾಜ್ಯದಲ್ಲಿ ಕಾಂಗ್ರೆಸ್‌ ನಿರ್ನಾಮವಾಗಿದೆ. ಆದರೂ ಸಿದ್ದರಾಮಯ್ಯ, ಡಿ.ಕೆ.ಶಿವಕುಮಾರ್ ಮುಂದಿನ ಮುಖ್ಯಮಂತ್ರಿ ಕನಸು ಕಾಣುತ್ತಿದ್ದಾರೆ. ಮುಂದಿನ ಚುನಾವಣೆಯಲ್ಲಿಯೂ ಬಿಜೆಪ ಅಧಿಕಾರಕ್ಕೆ ಬರುವುದು ನಿಶ್ಚಿತ ಎಂದು .ಬಿ.ಸಿ.ಪಾಟೀಲ್ ಹೇಳಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.