ADVERTISEMENT

ವಾಲಿಬಾಲ್: ಸೆಮಿಫೈನಲ್‌ಗೆ ಮಂಗಳೂರು ವಿವಿ

ಅಖಿಲ ಭಾರತ ಅಂತರ ವಿವಿ ಮಟ್ಟದ ಪುರುಷರ ಹೊನಲು ಬೆಳಕಿನ ವಾಲಿಬಾಲ್ ಟೂರ್ನಿ

​ಪ್ರಜಾವಾಣಿ ವಾರ್ತೆ
Published 7 ಜನವರಿ 2023, 17:48 IST
Last Updated 7 ಜನವರಿ 2023, 17:48 IST
   

ಉಡುಪಿ: ಪೂರ್ಣಪ್ರಜ್ಞ ಕಾಲೇಜಿನಲ್ಲಿ ನಡೆಯುತ್ತಿರುವ ಅಖಿಲ ಭಾರತ ಅಂತರ ವಿಶ್ವವಿದ್ಯಾಲಯ ಮಟ್ಟದ ಪುರುಷರ ಹೊನಲು ಬೆಳಕಿನ ವಾಲಿಬಾಲ್ ಟೂರ್ನಿಯ ಕ್ವಾರ್ಟರ್‌ ಫೈನಲ್‌ನಲ್ಲಿ ಮಂಗಳೂರು ವಿವಿ ತಂಡ ಮದ್ರಾಸ್‌ ವಿವಿ ವಿರುದ್ಧ ಗೆಲುವು ಸಾಧಿಸಿ ಸೆಮಿಫೈನಲ್‌ ತಲುಪಿತು.

ಮೊದಲ ಎರಡು ಸೆಟ್‌ಗಳನ್ನು ಗೆದ್ದ ಮಂಗಳೂರು ವಿವಿಗೆ ಮೂರನೇ ಸೆಟ್‌ನಲ್ಲಿ ಮದ್ರಾಸ್ ವಿವಿ ತಿರುಗೇಟು ನೀಡಿತು. ತೀವ್ರ ರೋಚಕತೆಯಿಂದ ಕೂಡಿದ್ದ ನಾಲ್ಕನೇ ಸೆಟ್‌ನಲ್ಲಿ ಎರಡೂ ತಂಡಗಳು ಪೈಪೋಟಿ ನಡೆಸಿದವು. ಅಂತಿಮವಾಗಿ ಮಂಗಳೂರು ವಿವಿ 35–33ರಿಂದ ಪಂದ್ಯ ಗೆದ್ದಿತು.

ಟೂರ್ನಿಯುದ್ದಕ್ಕೂ ಉತ್ತಮ ಪ್ರದರ್ಶನ ತೋರುತ್ತಿರುವ ಕುರುಕ್ಷೇತ್ರ ವಿವಿಯು 25-23, 25-21, 25 -14 ರಿಂದ ಪುಣೆಯ ಭಾರತಿ ವಿದ್ಯಾಪೀಠ ವಿವಿಯನ್ನು ಮಣಿಸಿತು. ನಂತರ ನಡೆದ ಪಂದ್ಯದಲ್ಲಿ ಕೋಲ್ಕತ್ತ ವಿವಿಯು 25-18, 25-20, 23-25, 25-23ರಿಂದ ವಾರಣಸಿಯ ಎಂಜಿಕೆವಿ ವಿವಿ ವಿರುದ್ಧ ಗೆದ್ದಿತು.

ADVERTISEMENT

ಎಸ್‌ಆರ್‌ಎಂ ಇನ್‌ಸ್ಟಿಟ್ಯೂಟ್ ಆಫ್‌ ಸೈನ್ಸ್‌ ಅಂಡ್ ಟೆಕ್ನಾಲಜಿ ವಿವಿಯು 25-17, 35-33, 25-14ರಿಂದ ಔರಂಗಾಬಾದ್‌ನ ಡಾ.ಬಿ.ಎ.ಎಂ.ವಿವಿ ವಿರುದ್ಧ ಗೆದ್ದಿತು.

ಮಂಗಳೂರು ವಿವಿ, ಕುರುಕ್ಷೇತ್ರ ವಿವಿ, ಕೋಲ್ಕತ್ತ ವಿವಿ ಹಾಗೂ ಎಸ್‌ಆರ್‌ಎಂ ಇನ್‌ಸ್ಟಿಟ್ಯೂಟ್ ಆಫ್‌ ಸೈನ್ಸ್‌ ಅಂಡ್ ಟೆಕ್ನಾಲಜಿ ವಿವಿ ಸೆಮಿಫೈನಲ್ ತಲುಪಿದ್ದು ಜ.8ರಂದು ನಡೆಯುವ ಪಂದ್ಯದಲ್ಲಿ ಪ್ರಶಸ್ತಿಗಾಗಿ ಸೆಣಸಲಿವೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.