ADVERTISEMENT

ಸ್ವಾತಂತ್ರ್ಯ ಸಂಭ್ರಮ: 14 ತಾಸು ಅಮೃತ ರಸಧಾರೆ

ಸಾಧಕರಿಗೆ ಸನ್ಮಾನ, ಯಕ್ಷಗಾನ ತಾಳಮದ್ದಳೆ ಪ್ರದರ್ಶನ

​ಪ್ರಜಾವಾಣಿ ವಾರ್ತೆ
Published 11 ಆಗಸ್ಟ್ 2022, 12:46 IST
Last Updated 11 ಆಗಸ್ಟ್ 2022, 12:46 IST

ಉಡುಪಿ: ಪ್ರತಿ ವರ್ಷ ಸ್ವಾತಂತ್ರ್ಯ ದಿನಾಚರಣೆಯಂದು ಯಕ್ಷಗಾನ ತಾಳಮದ್ದಳೆ ಕಾರ್ಯಕ್ರಮ ಆಯೋಜಿಸುವ ಮೂಲಕ ವೈಶಿಷ್ಟ್ಯಪೂರ್ಣವಾಗಿ ಆಚರಿಸಿಕೊಂಡು ಬರಲಾಗುತ್ತಿದ್ದು ಈ ವರ್ಷವೂ ಉಡುಪಿಯ ಅಮ್ಮಣ್ಣಿ ರಾಮಣ್ಣ ಶೆಟ್ಟಿ ಸಭಾಂಗಣದಲ್ಲಿ ಆ.15ರಂದು ಬೆಳಿಗ್ಗೆ 8.30ಕ್ಕೆ ಯಕ್ಷಗಾನ ಅಮೃತ ರಸಧಾರೆ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿದೆ ಎಂದು ಕಲಾ ಪೋಷಕ ಸುಧಾಕರ ಆಚಾರ್ಯ ತಿಳಿಸಿದರು.

ಗುರುವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿ, 15ರಂದು ಬೆಳಿಗ್ಗೆ 8.30ರಿಂದ ರಾತ್ರಿ 10.30ರವರೆಗೆ ನಿರಂತರ 14 ಗಂಟೆಗಳ ಯಕ್ಷಗಾನ ಅಮೃತ ರಸಧಾರೆ ಕಾರ್ಯಕ್ರಮ ನಡೆಯಲಿದೆ. ಸ್ವರಾಮತ, ಪರಂಪರಾಮೃತ, ಗೀತಾಮೃತ, ವಾಗರ್ಥಾಮೃತ, ಭರತ–ಯಕ್ಷ ನೃತ್ಯಾಮೃತ ಹಾಗೂ ಕಥಾಮೃತ ಕಾರ್ಯಕ್ರಮ ನಡೆಯಲಿದೆ.

ಬೆಳಿಗ್ಗೆ 8.30ಕ್ಕೆ ಶತಾಯುಷಿಗಳಾದ ಮೂಡುಬಿದಿರೆ ಮಿಜಾರುಗುತ್ತು ಆನಂದ ಆಳ್ವ ಹಾಗೂ ಪೇಜಾವರ ಮಠದ ವಿಶ್ವಪ್ರಸನ್ನ ತೀರ್ಥ ಸ್ವಾಮೀಜಿಯ ಪೂರ್ವಾಶ್ರಮದ ತಂದೆ ಕಿನ್ನಿಗೋಳಿ ಪಕ್ಷಿಕೆರೆ ಅಂಗಡಿಮಾರು ಕೃಷ್ಣಭಟ್ ಅವರಿಗೆ ಶತಾಭಿವಂದನ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿದೆ. 9ಕ್ಕೆ ಮಹಿಳಾ ಭಾಗವತರಾದ ಭವ್ಯಶ್ರೀ, ಕಾವ್ಯಶ್ರೀ, ಅಮೃತ, ಚಿಂತನಾ ಹಾಗೂ ಶ್ರೀರಕ್ಷಾ ಅವರಿಂದ ಯಕ್ಷಗಾನ ಸ್ವರಾಮೃತ ಕಾರ್ಯಕ್ರಮ ನಡಯಲಿದೆ.

ADVERTISEMENT

11.30ಕ್ಕೆ ಪುತ್ತಿಗೆ ರಘುರಾಮ ಹೊಳ್ಳ, ಸುರೇಶ ಶೆಟ್ಟಿ, ಶಂಕರನಾರಾಯಣ, ರವಿಚಂದ್ರ ಕನ್ನಡಿಕಟ್ಟೆ ಅವರಿಂದ ಯಕ್ಷಗಾನ ಗೀತಾಮೃತ ನಡೆಯಲಿದೆ. ಬಳಿಕ ಅಮೃತಸಿದ್ಧಿ ತಾಳ ಮದ್ದಳೆ, ಸಂಜೆ 5ಕ್ಕೆ ಭಾಗವತ ಪಟ್ಲ ಸತೀಶ್ ಶೆಟ್ಟಿ ನಿರ್ದೇಶನದಲ್ಲಿ ಭರತ–ಯಕ್ಷ ನೃತ್ಯಾಮೃತ ಕಾರ್ಯಕ್ರಮ ಇದೆ. ಬಳಿಕ ಕಾಣಿಯೂರು ಮಠಾಧೀಶರಾದ ವಿದ್ಯಾವಲ್ಲಭ ತೀರ್ಥ ಸ್ವಾಮೀಜಿ ಸಾನ್ನಿಧ್ಯದಲ್ಲಿ ಜ್ಯೋತಿಷ್ಯ ವಿದ್ವಾನ್ ಕಬಿಯಾಡಿ ಜಯರಾಮ ಆಚಾರ್ಯ ಹಾಗೂ ಕಟೀಲು ದೇವಳ ಅರ್ಚಕ ಸದಾನಂದ ಅಸ್ರಣ್ಣ ಮಾತನಾಡಲಿದ್ದಾರೆ.

ಸಚಿವರಾದ ಸುನಿಲ್ ಕುಮಾರ್, ಎಸ್‌.ಅಂಗಾರ, ಶಾಸಕರಾದ ರಘುಪತಿ ಭಟ್‌, ಲಾಲಾಜಿ ಮೆಂಡನ್, ಪಳ್ಳಿ ಕಿಶನ್‌ಹೆಗ್ಡೆ, ಡಾ.ಎಚ್‌.ಎಸ್‌.ಬಲ್ಲಾಳ್‌, ಡಾ.ಜಿ.ಶಂಕರ್, ಡಾ.ಎಂ.ಮೋಹನ್ ಆಳ್ವ, ಟಿ.ಶ್ಯಾಂಭಟ್, ಶಾನಾಡಿ ಅಜಿತ್ ಕುಮಾರ್ ಹೆಗ್ಡೆ, ಆನಂದ ಸಿ.ಕುಂದರ್, ಪುರುಷೋತ್ತಮ ಶೆಟ್ಟಿ, ಗುರ್ಮೆ ಸುರೇಶ್ ಶೆಟ್ಟಿ, ಶ್ರೀಪತಿ ಭಟ್ ಮೂಡುಬಿದಿರೆ, ಪ್ರೊ,ಎಂ.ಎಲ್.ಸಾಮಗ, ಡಾ.ವೈ.ಸನತ್ ಹೆಗ್ಡೆ, ಕೆ.ಉದಯಕುಮಾರ್ ಶೆಟ್ಟಿ, ಮನೋಹರ್ ಶೆಟ್ಟಿ, ಜಯರಾಜ ಹೆಗ್ಡೆ, ಪ್ರದೀಪ್ ಕುಮಾರ್ ಕಲ್ಕೂರ, ಇಂದ್ರಾಳಿ ಜಯಕರ ಶೆಟ್ಟಿ, ಗೋವಿಂದ ಬಾಬು ಪೂಜಾರಿ, ಪೂರ್ಣಿಮಾ ಯತೀಶ್ ರೈ ಉಪಸ್ಥಿತರಿರಲಿದ್ದಾರೆ ಎಂದು ವಿವರ ನೀಡಿದರು.

ಸುದ್ದಿಗೋಷ್ಠಿಯಲ್ಲಿ ಭುವನ ಪ್ರಸಾದ್ ಹೆಗ್ಡೆ, ಎಂ.ಎಸ್‌.ವಿಷ್ಣುಭಟ್‌, ವೆಂಕಟೇಶ್ ಪ್ರಭು ಬೈಲೂರು, ಕೆ.ಸತೀಶ್ ಹೆಗ್ಡೆ ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.