ADVERTISEMENT

ಎಸ್ಎಸ್ಎಲ್‌ಸಿ ಮರುಮೌಲ್ಯಮಾಪನ: ಪೂರ್ವಿಗೆ 618 ಅಂಕ

​ಪ್ರಜಾವಾಣಿ ವಾರ್ತೆ
Published 2 ಜೂನ್ 2025, 11:45 IST
Last Updated 2 ಜೂನ್ 2025, 11:45 IST
ಹೆಬ್ರಿ ತಾಲ್ಲೂಕಿಗೆ ಪ್ರಥಮ ಸ್ಥಾನವನ್ನು ಪಡೆದ ಅಮೃತ ಭಾರತಿ ಸಂಸ್ಥೆಯ ವಿದ್ಯಾರ್ಥಿನಿ ಪೂರ್ವಿ ಎಂ.ರಾವ್ ಅವರನ್ನು ಸ್ವಗೃಹ ಮುದ್ದೂರು ಮಾರಾಳಿಯಲ್ಲಿ ಹೆಬ್ರಿ ಅಮೃತ ಭಾರತಿ ಟ್ರಸ್ಟ್ ವತಿಯಿಂದ ಸನ್ಮಾನಿಸಲಾಯಿತು
ಹೆಬ್ರಿ ತಾಲ್ಲೂಕಿಗೆ ಪ್ರಥಮ ಸ್ಥಾನವನ್ನು ಪಡೆದ ಅಮೃತ ಭಾರತಿ ಸಂಸ್ಥೆಯ ವಿದ್ಯಾರ್ಥಿನಿ ಪೂರ್ವಿ ಎಂ.ರಾವ್ ಅವರನ್ನು ಸ್ವಗೃಹ ಮುದ್ದೂರು ಮಾರಾಳಿಯಲ್ಲಿ ಹೆಬ್ರಿ ಅಮೃತ ಭಾರತಿ ಟ್ರಸ್ಟ್ ವತಿಯಿಂದ ಸನ್ಮಾನಿಸಲಾಯಿತು   

ಹೆಬ್ರಿ: ಇಲ್ಲಿನ ಪಾಂಡುರಂಗ ರಮಣನಾಯಕ್ ಅಮೃತ ಭಾರತಿ ವಿದ್ಯಾಲಯದ ವಿದ್ಯಾರ್ಥಿನಿ ಪೂರ್ವಿ ಎಂ.ರಾವ್, ಎಸ್ಎಸ್ಎಲ್‌ಸಿ ಪರೀಕ್ಷೆಯ ಮರುಮೌಲ್ಯಮಾಪನದಲ್ಲಿ 618 (ಶೇ 98.88) ಅಂಕ ಗಳಿಸಿದ್ದು, ಹೆಬ್ರಿ ತಾಲ್ಲೂಕಿಗೆ ಪ್ರಥಮ ಸ್ಥಾನ ಹಾಗೂ ರಾಜ್ಯ ಮಟ್ಟದಲ್ಲಿ 8ನೇ ಸ್ಥಾನ ಪಡೆದಿದ್ದಾಳೆ.

ಹೆಬ್ರಿ ಅಮೃತ ಭಾರತಿ ಟ್ರಸ್ಟ್ ವತಿಯಿಂದ ಪೂರ್ವಿ ಎಂ.ರಾವ್ ಅವರನ್ನು ಮುದ್ದೂರು ಮಾರಾಳಿಯಲ್ಲಿ ಸನ್ಮಾನಿಸಲಾಯಿತು. ಸಂಸ್ಕೃತದಲ್ಲಿ 125, ಇಂಗ್ಲೀಷ್ 98, ಕನ್ನಡ 100, ಗಣಿತ 99, ವಿಜ್ಞಾನ 99, ಸಮಾಜ ವಿಜ್ಞಾನ 97 ಅಂಕ ಪಡೆದಿದ್ದಾಳೆ. ವಿದ್ಯಾರ್ಥಿನಿಯ ಸಾಧನೆಗೆ ಶಾಲಾ ಆಡಳಿತ ಮಂಡಳಿ ಹರ್ಷ ವ್ಯಕ್ತಪಡಿಸಿದೆ.

ವಿದ್ಯಾರ್ಥಿನಿಯ ಸನ್ಮಾನದ ವೇಳೆ ಅಮೃತ ಭಾರತಿ ಟ್ರಸ್ಟ್ ಅಧ್ಯಕ್ಷ ಎಂ.ರವಿರಾವ್, ಕಾರ್ಯದರ್ಶಿ ಗುರುದಾಸ ಶೆಣೈ, ಅಮೃತ ಭಾರತಿ ವಿದ್ಯಾಲಯದ ಅಧ್ಯಕ್ಷ ಶೈಲೇಶ್ ಕಿಣಿ, ಟ್ರಸ್ಟ್ ಸದಸ್ಯ ವಿಷ್ಣುಮೂರ್ತಿ ನಾಯಕ್, ವಸತಿ ನಿಲಯದ ಸದಸ್ಯ ರಾಮಕೃಷ್ಣ ಆಚಾರ್ಯ, ಶಾಲಾ ಮೇಲ್ವಿಚಾರಕ ರಾಘವೇಂದ್ರ ಜಿ, ಶಾಲಾ ಮುಖ್ಯಶಿಕ್ಷಕಿ ಅಪರ್ಣಾ ಆಚಾರ್, ಶಿಕ್ಷಕ ವಿದ್ವಾನ್ ವೇದವ್ಯಾಸ ತಂತ್ರಿ ಮಡಾಮಕ್ಕಿ, ವಿದ್ಯಾರ್ಥಿನಿಯ ಪಾಲಕ ವಿನಾಯಕ ಎಸ್.ಜಿ, ಕಜ್ಕೆ ಶಾಲೆಯ ಮುಖ್ಯಶಿಕ್ಷಕಿ ಪಾರ್ವತಿ ಎಂ ಉಪಸ್ಥಿತರಿದ್ದರು.

ADVERTISEMENT

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.