ಉಡುಪಿ: ಕೇರಳ ರಾಜ್ಯ ಹೇಗೆ ದೇವರ ಸ್ವಂತ ನಾಡೋ ಹಾಗೆಯೇ ದಕ್ಷಿಣ ಕನ್ನಡ ಮತ್ತು ಉಡುಪಿ ಜಿಲ್ಲೆಗಳು ದೇವರ ಜಿಲ್ಲೆಗಳು ಎಂದು ಮುಜರಾಯಿ ಹಾಗೂ ಸಾರಿಗೆ ಸಚಿವ ರಾಮಲಿಂಗಾ ರೆಡ್ಡಿ ಹೇಳಿದರು.
ಪೆರ್ಡೂರು ಮಹತೋಭಾರ ಶ್ರೀ ಅನಂತಪದ್ಮನಾಭ ದೇವಸ್ಥಾನದಲ್ಲಿ ₹ 7 ಕೋಟಿ ವೆಚ್ಚದಲ್ಲಿ ನಿರ್ಮಾಣವಾಗಲಿರುವ ನಗಾರಿ ಗೋಪುರದ ಶಿಲಾನ್ಯಾಸವನ್ನು ಭಾನುವಾರ ನೆರವೇರಿಸಿ, ಬಳಿಕ ನಡೆದ ಸಭೆಯಲ್ಲಿ ಅವರು ಮಾತನಾಡಿದರು.
ರಾಜ್ಯದ ‘ಎ’ ಮತ್ತು ‘ಬಿ’ ದರ್ಜೆಯ ಒಟ್ಟು ದೇಗುಲಗಳ ಮೂರನೇ ಒಂದು ಭಾಗ ದಕ್ಷಿಣ ಕನ್ನಡ ಮತ್ತು ಉಡುಪಿ ಜಿಲ್ಲೆಗಳಲ್ಲಿವೆ ಎಂದರು.
ರಾಜ್ಯದಲ್ಲಿ 205 ‘ಎ’ ದರ್ಜೆಯ, 193 ‘ಬಿ’ ದರ್ಜೆಯ ಮತ್ತು 34 ಸಾವಿರದಷ್ಟು ಇತರ ದೇಗುಲಗಳಿವೆ. ಇಲ್ಲಿನ ದೇವಾಲಯಗಳ ಆಡಳಿತ ಮಂಡಳಿಗಳು ಯಾವುದೇ ಕಪ್ಪು ಚುಕ್ಕೆ ಇಲ್ಲದೆ ಆಡಳಿತ ನಡೆಸುತ್ತಿವೆ ಎಂದು ಹೇಳಿದರು.
ಕಾಪು ಶಾಸಕ ಗುರ್ಮೆ ಸುರೇಶ್ ಶೆಟ್ಟಿ ಮಾತನಾಡಿ, ಈ ದೇವಾಲಯದ ಸಂಪೂರ್ಣ ಜೀರ್ಣೋದ್ಧಾರ ನಡೆಯಬೇಕು. ಶಾಸಕನಾಗಿ ಅದಕ್ಕೆ ಎಲ್ಲಾ ರೀತಿಯ ನೆರವು ನೀಡಲಾಗುವುದು. ಅದಕ್ಕಾಗಿ ಪಕ್ಷಾತೀತ, ಜಾತ್ಯತೀತವಾಗಿ ಜೀರ್ಣೋದ್ಧಾರ ಸಮಿತಿ ಮಾಡಬೇಕು ಎಂದರು.
ನಾವು ಬಿಡಿ, ಬಿಡಿಯಾಗಿರಬಾರದು ಎಲ್ಲಾ ಸಮುದಾಯ ಒಂದಾಗಬೇಕು ಹಾಗಾದರೆ ಮಾತ್ರ ಆದಷ್ಟು ಶೀಘ್ರ ಜೀರ್ಣೋದ್ಧಾರ ಕಾರ್ಯ ನಡೆಸಬಹುದು ಎಂದು ತಿಳಿಸಿದರು.
ದೇವಾಲಯದ ತಂತ್ರಿ ವಿದ್ವಾನ್ ಕೆ.ಪಿ. ಕುಮಾರ ಗುರು ತಂತ್ರಿ, ದೇವಸ್ಥಾನ ವ್ಯವಸ್ಥಾಪನ ಸಮಿತಿ ಅಧ್ಯಕ್ಷ ಪ್ರಮೋದ್ ರೈ ಪಳಜೆ, ಮುಖಂಡರಾದ ವಿನಯ ಕುಮಾರ್ ಸೊರಕೆ, ಅಭಯಚಂದ್ರ ಜೈನ್, ಲಾಲಾಜಿ ಆರ್. ಮೆಂಡನ್, ಅದಾನಿ ಗ್ರೂಪ್ ಕಾರ್ಯ ನಿರ್ವಾಹಕ ನಿರ್ದೇಶಕ ಕಿಶೋರ್ ಆಳ್ವ, ಮಾಜಿ ಮಂಡಲ ಪ್ರಧಾನ ಶಾಂತಾರಾಮ ಸೂಡ ಕೆ., ರಾಜ್ಯ ಧಾರ್ಮಿಕ ಪರಿಷತ್ ಸದಸ್ಯೆ ಮಲ್ಲಿಕಾ ಪಕ್ಕಳ, ವಾಸ್ತು ತಜ್ಞ ಸುಬ್ರಹ್ಮಣ್ಯ ಭಟ್ ಗುಂಡಿ ಬೈಲು, ಅರ್ಚಕ ರಘುಪ್ರಸಾದ ಅಡಿಗ ಉಪಸ್ಥಿತರಿದ್ದರು. ರಾಜ್‌ಕುಮಾರ್ ಶೆಟ್ಟಿ ದೊಡ್ಮನೆ ಸ್ವಾಗತಿಸಿದರು.
ಮಾರಿಯಮ್ಮನ ದರ್ಶನ ಪಡೆದ ಸಚಿವ ಕಾಪು
(ಪಡುಬಿದ್ರಿ): ಮುಜರಾಯಿ ಮತ್ತು ಸಾರಿಗೆ ಇಲಾಖೆ ಸಚಿವ ರಾಮಲಿಂಗಾ ರೆಡ್ಡಿ ಅವರು ಭಾನುವಾರ ಹೊಸ ಮಾರಿಗುಡಿ ದೇವಸ್ಥಾನಕ್ಕೆ ಭೇಟಿ ನೀಡಿ ಉಚ್ಚಂಗಿ ಸಹಿತ ಮಾರಿಯಮ್ಮನ ದರ್ಶನ ಪಡೆದರು. ದೇವಳದ ಪ್ರಧಾನ ಅರ್ಚಕರಾದ ಶ್ರೀನಿವಾಸ ತಂತ್ರಿ ಕಲ್ಯ ಅವರು ಶ್ರೀದೇವಿಯಲ್ಲಿ ಪ್ರಾರ್ಥಿಸಿ ಅನುಗ್ರಹ ಪ್ರಸಾದ ನೀಡಿದರು. ವ್ಯವಸ್ಥಾಪನಾ ಸಮಿತಿ ಮತ್ತು ಅಭಿವೃದ್ಧಿ ಸಮಿತಿ ವತಿಯಿಂದ ಗೌರವಿಸಲಾಯಿತು. ಜಿಲ್ಲಾಧಿಕಾರಿ ಸ್ವರೂಪ ಟಿ.ಕೆ. ಶಾಸಕ ಗುರ್ಮೆ ಸುರೇಶ್ ಶೆಟ್ಟಿ ವ್ಯವಸ್ಥಾಪನಾ ಸಮಿತಿ ಅಧ್ಯಕ್ಷ ರತ್ನಾಕರ ಶೆಟ್ಟಿ ನಡಿಕೆರೆ ಅಭಿವೃದ್ಧಿ ಸಮಿತಿ ಅಧ್ಯಕ್ಷ ಕೆ. ವಾಸುದೇವ ಶೆಟ್ಟಿ ಮಲ್ಲಿಕಾ ಪಕ್ಕಳ ಮಂಜುಳಾ ಪ್ರಶಾಂತ್ ಕುಮಾರ್ ಶೆಟ್ಟಿ ಭಾಸ್ಕರ ದೇವಾಡಿಗ ಪ್ರತಿಭಾ ರವಿಕಿರಣ್ ಕಾಪು ದಿವಾಕರ ಶೆಟ್ಟಿ ಯೋಗೀಶ್ ವಿ. ಶೆಟ್ಟಿ ಬಾಲಾಜಿ ಮಾಧವ ಆರ್. ಪಾಲನ್ ಶೇಖರ ಸಾಲ್ಯಾನ್ ಮನೋಹರ ರಾವ್ ಕಲ್ಯ ರವೀಂದ್ರ ಮಲ್ಲಾರ್ ಜಯಲಕ್ಷ್ಮಿ ಸುರೇಶ್ ಶೆಟ್ಟಿ ಚರಿತ ದೇವಾಡಿಗ ಸಾವಿತ್ರಿ ಗಣೇಶ್ ದೇವರಾಜ್ ಕೋಟ್ಯಾನ್ ಭಾಗವಹಿಸಿದ್ದರು.
ಉಡುಪಿ ಉಚ್ಚಿಲ ದಸರಾಕ್ಕೆ ಸಚಿವ ಮೆಚ್ಚುಗೆ
ಪಡುಬಿದ್ರಿ: ಉಚ್ಚಿಲ ಮಹಾಲಕ್ಷ್ಮೀ ದೇವಸ್ಥಾನದಲ್ಲಿ ನಡೆಯುವ ದಸರಾ ಉತ್ಸವ ಮುಂತಾದ ಧಾರ್ಮಿಕ ಕಾರ್ಯಕ್ರಮಗಳ ಬಗ್ಗೆ ಸಚಿವ ರಾಮಲಿಂಗಾ ರೆಡ್ಡಿ ಮೆಚ್ಚುಗೆ ವ್ಯಕ್ತಪಡಿಸಿದರು. ಉಚ್ಚಿಲ ಮಹಾಲಕ್ಷ್ಮೀ ದೇವಸ್ಥಾನಕ್ಕೆ ಭೇಟಿ ಅವರು ಮುಂಬರುವ ‘ಉಡುಪಿ ಉಚ್ಚಿಲ ದಸರಾ ಉತ್ಸವ’ ಸೇರಿದಂತೆ ಕ್ಷೇತ್ರದಲ್ಲಿ ನಡೆಯುವ ಅಭಿವೃದ್ಧಿ ಕಾರ್ಯಕ್ರಮಗಳಿಗೆ ಸರ್ಕಾರದಿಂದ ಸಹಕಾರ ನೀಡುವುದಾಗಿ ಹೇಳಿದರು. ಮೊಗವೀರ ಮುಖಂಡ ಜಿ. ಶಂಕರ್ ಅವರು ಸಚಿವರಿಗೆ ಶಾಲು ಹೊದಿಸಿ ಗೌರವಿಸಿದರು.
ದ.ಕ. ಮೊಗವೀರ ಮಹಾಜನ ಸಂಘದ ಅಧ್ಯಕ್ಷ ಜಯ ಸಿ. ಕೋಟ್ಯಾನ್ ಕಾಂಗ್ರೆಸ್ ಮುಖಂಡರಾದ ಪ್ರಸಾದ್ ರಾಜ್ ಕಾಂಚನ್ ಮಹಾಜನ ಸಂಘದ ಉಪಾಧ್ಯಕ್ಷ ಮೋಹನ್ ಬೆಂಗ್ರೆ ಗಿರಿಧರ್ ಸುವರ್ಣ ಶರಣ್ ಕುಮಾರ್ ಮಟ್ಟು ವಿನಯ್ ಕರ್ಕೇರ ಗುಂಡು ಬಿ. ಅಮೀನ್ ರತ್ನಾಕರ್ ಸಾಲ್ಯಾನ್ ಸುಧಾಕರ್ ಕುಂದರ್ ಸುಜಿತ್ ಸಾಲ್ಯಾನ್ ಉಷಾರಾಣಿ ಬೋಳೂರು ಸುಗುಣ ಕರ್ಕೇರಕಿರಣ್ ಕುಮಾರ್ ಪಿತ್ರೋಡಿ ಜಯಂತ್ ಅಮೀನ್ ಕೋಡಿ ಶಂಕರ್ ಸಾಲ್ಯಾನ್ ಬಾರ್ಕೂರು ನಾರಾಯಣ ಕರ್ಕೇರ ರಾಜೇಂದ್ರ ಸುವರ್ಣ ಹಿರಿಯಡ್ಕ ಮೋಹನ್ ಬಂಗೇರ ಆಡಳಿತ ಸಮಿತಿ ಸದಸ್ಯರು ಮಹಿಳಾ ಸದಸ್ಯರು ಭಾಗವಹಿಸಿದ್ದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.