ADVERTISEMENT

ಕಾಪು| ಅಪಾರ್ಟ್ಮೆಂಟ್ ಕಂಪೌಂಡ್ ಕುಸಿತ : ರಿಕ್ಷಾ, ಬೈಕ್ ಗಳಿಗೆ ಹಾನಿ

​ಪ್ರಜಾವಾಣಿ ವಾರ್ತೆ
Published 18 ಜೂನ್ 2023, 16:13 IST
Last Updated 18 ಜೂನ್ 2023, 16:13 IST
ಕಾಪುವಿನ ವಸತಿ ಸಮುಚ್ಚಯದ ಆವರಣ ಗೋಡೆ ಕುಸಿದು ಒಂದು ರಿಕ್ಷಾ, ಮೂರು ದ್ವಿಚಕ್ರ ವಾಹನಗಳಿಗೆ ಹಾನಿ ಉಂಟಾಗಿದೆ. 
ಕಾಪುವಿನ ವಸತಿ ಸಮುಚ್ಚಯದ ಆವರಣ ಗೋಡೆ ಕುಸಿದು ಒಂದು ರಿಕ್ಷಾ, ಮೂರು ದ್ವಿಚಕ್ರ ವಾಹನಗಳಿಗೆ ಹಾನಿ ಉಂಟಾಗಿದೆ.    

ಕಾಪು (ಪಡುಬಿದ್ರಿ): ಶನಿವಾರ ರಾತ್ರಿ ಸುರಿದ ಮಳೆಗೆ ಇಲ್ಲಿನ ವಸತಿ ಸಮುಚ್ಛಯದ ಆವರಣ ಗೋಡೆ ಕುಸಿದು ರಿಕ್ಷಾ, ಮೂರು ದ್ವಿಚಕ್ರ ವಾಹನಗಳಿಗೆ ಹಾನಿಯಾಗಿದೆ.

ಇಲ್ಲಿನ ಪರಿಸರದಲ್ಲಿ ಶನಿವಾರ ರಾತ್ರಿಯಿಂದ ಭಾರಿ ಮಳೆಯಾಗುತ್ತಿದೆ. ಪೈಪ್‌ಲೈನ್ ಅಳವಡಿಸಲು ಫೇಮಸ್ ಅಪಾರ್ಟ್ಮೆಂಟ್‌ನ ಆವರಣ ಗೋಡೆ ಬಳಿಯೇ ಅಗೆಯಲಾಗಿದೆ. ಜೋರಾಗಿ ಸುರಿದ ಮಳೆಗೆ ಅಪಾರ್ಟ್ಮೆಂಟ್ ನಿವಾಸಿಗಳಾದ ಅಬ್ದುಲ್ ಖಾದರ್, ಅಬ್ದುಲ್ ಕಬೀರ್ ಎಂಬವರ ಬೈಕ್ ಮತ್ತು ಶರೀಫ್‌ ಎಂಬವರ ರಿಕ್ಷಾ ಹಾನಿಗೊಳಗಾಗಿದ್ದು ಯಾವುದೇ ಜೀವಹಾನಿ ಸಂಭವಿಸಿಲ್ಲ.

ರಾಷ್ಟ್ರೀಯ ಹೆದ್ದಾರಿ 66ರ ಪಕ್ಕದಲ್ಲಿ ಗ್ಯಾಸ್ ಪೈಪ್‌ಲೈನ್ ಪೈಪ್ ಅಳವಡಿಸಲು ಅಗೆದು ಹಾಕಲಾಗಿದೆ. ಅಸಮರ್ಪಕ ಕಾಮಗಾರಿಯಿಂದ ಘಟನೆ ನಡೆದಿದೆ. ಅಗೆಯುವಾಗಲೇ ಆಕ್ಷೇಪಿಸಿದರೂ ಅಧಿಕಾರಿಗಳು ಈ ಬಗ್ಗೆ ಗಮನಹರಿಸಲಿಲ್ಲ ಎಂದು ಸಾರ್ವಜನಿಕರು ದೂರಿದ್ದಾರೆ.

ADVERTISEMENT

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.