ADVERTISEMENT

ವಿಪ್ರ ಮಹಿಳಾ ವೇದಿಕೆ: ಆಷಾಢದಲ್ಲೊಂದು ದಿನ

​ಪ್ರಜಾವಾಣಿ ವಾರ್ತೆ
Published 3 ಆಗಸ್ಟ್ 2025, 5:45 IST
Last Updated 3 ಆಗಸ್ಟ್ 2025, 5:45 IST
<div class="paragraphs"><p>ಬ್ರಹ್ಮಾವರ ಮಹತೋಭಾರ ಮಹಾಲಿಂಗೇಶ್ವರ ದೇವಸ್ಥಾನದ ವಠಾರದಲ್ಲಿ ಬ್ರಹ್ಮಾವರ ತಾಲ್ಲೂಕು ವಿಪ್ರ ಮಹಿಳಾ ವೇದಿಕೆಯ ಆರು ವಲಯಗಳಿಂದ ಆಷಾಢ ಶ್ರಾವಣ ಸಂಭ್ರಮ ಸಾಂಸ್ಕೃತಿಕ ಕಾರ್ಯಕ್ರಮ ನಡೆಯಿತು.</p></div>

ಬ್ರಹ್ಮಾವರ ಮಹತೋಭಾರ ಮಹಾಲಿಂಗೇಶ್ವರ ದೇವಸ್ಥಾನದ ವಠಾರದಲ್ಲಿ ಬ್ರಹ್ಮಾವರ ತಾಲ್ಲೂಕು ವಿಪ್ರ ಮಹಿಳಾ ವೇದಿಕೆಯ ಆರು ವಲಯಗಳಿಂದ ಆಷಾಢ ಶ್ರಾವಣ ಸಂಭ್ರಮ ಸಾಂಸ್ಕೃತಿಕ ಕಾರ್ಯಕ್ರಮ ನಡೆಯಿತು.

   

ಬ್ರಹ್ಮಾವರ: ‘ನಮ್ಮ ಸಂಸ್ಕೃತಿಯ ಮೂಲವನ್ನು ಹುಡುಕುವ ಪ್ರಯತ್ನವಾಗಬೇಕು ಮತ್ತು ಅದನ್ನು ಇಂದಿನ ಯುವ ಪೀಳಿಗೆಗೆ ರವಾನಿಸುವ ಕಾರ್ಯವಾಗಬೇಕು’ ಎಂದು ಉಡುಪಿ ಜಿಲ್ಲಾ ವಿಪ್ರ ಮಹಿಳಾ ಅಧ್ಯಕ್ಷೆ ಕಾಂತಿ ರಾವ್‌ ಹೇಳಿದರು.

ಇಲ್ಲಿನ ಮಹತೋಭಾರ ಮಹಾಲಿಂಗೇಶ್ವರ ದೇವಸ್ಥಾನದ ವಠಾರದಲ್ಲಿ ತಾಲ್ಲೂಕು ವಿಪ್ರ ಮಹಿಳಾ ವೇದಿಕೆಯ ಆರು ವಲಯಗಳಿಂದ ನಡೆದ ಆಷಾಢ ಶ್ರಾವಣ ಸಂಭ್ರಮ ಸಾಂಸ್ಕೃತಿಕ ಕಾರ್ಯಕ್ರಮ, ಆಷಾಢದಲ್ಲಿ ಮಾಡುವ ತಿಂಡಿ ತಿನಿಸುಗಳ ಪ್ರದರ್ಶನ ಕಾರ್ಯಕ್ರಮಕ್ಕೆ ಚಾಲನೆ ನೀಡಿ ಅವರು ಮಾತನಾಡಿದರು.

ADVERTISEMENT

ವಿಪ್ರ ಮಹಿಳಾ ವೇದಿಕೆಯ ತಾಲ್ಲೂಕು ಘಟಕದ ಅಧ್ಯಕ್ಷೆ ಮಂಜುಳಾ ಎ. ಅಡಿಗ ಅಧ್ಯಕ್ಷತೆ ವಹಿಸಿದ್ದರು. ತಾಲ್ಲೂಕು ಬ್ರಾಹ್ಮಣ ಮಹಾಸಭಾ ಅಧ್ಯಕ್ಷ ಅಶೋಕ ಭಟ್ ಚಾಂತಾರು, ಪ್ರಧಾನ ಕಾರ್ಯದರ್ಶಿ ರಾಮನಾಥ ಅಲ್ಸೆ, ವಲಯ ಅಧ್ಯಕ್ಷ ವೈ. ರವೀಂದ್ರನಾಥ ರಾವ್, ತಾಲ್ಲೂಕು ಪ್ರದಾನ ಕಾರ್ಯದರ್ಶಿ ನಳಿನಿ ಪ್ರದೀಪ್ ರಾವ್, ಸಂಪನ್ಮೂಲ ವ್ಯಕ್ತಿ ಜಾಹ್ನವಿ ಹೇರ್ಳೆ, ಉಪಾಧ್ಯಕ್ಷೆ ಬಾರ್ಕೂರು ಪ್ರಭಾವತಿ ಕೆದ್ಲಾಯ ಭಾಗವಹಿಸಿದ್ದರು.

ವನಿತಾ ಉಪಾಧ್ಯ ನಿರೂಪಿಸಿದರು. ನಳಿನಿ ಪ್ರದೀಪ ರಾವ್‌ ಸ್ವಾಗತಿಸಿದರು. ಖಜಾಂಚಿ ಗೀತಾ ಅಧಿಕಾರಿ ಅತಿಥಿಗಳನ್ನು ಪರಿಚಯಿಸಿದರು. ಜತೆ ಕಾರ್ಯದರ್ಶಿ ಸಹನಾ ಹೆಬ್ಬಾರ್ ವಂದಿಸಿದರು. ನಾಗಲಕ್ಷ್ಮಿ ಭಟ್ ಸಹಕರಿಸಿದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.