ADVERTISEMENT

ಉಡುಪಿ | ಬಿಹಾರದಲ್ಲಿ ಎನ್‌ಡಿಎಗೆ ಗೆಲುವು: ಸಂಭ್ರಮಾಚರಣೆ

​ಪ್ರಜಾವಾಣಿ ವಾರ್ತೆ
Published 17 ನವೆಂಬರ್ 2025, 4:59 IST
Last Updated 17 ನವೆಂಬರ್ 2025, 4:59 IST
ಉಡುಪಿಯ ಬಿಜೆಪಿ ಜಿಲ್ಲಾ ಕಚೇರಿ ಬಳಿ ಶುಕ್ರವಾರ ಸಂಭ್ರಮಾಚರಣೆ ನಡೆಯಿತು
ಉಡುಪಿಯ ಬಿಜೆಪಿ ಜಿಲ್ಲಾ ಕಚೇರಿ ಬಳಿ ಶುಕ್ರವಾರ ಸಂಭ್ರಮಾಚರಣೆ ನಡೆಯಿತು   

ಉಡುಪಿ: ಬಿಹಾರದ ವಿಧಾನಸಭಾ ಚುನಾವಣೆಯಲ್ಲಿ ಎನ್‌ಡಿಎ ಒಕ್ಕೂಟ ಜಯ ಗಳಿಸಿದಕ್ಕೆ ಬಿಜೆಪಿ ಉಡುಪಿ ಜಿಲ್ಲಾ ಘಟಕದ ಅಧ್ಯಕ್ಷ ಕುತ್ಯಾರು ನವೀನ್ ಶೆಟ್ಟಿ ನೇತೃತ್ವದಲ್ಲಿ, ಜಿಲ್ಲಾ ಕಚೇರಿಯ ಬಳಿ ಶುಕ್ರವಾರ ಸಂಭ್ರಮಾಚರಣೆ ನಡೆಯಿತು.

ಬಳಿಕ ಮಾತನಾಡಿದ ಕುತ್ಯಾರು ನವೀನ್ ಶೆಟ್ಟಿ, ಇದು ಪ್ರಜಾಪ್ರಭುತ್ವದ ಗೆಲುವಿನ ಸಂಕೇತವಾಗಿದೆ. ಬಿಹಾರ ಚುನಾವಣೆ ಫಲಿತಾಂಶ ಇಡೀ ದೇಶಕ್ಕೆ ಸ್ಪಷ್ಟ ಸಂದೇಶವಾಗಿದೆ. ರಾಹುಲ್ ಗಾಂಧಿಯ ಸುಳ್ಳು ಪ್ರಚಾರ, ನಡಿಗೆಗಳು ಇನ್ನು ನಡೆಯಲ್ಲ ಎಂದರು.

ಪಟಾಕಿ ಸಿಡಿದು ಸಂಭ್ರಮಿಸಿದ ಕಾರ್ಯಕರ್ತರು ಬಳಿಕ ಸಿಹಿ ಹಂಚಿದರು. ಮುಖಂಡರಾದ ಪ್ರಭಾಕರ ಪೂಜಾರಿ, ಕಪ್ಪೆಟ್ಟು ಪ್ರವೀಣ್ ಶೆಟ್ಟಿ, ದಿನಕರ ಶೆಟ್ಟಿ ಹೆರ್ಗ, ಬಿಲ್ಲಾಡಿ ಪೃಥ್ವಿರಾಜ್ ಶೆಟ್ಟಿ, ಸಂಧ್ಯಾ ರಮೇಶ್, ಸತ್ಯಾನಂದ ನಾಯಕ್, ಬಾಲಕೃಷ್ಣ ಶೆಟ್ಟಿ, ಸಲೀಂ ಅಂಬಾಗಿಲು, ದಿನೇಶ್ ಅಮೀನ್, ಶಿವಕುಮಾರ್ ಅಂಬಲಪಾಡಿ ಇದ್ದರು.‌‌‌‌‌

ADVERTISEMENT

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.