ADVERTISEMENT

ಜನರ ದಿಕ್ಕು ತಪ್ಪಿಸುವ ಬಿಜೆಪಿ: ಮಂಜುನಾಥ ಪೂಜಾರಿ

​ಪ್ರಜಾವಾಣಿ ವಾರ್ತೆ
Published 10 ಆಗಸ್ಟ್ 2022, 4:36 IST
Last Updated 10 ಆಗಸ್ಟ್ 2022, 4:36 IST

ಹೆಬ್ರಿ: ‘ಆರ್‌ಎಸ್‌ಎಸ್‌ ಕೇಂದ್ರ ಕಚೇಯಲ್ಲಿ ರಾಷ್ಟ್ರಧ್ವಜವನ್ನು ಹಾರಿಸದ ಬಿಜೆಪಿಯವರು, ಅಂದು ಈದ್ಗಾ ಮೈದಾನ ವಿವಾದ ಎಬ್ಬಿಸಿದ್ದರು, ಈಗ ಕಾಂಗ್ರೆಸ್ ರಾಷ್ಟ್ರೀಯ ನಾಯಕ ವೀರಪ್ಪ ಮೊಯಿಲಿ ಅವರ ಬಗ್ಗೆ ಅಪಪ್ರಚಾರ ಮಾಡಿ, ಜನರ ದಿಕ್ಕು ತಪ್ಪಿಸುತ್ತಿದ್ದಾರೆ’ಎಂದು ಹೆಬ್ರಿ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಮುದ್ರಾಡಿ ಮಂಜುನಾಥ ಪೂಜಾರಿ ಆರೋಪಿಸಿದರು.

ಹೆಬ್ರಿಯಲ್ಲಿ ಸುದ್ದಿಗೋಷ್ಠಿಯಲ್ಲಿ‌ ಮಾತನಾಡಿದ ಅವರು, ‘ವೀರಪ್ಪ ಮೊಯಿಲಿ ಏನು ಎಂಬುದು ಕಾರ್ಕಳದ ಎಲ್ಲರಿಗೂ ಗೊತ್ತಿದೆ. ಭಾರತೀಯತೆ, ಸ್ವಾತಂತ್ರ್ಯ ಹೋರಾಟದ ಬಗ್ಗೆ ಬಿಜೆಪಿಯಿಂದ ಪಾಠ ಕೇಳುವ ಅಗತ್ಯ ಇಲ್ಲ. ಸಚಿವ ಸುನಿಲ್ ಕುಮಾರ್‌ಗೆ ವೀರಪ್ಪ ಮೊಯಿಲಿ ಬಗ್ಗೆ ಮಾತನಾಡುವ ನೈತಿಕ ಹಕ್ಕು ಇಲ್ಲ’ ಎಂದರು.

‘ಕಾಂಗ್ರೆಸ್ ಕಟ್ಟಿದ ಬಲಿಷ್ಠ ಭಾರತದ ಮೇಲೆ ನಿಂತು ಬಿಜೆಪಿ‌ ದಬ್ಬಾಳಿಕೆ ಮಾಡುತ್ತಿದೆ. ಕೋಮು ದ್ವೇಷ ತುಂಬಿ ಜನರನ್ನು ಒಡೆದು ಆಳುತ್ತಿದೆ. ದೇಶಕ್ಕಾಗಿ ಕಾಂಗ್ರೆಸ್‌ ಸ್ಥಾಪಿಸಿದ ಎಲ್ಲವನ್ನೂ ಬಿಜೆಪಿ ಮಾರಾಟ ಮಾಡಿದೆ. ದೇಶಕ್ಕೆ ಸ್ವಾತಂತ್ರ್ಯ ಲಭಿಸಿದಾಗ ಇದ್ದ ಸ್ಥಿತಿಯೇ ಈಗ ಭಾರತದಲ್ಲಿ ಬಿಜೆಪಿಯ ಆಡಳಿತದಲ್ಲಿ ಕಾಣುತ್ತಿದ್ದೇವೆ. ಬಿಜೆಪಿಯಿಂದಾಗಿ ಭಾರತ 75 ವರ್ಷಗಳಷ್ಟು ಹಿಂದೆ ಹೋಗಿದೆ’ಎಂದರು. ಕಾಂಗ್ರೆಸ್ ಜಿಲ್ಲಾ ಘಟಕದ ಉಪಾಧ್ಯಕ್ಷ ನೀರೆ ಕೃಷ್ಣ ಶೆಟ್ಟಿ, ಹೆಬ್ರಿ ಬ್ಲಾಕ್ ಪ್ರಧಾನ ಕಾರ್ಯದರ್ಶಿ ಎಚ್. ಜನಾರ್ದನ್‌, ಮಹಿಳಾ ಘಟಕದ ರಂಜನಿ ಹೆಬ್ಬಾರ್, ಸಂತೋಷ ನಾಯಕ್, ವಿಶು ಕುಮಾರ್ ಮುದ್ರಾಡಿ, ಹರೀಶ ಕುಲಾಲ್ ಇದ್ದರು.

ADVERTISEMENT

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.