ಸಂತೋಷ್ ಲಾಡ್
ಉಡುಪಿ: ‘ಬಿಜೆಪಿಯವರಲ್ಲಿ ವಾಷಿಂಗ್ ಮಷಿನ್ ಇದ್ದು, ಯಾರು ಭ್ರಷ್ಟಾಚಾರಿಗಳಿರುತ್ತಾರೋ ಅವರನ್ನು ಆ ಮಷಿನ್‌ಗೆ ಹಾಕಿ ವಾಷಿಂಗ್ ಪೌಡರ್‌ನಿಂದ ತೊಳೆಯುತ್ತಾರೆ. ಆಗ ಭ್ರಷ್ಟಾಚಾರಿಗಳು ಪ್ರಾಮಾಣಿಕರಾಗುತ್ತಾರೆ’ ಎಂದು ಕಾರ್ಮಿಕ ಸಚಿವ ಸಂತೋಷ್ ಲಾಡ್ ಲೇವಡಿ ಮಾಡಿದರು.
ಕಾಂಗ್ರೆಸ್ ಶಾಸಕ ವೀರೇಂದ್ರ ಪಪ್ಪಿ ವಿಚಾರವಾಗಿ ಸುದ್ದಿಗಾರರ ಜೊತೆ ಶುಕ್ರವಾರ ಇಲ್ಲಿ ಮಾತನಾಡಿದ ಅವರು, ‘ವೀರೇಂದ್ರ ಪಪ್ಪಿ ಅವರ ಮನೆಯಲ್ಲಿ ಇ.ಡಿ. ಶೋಧ ನಡೆದಿದೆ. ಆದರೆ ಮಹಾರಾಷ್ಟ್ರದಲ್ಲಿ ಅಜಿತ್ ಪವಾರ್ ಅವರ ಮೇಲೆ ₹60 ಸಾವಿರ ಕೋಟಿಯ ಭ್ರಷ್ಟಾಚಾರದ ಆರೋಪ ಇತ್ತು. ಅವರನ್ನೇ ಬಿಜೆಪಿಗೆ ಕರೆದುಕೊಂಡು ಹೋದರು. ಅಸ್ಸಾಂ ಮುಖ್ಯಮಂತ್ರಿ ಹಿಮಂತ ಬಿಸ್ವಾ ಶರ್ಮಾ ಅವರ ಮೇಲೂ ಆರೋಪ ಇತ್ತು, ಅವರನ್ನೂ ಬಿಜೆಪಿಗೆ ಸೇರಿಸಿಕೊಂಡರು’ ಎಂದರು.
‘ಯಾರು ದುಡ್ಡು ಕೊಡ್ತಾರೋ, ಅವರನ್ನು ಬಿಜೆಪಿಯವರು ಪಕ್ಷಕ್ಕೆ ಸೇರಿಸಿಕೊಳ್ಳುತ್ತಾರೆ. ಇಡೀ ಮಹಾರಾಷ್ಟ್ರ ಚುನಾವಣೆಗೆ ಅಜಿತ್ ಪವಾರ್ ಅವರು ಹಣ ಕೊಟ್ಟಿದ್ದಾರೆ’ ಎಂದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.