ADVERTISEMENT

ಕುಂದಾಪುರ: ಬೋರ್ಡ್‌ ಹೈಸ್ಕೂಲ್‌ನಲ್ಲಿ ಶತಮಾನೋತ್ತರ ಬೆಳ್ಳಿ ಹಬ್ಬದ ಭವನ ಹಸ್ತಾಂತರ

ಕಾರಂತ್, ಅಡಿಗ, ಮುದ್ದಣ್ಣ ಪ್ರತಿಮೆಗಳ ಅನಾವರಣ

​ಪ್ರಜಾವಾಣಿ ವಾರ್ತೆ
Published 13 ಜೂನ್ 2022, 8:40 IST
Last Updated 13 ಜೂನ್ 2022, 8:40 IST
ಕುಂದಾಪುರದ ಸರ್ಕಾರಿ ಪ್ರೌಢ ಶಾಲೆ ಬೋರ್ಡ್‌ ಹೈಸ್ಕೂಲ್ ಕಲಾ ಮಂದಿರದಲ್ಲಿ ಭಾನುವಾರ ನಡೆದ ಶತಮಾನೋತ್ತರ ಬೆಳ್ಳಿ ಹಬ್ಬ ಭವನ ಹಸ್ತಾಂತರ ಕಾರ್ಯಕ್ರಮದಲ್ಲಿ ಸಾಹಿತಿಗಳಾದ ಡಾ.ಕೋಟ ಶಿವರಾಮ ಕಾರಂತ್, ನಂದಳಿಕೆ ಮುದ್ದಣ್ಣ ಹಾಗೂ ಮೊಗೇರಿ ಗೋಪಾಲಕೃಷ್ಣ ಅಡಿಗರ ಪುತ್ಥಳಿಯನ್ನು ಕರ್ಣಾಟಕ ಬ್ಯಾಂಕಿನ ಆಡಳಿತ ನಿರ್ದೇಶಕ ಹಾಗೂ ಸಿಇಓ ಮಹಾಬಲೇಶ್ವರ ಎಂ.ಎಸ್ ಅನಾವರಣ ಮಾಡಿದರು. ಕೆ.ಎಸ್.ಉಪಾಧ್ಯಾಯ, ಅನಂತಕೃಷ್ಣ ಕೊಡ್ಗಿ, ನಂದಳಿಕೆ ಬಾಲಚಂದ್ರ, ಹೇಮಂತ್ ಪೈ ಕಟೀಲ್, ಡಾ.ಎಚ್.ರಾಮಮೋಹನ್, ರಾಜೇಶ್ ಕಾವೇರಿ ಇದ್ದರು.
ಕುಂದಾಪುರದ ಸರ್ಕಾರಿ ಪ್ರೌಢ ಶಾಲೆ ಬೋರ್ಡ್‌ ಹೈಸ್ಕೂಲ್ ಕಲಾ ಮಂದಿರದಲ್ಲಿ ಭಾನುವಾರ ನಡೆದ ಶತಮಾನೋತ್ತರ ಬೆಳ್ಳಿ ಹಬ್ಬ ಭವನ ಹಸ್ತಾಂತರ ಕಾರ್ಯಕ್ರಮದಲ್ಲಿ ಸಾಹಿತಿಗಳಾದ ಡಾ.ಕೋಟ ಶಿವರಾಮ ಕಾರಂತ್, ನಂದಳಿಕೆ ಮುದ್ದಣ್ಣ ಹಾಗೂ ಮೊಗೇರಿ ಗೋಪಾಲಕೃಷ್ಣ ಅಡಿಗರ ಪುತ್ಥಳಿಯನ್ನು ಕರ್ಣಾಟಕ ಬ್ಯಾಂಕಿನ ಆಡಳಿತ ನಿರ್ದೇಶಕ ಹಾಗೂ ಸಿಇಓ ಮಹಾಬಲೇಶ್ವರ ಎಂ.ಎಸ್ ಅನಾವರಣ ಮಾಡಿದರು. ಕೆ.ಎಸ್.ಉಪಾಧ್ಯಾಯ, ಅನಂತಕೃಷ್ಣ ಕೊಡ್ಗಿ, ನಂದಳಿಕೆ ಬಾಲಚಂದ್ರ, ಹೇಮಂತ್ ಪೈ ಕಟೀಲ್, ಡಾ.ಎಚ್.ರಾಮಮೋಹನ್, ರಾಜೇಶ್ ಕಾವೇರಿ ಇದ್ದರು.   

ಕುಂದಾಪುರ: ಹಳೆಯ ವಿದ್ಯಾರ್ಥಿಗಳು ಶಿಕ್ಷಣ ಸಂಸ್ಥೆಗಳ ಶಾಶ್ವತ ಆಧಾರಸ್ತಂಭಗಳು. ಹಳೆ ವಿದ್ಯಾರ್ಥಿಗಳ ಚಟುವಟಿಕೆ ನೆನಪಿನ ಬುತ್ತಿಗಳಾಗಬೇಕಾದರೆ, ಅವುಗಳನ್ನು ಶಾಶ್ವತವಾಗಿ ಸಂಗ್ರಹಿಸಿಡುವ ಕಾರ್ಯಗಳು ನಡೆಯಬೇಕು ಎಂದು ಕರ್ಣಾಟಕ ಬ್ಯಾಂಕ್‌ ಆಡಳಿತ ನಿರ್ದೇಶಕ ಹಾಗೂ ಸಿಇಒ ಮಹಾಬಲೇಶ್ವರ ಎಂ.ಎಸ್ ಹೇಳಿದರು.

ಇಲ್ಲಿನ ಸರ್ಕಾರಿ ಪ್ರೌಢಶಾಲೆ (ಬೋರ್ಡ್‌ ಹೈಸ್ಕೂಲ್) ಕಲಾ ಮಂದಿರದಲ್ಲಿ ಭಾನುವಾರ ನಡೆದ ಶತಮಾನೋತ್ತರ ಬೆಳ್ಳಿ ಹಬ್ಬ ಭವನ ಹಸ್ತಾಂತರ ಹಾಗೂ ಇಲ್ಲಿ ದೈಹಿಕ ಶಿಕ್ಷಣ ಶಿಕ್ಷಕರಾಗಿದ್ದ ನಂದಳಿಕೆ ಮುದ್ದಣ, ವಿದ್ಯಾರ್ಥಿಗಳಾದ ಕೋಟ ಶಿವರಾಮ ಕಾರಂತ ಹಾಗೂ ಮೊಗೇರಿ ಗೋಪಾಲಕೃಷ್ಣ ಅಡಿಗರ ಪುತ್ಥಳಿ ಅನಾವರಣ ಮಾಡಿ ಅವರು ಮಾತನಾಡಿದರು.

‘ಸಾಧನೆಯ ಮೂಲಕ ಸಮಾಜದ ಆಸ್ತಿಗಳಾಗಬೇಕು. ಜ್ಞಾನಪೀಠ ಪುರಸ್ಕೃತ ಕೋಟ ಶಿವರಾಮ ಕಾರಂತರು ಶಿಕ್ಷಣಾರ್ಜನೆ ಮಾಡಿರುವ ಪುಣ್ಯ ಭೂಮಿ ಕುಂದಾಪುರ. ಕಾರಂತ, ಅಡಿಗ ಹಾಗೂ ಮುದ್ದಣ ಅವರಂತಹ ಸಾಹಿತ್ಯ ರತ್ನಗಳು ಶಾಶ್ವತವಾಗಿ ಜನ ಮಾನಸದಲ್ಲಿ ಉಳಿಯುವಂತಹ ಕಾರ್ಯಗಳು ನಡೆಯಬೇಕು’ ಎಂದರು.

ADVERTISEMENT

ಶತಮಾನೋತ್ತರ ಬೆಳ್ಳಿ ಹಬ್ಬ ಸಮಿತಿ ಕಾರ್ಯಾಧ್ಯಕ್ಷ ಮೋಹನದಾಸ ಶೆಣೈ ಮಾತನಾಡಿ, 135 ವರ್ಷಕ್ಕಿಂತಲೂ ಅಧಿಕ ಇತಿಹಾಸದ ಈ ಶಾಲೆ ಪ್ರತಿಭಾನ್ವಿತರಿಗೆ ಆಸರೆ ನೀಡಿ ಪೋಷಣೆ ಮಾಡಿದೆ. ಪ್ರಮುಖ ಶಿಕ್ಷಣ ಸಂಸ್ಥೆಯಾಗಿ ಗುರುತಿಸಿಕೊಂಡಿದೆ’ ಎಂದು ಶ್ಲಾಘಿಸಿದರು.

ಪತ್ರಕರ್ತ ರಾಜೇಶ್ ಕೆ.ಸಿ , ದಾನಿ ಹೇಮಂತ್ ಪೈ ಕಟೀಲ್, ಪ್ರಾಂಶುಪಾಲ ಬಿ. ಜಿ.ರಾಮಕೃಷ್ಣ, ಉಪ ಪ್ರಾಂಶುಪಾಲೆ ವಿನುತಾ ಗಾಂವ್ಕರ್, ಸಮಿತಿ ಪ್ರಧಾನ ಕಾರ್ಯದರ್ಶಿ ಸುಬ್ರಹ್ಮಣ್ಯ ಜೋಷಿ,ಸಮಿತಿ ಕಾರ್ಯದರ್ಶಿ ನಾರಾಯಣ ಕೆ. ಮಾತನಾಡಿದರು. ಬೆಂಗಳೂರಿನ ಉದ್ಯಮಿ ದಿನೇಶ್ ಕುಂದಾಪುರ, ಶತಮಾನೋತ್ಸವ ಬೆಳ್ಳಿ ಹಬ್ಬ ಸಮಿತಿ ಪ್ರಧಾನ ಕಾರ್ಯದರ್ಶಿ ಸುಬ್ರಹ್ಮಣ್ಯ ಜೋಷಿ, ಕೋಶಾಧಿಕಾರಿ ಕೆ.ಸೀತಾರಾಮ ನಕ್ಕತ್ತಾಯ, ಉದ್ಯಮಿ ಎ.ಎ.ಕೊಡ್ಗಿ ಇದ್ದರು.

ಮಾಜಿ ಪ್ರಾಂಶುಪಾಲ ನಾರಾಯಣ ಶೇರ್ವೆಗಾರ್, ನಿವೃತ್ತ ಪ್ರಾಂಶುಪಾಲ ಕೆ.ಸೂರ್ಯನಾರಾಯಣ ಉಪಾಧ್ಯಾಯ, ನಿವೃತ್ತ ಶಿಕ್ಷಕರಾದ ಅಸೋಡು ರಾಜೀವ ಶೆಟ್ಟಿ, ಸೂರ್ಯ ನಾರಾಯಣ ಬಾಸ್ರಿ, ದಿನಕರ ಕೋತ್ವಾಲ್ ಅವರನ್ನು ಸನ್ಮಾನಿಸಲಾಯಿತು.

ಶತಮಾನೋತ್ತರ ಬೆಳ್ಳಿ ಹಬ್ಬದ ಕಟ್ಟಡ ನಿರ್ಮಾಣಕ್ಕೆ ಸಹಕಾರ ನೀಡಿದ ದಾನಿಗಳು, ಎಂಜಿನಿಯರ್ ಸತೀಶ್ ಪೂಜಾರಿ ಹಾಗೂ ಪುತ್ಥಳಿ ನಿರ್ಮಿಸಿದ ಡಾ. ಜನಾರ್ದನ್ ಹಾವಂಜೆ ಅವರನ್ನು ಗೌರವಿಸಲಾಯಿತು.

ಕರ್ಣಾಟಕ ಬ್ಯಾಂಕ್ ಮಾಜಿ ನಿರ್ದೇಶಕ ಡಾ. ರಾಮ ಮೋಹನ್ ಸ್ವಾಗತಿಸಿದರು. ಪುರಸಭೆಯ ಮಾಜಿ ಉಪಾಧ್ಯಕ್ಷ ರಾಜೇಶ್ ಕಾವೇರಿ, ರಾಮಚಂದ್ರ ಬಿ.ಎನ್ ಹಾಗೂ ವರದರಾಜ್ ಪೈ ಸನ್ಮಾನಿತರ ವಿವರ ನೀಡಿದರು. ಕಲಾಕ್ಷೇತ್ರ ಸಂಘಟನೆಯ ಅಧ್ಯಕ್ಷ ಕಿಶೋರಕುಮಾರ ಬಿ. ನಿರೂಪಿಸಿದರು, ಹಳೆ ವಿದ್ಯಾರ್ಥಿ ಸಂಘದ ಕಾರ್ಯದರ್ಶಿ ಅನಂತಕೃಷ್ಣ ಕೊಡ್ಗಿ ವಂದಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.