ADVERTISEMENT

ಶ್ರೀಲಕ್ಷ್ಮೀ ಬೋಟ್ ಬಿಡುಗಡೆ: ₹ 2.50 ಲಕ್ಷ ದಂಡ

3 ದಿನ ಮಹಾರಾಷ್ಟ್ರದ ವಶದಲ್ಲಿದ್ದ ಮಲ್ಪೆಯ ಬೋಟ್‌

​ಪ್ರಜಾವಾಣಿ ವಾರ್ತೆ
Published 16 ಫೆಬ್ರುವರಿ 2020, 9:03 IST
Last Updated 16 ಫೆಬ್ರುವರಿ 2020, 9:03 IST

ಉಡುಪಿ: ಮೂರು ದಿನಗಳಿಂದ ಮಹಾರಾಷ್ಟ್ರ ಕೋಸ್ಟ್‌ಗಾರ್ಡ್‌ ವಶದಲ್ಲಿದ್ದ ಮಲ್ಪೆಯ ಶ್ರೀಲಕ್ಷ್ಮೀ ಬೋಟ್‌ ಅನ್ನು ಶನಿವಾರ ಬಿಡುಗಡೆ ಮಾಡಲಾಗಿದೆ.

ಬೆಳಿಗ್ಗೆ ಮಹಾರಾಷ್ಟ್ರದ ಮಾಲ್ವಾನ್‌ನ ಮೀನುಗಾರಿಕಾ ಇಲಾಖೆ ಹಾಗೂ ಕೋಸ್ಟ್‌ಗಾರ್ಡ್‌ ಅಧಿಕಾರಿಗಳು ಪ್ರಕರಣದ ವಿಚಾರಣೆ ನಡೆಸಿ ₹ 2.50 ಲಕ್ಷ ದಂಡ ಪಾವತಿಸುವಂತೆ ಶ್ರೀಲಕ್ಷ್ಮೀ ಬೋಟ್‌ ಮಾಲೀಕರಿಗೆ ಸೂಚಿಸಿದ್ದರು. ದಂಡ ಪಾವತಿಸಿದ ಬಳಿಕ ಬೋಟ್‌ ಬಿಡುಗಡೆ ಮಾಡಲಾಗಿದೆ ಎಂದು ಕರಾವಳಿ ಕಾವಲು ಪಡೆಯ ಅಧಿಕಾರಿಗಳು ‘ಪ್ರಜಾವಾಣಿ’ಗೆ ಮಾಹಿತಿ ನೀಡಿದರು.

ದಂಡ ಏಕೆ ?

ADVERTISEMENT

ಒಂದು ರಾಜ್ಯದ ಸಮುದ್ರ ಗಡಿಯ 12 ನಾಟಿಕಲ್ ಮೈಲು ವ್ಯಾಪ್ತಿಯಲ್ಲಿ ಬೇರೆ ರಾಜ್ಯದ ಮೀನುಗಾರರು ಮೀನುಗಾರಿಕೆ ಮಾಡುವಂತಿಲ್ಲ. ಈ ನಿಯಮವನ್ನು ಉಲ್ಲಂಘಿಸಿದ್ದಕ್ಕೆ ಫೆ.12ರಂದು ಮಲ್ಪೆಯ ಶ್ರೀಲಕ್ಷ್ಮಿ ಬೋಟ್ ಹಾಗೂ ಬೋಟ್‌ನಲ್ಲಿದ್ದ ಮೀನನ್ನು ಮಹಾರಾಷ್ಟ್ರದ ಮಾಲ್ವಾನ್‌ನಲ್ಲಿ ವಶಕ್ಕೆ ಪಡೆಯಲಾಗಿತ್ತು ಎಂದು ಅಧಿಕಾರಿಗಳು ತಿಳಿಸಿದರು.

ಕರ್ನಾಟಕ ಹಾಗೂ ಮಹಾರಾಷ್ಟ್ರ ಅಧಿಕಾರಿಗಳ ಮಾತುಕತೆಯಿಂದ ಬೋಟ್ ಬಿಡುಗಡೆಯಾಗಿದೆ. ಮೀನುಗಾರರು ಸುರಕ್ಷಿತವಾಗಿದ್ದಾರೆ. ಬೋಟ್‌ ಶೀಘ್ರ ಮಲ್ಪೆ ಬಂದರು ತಲುಪಲಿದೆ ಎಂದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.