ಬ್ರಹ್ಮಾವರ: ಕೋಟ ಮೂಡುಗಿಳಿಯಾರಿನ ಸರ್ಕಾರಿ ಸಂಯುಕ್ತ ಪ್ರೌಢಶಾಲೆ ಶೇ.100 ಫಲಿತಾಂಶ ಪಡೆದಿದೆ. ಶಾಲೆಯಿಂದ ಪರೀಕ್ಷೆಗೆ ಹಾಜರಾದ 8 ವಿದ್ಯಾರ್ಥಿಗಳ ಪೈಕಿ ತೃಪ್ತಿ 617 ಅಂಕ ಗಳಿಸಿರುವುದಲ್ಲದೇ, ಕನ್ನಡದಲ್ಲಿ 125 ಮತ್ತು ಗಣಿತದಲ್ಲಿ 100 ಅಂಕ ಗಳಿಸಿ ಗಮನ ಸೆಳೆದಿರುತ್ತಾಳೆ ಎಂದು ಮುಖ್ಯ ಶಿಕ್ಷಕಿ ಜುಲಿಯೆಟ್ ಕ್ರಾಸ್ತಾ ತಿಳಿಸಿದ್ದಾರೆ.
ಮಾಬುಕಳ ಹಂಗಾರಕಟ್ಟೆಯ ಚೇತನಾ ಪ್ರೌಢಶಾಲೆ
ಮಾಬುಕಳ ಹಂಗಾರಕಟ್ಟೆಯ ಚೇತನಾ ಪ್ರೌಢಶಾಲೆ ಈ ಬಾರಿಯ ಎಸ್ಸೆಸ್ಸೆಲ್ಸಿಯಲ್ಲಿ ಶೇ.95 ಫಲಿತಾಂಶ ದಾಖಲಿಸಿದೆ. 11 ವಿದ್ಯಾರ್ಥಿಗಳು ವಿಶಿಷ್ಟ ಶ್ರೇಣಿ, 21 ವಿದ್ಯಾರ್ಥಿಗಳು ಪ್ರಥಮ ಮತ್ತು ಓರ್ವ ವದ್ಯಾರ್ಥಿ ದ್ವಿತೀಯ ದರ್ಜೆಯಲ್ಲಿ ಉತ್ತೀರ್ಣರಾಗಿದ್ದಾರೆ. ಶಾಲೆಯ ವಿದ್ಯಾರ್ಥಿನಿ ವೈಷ್ಣವಿ 620 ಮತ್ತು ಪೂರ್ವಿ 603 ಅಂಕಗಳಿಸಿದ್ದಾರೆ ಎಂದು ಮುಖ್ಯ ಶಿಕ್ಷಕಿ ಕಲ್ಪನಾ ತಿಳಿಸಿದ್ದಾರೆ.
ಸಾಹೇಬರಕಟ್ಟೆಪ್ರೌಢಶಾಲೆ
ಸಾಹೇಬರಕಟ್ಟೆ ಮಹಾತ್ಮ ಗಾಂಧಿ ಪ್ರೌಢಶಾಲೆ ಈ ಬಾರಿ ಶೇ.92.5 ಫಲಿತಾಂಶ ಪಡೆದಿದೆ. ಶಾಲೆಯಿಂದ ಪರೀಕ್ಷೆಗೆ ಹಾಜರಾದ 40 ವಿದ್ಯಾರ್ಥಿಗಳ ಪೈಕಿ ಇಬ್ಬರು ವಿಶಿಷ್ಟ ಶ್ರೇಣಿ, 26 ವಿದ್ಯಾರ್ಥಿಗಳು ಪ್ರಥಮ ಶ್ರೇಣಿ ಯಲ್ಲಿ ಪಾಸಾಗಿದ್ದಾರೆ. ಶಾಲೆಯ ಶ್ರೀನಿಧಿ ಹೆಗ್ಡೆ 609 ಅಂಕ ಗಳಿಸಿ ಶಾಲೆಗೆ ಪ್ರಥಮಳಾಗಿದ್ದಾಳೆ ಎಂದು ಶಾಲೆಯ ಮುಖ್ಯ ಶಿಕ್ಷಕ ಸತೀಶ ನಾಯ್ಕ ತಿಳಿಸಿದ್ದಾರೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.