
ಬ್ರಹ್ಮಾವರ: ಕೋಡಿ ಗ್ರಾಮ ಪಂಚಾಯಿತಿ ಜನತೆಯ ಬಹುಕಾಲದ ಬೇಡಿಕೆಯಾದ ಅನಾದಿ ಸ್ಥಳದ ಹಕ್ಕುಪತ್ರ ವಿತರಣೆ ಕುರಿತು ತಹಶೀಲ್ದಾರ್ ಶ್ರೀಕಾಂತ ಎಸ್. ಹೆಗ್ಡೆ ಗುರುವಾರ ಕೋಡಿಗೆ ಭೇಟಿ ನೀಡಿ ದಾಖಲೆ ಪರಿಶೀಲನೆ ನಡೆಸಿದರು.
ಸರ್ಕಾರಿ ಅನಾದಿ ಸ್ಥಳ ಪರಿಶೀಲನೆ 1991 ಹಿಂದಿನ ದಾಖಲೆಯನ್ನು ಪರಿಶೀಲಿಸಿ ಪಡೆಯಲಾಯಿತು. ಉಪ ತಹಶೀಲ್ದಾರ್ ಚಂದ್ರಹಾಸ ಬಂಗೇರ, ಕೋಟ ಕಂದಾಯ ಅಧಿಕಾರಿ ಮಂಜು ಬಿಲ್ಲವ, ಕೋಡಿ ಗ್ರಾಮ ಲೆಕ್ಕಿಗ ಗಿರೀಶ ಕುಮಾರ್, ಸಹಾಯಕಿ ಸರೋಜ ಪೂಜಾರಿ, ಪಂಚಾಯಿತಿ ಅಧ್ಯಕ್ಷೆ ಗೀತಾ ಖಾರ್ವಿ, ಮಾಜಿ ಅಧ್ಯಕ್ಷರಾದ ಪ್ರಭಾಕರ ಮೆಂಡನ್, ಲಕ್ಷ್ಮಣ ಸುವರ್ಣ, ಕೃಷ್ಣ ಪೂಜಾರಿ, ಸತೀಶ ಕುಂದರ್, ಪಿಡಿಒ ರವೀಂದ್ರ ರಾವ್, ಗ್ರಾಮಸ್ಥರು ಭಾಗವಹಿಸಿದ್ದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.