ADVERTISEMENT

ಬ್ರಹ್ಮಾವರ | ಮಕ್ಕಳಲ್ಲಿ ಸಂಸ್ಕೃತಿ, ಸಂಸ್ಕಾರ ಬೆಳೆಸಿ: ಸೂರ್ಯಕಾಂತ ಜೆ. ಸುವರ್ಣ

​ಪ್ರಜಾವಾಣಿ ವಾರ್ತೆ
Published 10 ಮೇ 2025, 16:28 IST
Last Updated 10 ಮೇ 2025, 16:28 IST
ಕಚ್ಚೂರು ನಾಗೇಶ್ವರ ದೇವಸ್ಥಾನದಲ್ಲಿ ವಾರ್ಷಿಕ ಪ್ರತಿಷ್ಠಾ ವರ್ಧಂತ್ಯುತ್ಸವದ ಪ್ರಯುಕ್ತ ನಡೆದ ಸಭಾ ಕಾರ್ಯಕ್ರಮವನ್ನು ಮುಂಬೈ ಭಾರತ್ ಕೊ– ಆಪರೇಟಿವ್ ಬ್ಯಾಂಕ್ ಅಧ್ಯಕ್ಷ ಸೂರ್ಯಕಾಂತ ಸುವರ್ಣ ಉದ್ಘಾಟಿಸಿದರು
ಕಚ್ಚೂರು ನಾಗೇಶ್ವರ ದೇವಸ್ಥಾನದಲ್ಲಿ ವಾರ್ಷಿಕ ಪ್ರತಿಷ್ಠಾ ವರ್ಧಂತ್ಯುತ್ಸವದ ಪ್ರಯುಕ್ತ ನಡೆದ ಸಭಾ ಕಾರ್ಯಕ್ರಮವನ್ನು ಮುಂಬೈ ಭಾರತ್ ಕೊ– ಆಪರೇಟಿವ್ ಬ್ಯಾಂಕ್ ಅಧ್ಯಕ್ಷ ಸೂರ್ಯಕಾಂತ ಸುವರ್ಣ ಉದ್ಘಾಟಿಸಿದರು   

ಬ್ರಹ್ಮಾವರ: ಮಕ್ಕಳಲ್ಲಿ ಉತ್ತಮ ಸಂಸ್ಕೃತಿ, ಸಂಸ್ಕಾರ ಬೆಳೆಸುವುದರಿಂದ ಅವರಲ್ಲಿ ಶಿಸ್ತು, ತಾಳ್ಮೆ, ಸಧೃಢತೆ ರೂಪುಗೊಳ್ಳಲು ಸಾಧ್ಯ. ಈ ನಿಟ್ಟಿನಲ್ಲಿ ಧಾರ್ಮಿಕ ಕಾರ್ಯಕ್ರಮ, ಭಜನೆ ಪೂರಕವಾಗಲಿ ಎಂದು ಮುಂಬೈ ಭಾರತ್ ಕೊ ಆಪರೇಟಿವ್ ಬ್ಯಾಂಕ್ ಅಧ್ಯಕ್ಷ ಸೂರ್ಯಕಾಂತ ಜೆ. ಸುವರ್ಣ ಹೇಳಿದರು.

ಕಚ್ಚೂರು ನಾಗೇಶ್ವರ ದೇವಸ್ಥಾನದಲ್ಲಿ ವಾರ್ಷಿಕ ಪ್ರತಿಷ್ಠಾ ವರ್ಧಂತ್ಯುತ್ಸವದ ಪ್ರಯುಕ್ತ ನಡೆದ ಸಭಾ ಕಾರ್ಯಕ್ರಮ ಉದ್ಘಾಟಿಸಿ ಅವರು ಮಾತನಾಡಿದರು.

ದೇವಸ್ಥಾನದ ಮಾಜಿ ಆಡಳಿತ ಮೊಕ್ತೇಸರ ಸುರೇಶ ಭಂಡಾರಿ ಕಡಂದಲೆ ಮಾತನಾಡಿ, ದೇವತಾ ಆರಾಧನೆಯಿಂದ ದುರ್ಗುಣ ದೂರವಾಗುತ್ತದೆ. ನಂಬಿಕೆ, ವಿಶ್ವಾಸದಿಂದ ಇಷ್ಟಾರ್ಥ ಸಿದ್ಧಿಸುತ್ತದೆ. ಸಂಘಟಿತರಾಗಿ ಎಲ್ಲರೂ ಒಗ್ಗೂಡುವುದರಿಂದ ಸಮಾಜದ ಅಭಿವೃದ್ದಿಯಾಗುತ್ತದೆ. ಪ್ರತಿಯೊಬ್ಬರೂ ಕರ್ತವ್ಯವನ್ನು ಸಮರ್ಥವಾಗಿ ನಿರ್ವಹಿಸಿ ಸಮಾಜ ಬಾಂಧವರ ಸಂಕಷ್ಟಕ್ಕೆ ನೆರವಾಗಿ ಎಂದರು.

ADVERTISEMENT

ಆಡಳಿತ ಮೊಕ್ತೇಸರ ಲಕ್ಷ್ಮಣ್ ಕರಾವಳಿ ಅಧ್ಯಕ್ಷತೆ ವಹಿಸಿದ್ದರು. ವಿಧಾನ ಪರಿಷತ್ ಸದಸ್ಯ ಕಿಶೋರ್ ಕುಮಾರ್ ಪುತ್ತೂರು, ಭಂಡಾರಿ ಮಹಾಮಂಡಲ ಅಧ್ಯಕ್ಷ ಶಶಿಧರ ಭಂಡಾರಿ ಕಾರ್ಕಳ, ಬಾರ್ಕೂರು ಗ್ರಾಮ ಪಂಚಾಯಿತಿ ಅಧ್ಯಕ್ಷ ಶಾಂತಾರಾಮ ಶೆಟ್ಟಿ, ಉತ್ಸವ ಸಮಿತಿ ಅಧ್ಯಕ್ಷ ಪ್ರಭಾಕರ ಭಂಡಾರಿ ಮುಂಬೈ, ಮುಂಬೈ ಭಂಡಾರಿ ಸೇವಾ ಸಮಿತಿ ಅಧ್ಯಕ್ಷ ರಂಜಿತ್ ಭಂಡಾರಿ, ಪ್ರಮುಖರಾದ ಪ್ರಸಾದ ಭಂಡಾರಿ ಮುನಿಯಾಲು, ಗುರುದಾಸ ಭಂಡಾರಿ ಹಿರೇಬೆಟ್ಟು, ಶೇಖರ ಎಚ್. ಭಂಡಾರಿ ಕಾರ್ಕಳ, ಮುರಳೀಧರ ಎಲ್. ಭಂಡಾರಿ, ಲಲಿತಾ ವಿ. ಭಂಡಾರಿ, ಶ್ರೀಧರ ಭಂಡಾರಿ ಬಿರ್ತಿ, ರಮೇಶ ವಿ. ಭಂಡಾರಿ ಭಾಗವಹಿಸಿದ್ದರು.

ಶೈಕ್ಷಣಿಕ ಸಾಧನೆ ಮಾಡಿದ ವಿದ್ಯಾರ್ಥಿಗಳಿಗೆ ಪ್ರತಿಭಾ ಪುರಸ್ಕಾರ ನೀಡಲಾಯಿತು. ಸಾಧಕರನ್ನು ಸನ್ಮಾನಿಸಲಾಯಿತು. ಉತ್ಸವ ಸಮಿತಿ ಕಾರ್ಯದರ್ಶಿ ಶಶಿಧರ ಡಿ. ಭಂಡಾರಿ ಡೊಂಬಿವಿಲಿ ಸ್ವಾಗತಿಸಿದರು. ಸಂಧ್ಯಾ ಉಲಾಯಿಬೆಟ್ಟು ನಿರೂಪಿಸಿದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.