
ಪ್ರಜಾವಾಣಿ ವಾರ್ತೆ
ಬ್ರಹ್ಮಾವರ: ಮಟಪಾಡಿಯಿಂದ ನೀಲಾವರಕ್ಕೆ ಸಾಗುವ ರಸ್ತೆಯ ಎರಡೂ ಬದಿ ಬೆಂಕಿ ಕಾಣಿಸಿಕೊಂಡು, ಎಕರೆ ಗಟ್ಟಲೆ ಪ್ರದೇಶದಲ್ಲಿ ಬೆಳೆದ ವಿವಿಧ ಬೆಳೆ ಹಾನಿಯಾದ ಘಟನೆ ಗುರುವಾರ ನಡೆದಿದೆ.
ಪರಿಸರದಲ್ಲಿ ಬೆಳೆದ ಫೈನಾಪಲ್, ಅಡಿಕೆ, ತೆಂಗು ಗಿಡಗಳು ಬೆಂಕಿಯ ಅಬ್ಬರಕ್ಕೆ ಸುಟ್ಟು ಕರಕಲಾಗಿದೆ. ಪರಿಸರದಲ್ಲಿ ಸಣ್ಣಪುಟ್ಟ ಕೈಗಾರಿಕೆಗಳಿದ್ದು, ಹೆಚ್ಚಿನ ಅವಘಡ ಸಂಭವಿಸುವ ಮೊದಲೇ ಸ್ಥಳೀಯರು ಮತ್ತು ಅಗ್ನಿಶಾಮಕ ದಳದ ಕಾರ್ಯಾಚರಣೆಯಿಂದ ಭಾರಿ ಅನಾಹುತ ತಪ್ಪಿದೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.