ADVERTISEMENT

ಬ್ರಹ್ಮಾವರ: ಜೀರ್ಣೋದ್ಧಾರ ಕಾರ್ಯಕ್ಕೆ ಶಾಸಕ ಯಶ್‌ಪಾಲ್‌ ಚಾಲನೆ

ಬೆನಗಲ್ ಸಾಸ್ತಾವು ಅಂಬಾ ಭವಾನಿ ಸನ್ನಿಧಿ

​ಪ್ರಜಾವಾಣಿ ವಾರ್ತೆ
Published 10 ಡಿಸೆಂಬರ್ 2023, 13:05 IST
Last Updated 10 ಡಿಸೆಂಬರ್ 2023, 13:05 IST
ಬ್ರಹ್ಮಾವರ ತಾಲ್ಲೂಕಿನ ಚೇರ್ಕಾಡಿ ಬೆನಗಲ್ ಸಾಸ್ತಾವಿನಲ್ಲಿ ₹40 ಲಕ್ಷ ವೆಚ್ಚದಲ್ಲಿ ನಡೆಯುವ ಅಂಬಾ ಭವಾನಿ ಕಟ್ಟೆ ಅಮ್ಮನವರ ಸನ್ನಿಧಿಯ ಜೀರ್ಣೋದ್ಧಾರ ಕಾರ್ಯಕ್ರಮಗಳಿಗೆ ಶಾಸಕ ಯಶ್‌ಪಾಲ್‌ ಸುವರ್ಣ ಚಾಲನೆ ನೀಡಿದರು
ಬ್ರಹ್ಮಾವರ ತಾಲ್ಲೂಕಿನ ಚೇರ್ಕಾಡಿ ಬೆನಗಲ್ ಸಾಸ್ತಾವಿನಲ್ಲಿ ₹40 ಲಕ್ಷ ವೆಚ್ಚದಲ್ಲಿ ನಡೆಯುವ ಅಂಬಾ ಭವಾನಿ ಕಟ್ಟೆ ಅಮ್ಮನವರ ಸನ್ನಿಧಿಯ ಜೀರ್ಣೋದ್ಧಾರ ಕಾರ್ಯಕ್ರಮಗಳಿಗೆ ಶಾಸಕ ಯಶ್‌ಪಾಲ್‌ ಸುವರ್ಣ ಚಾಲನೆ ನೀಡಿದರು   

ಬೆನಗಲ್(ಬ್ರಹ್ಮಾವರ): ಪುರಾತನ ಸಂಸ್ಕೃತಿ, ಸಂಪ್ರದಾಯಕ್ಕೆ ಮರಾಠಿ ಬಾಂಧವರ ಕೊಡುಗೆ ಅಪಾರ ಎಂದು ಶಾಸಕ ಯಶ್‌ಪಾಲ್‌ ಸುವರ್ಣ ಹೇಳಿದರು.

ಬ್ರಹ್ಮಾವರ ತಾಲ್ಲೂಕಿನ ಚೇರ್ಕಾಡಿ ಬೆನಗಲ್‌ ಸಾಸ್ತಾವಿನಲ್ಲಿ ₹40 ಲಕ್ಷ ವೆಚ್ಚದಲ್ಲಿ ನಡೆಯುವ ಅಂಬಾ ಭವಾನಿ ಕಟ್ಟೆ ಅಮ್ಮನವರ ಸನ್ನಿಧಿಯ ಜೀರ್ಣೋದ್ಧಾರ ಕಾರ್ಯಕ್ರಮಗಳಿಗೆ ಚಾಲನೆ ನೀಡಿ ಅವರು ಮಾತನಾಡಿದರು.

ನಮ್ಮ ಸಂಸ್ಕೃತಿಯನ್ನು ಇಂದಿನ ಯುವಜನಾಂಗ ಉಳಿಸಿ, ಬೆಳೆಸಿಕೊಂಡು ಹೋಗುತ್ತಿರುವುದು ಶ್ಲಾಘನೀಯ ಎಂದು ಹೇಳಿದರು.

ADVERTISEMENT

ಗುರಿಕಾರ ಆನಂದ ನಾಯ್ಕ ಅಧ್ಯಕ್ಷತೆ ವಹಿಸಿದ್ದರು.

ಇದೇ ಸಂದರ್ಭದಲ್ಲಿ ಶಾಸಕ ಯಶ್‌ಪಾಲ್‌ ಸುವರ್ಣ ಅವರನ್ನು ಗೌರವಿಸಲಾಯಿತು.

ನಿವೃತ್ತ ಮುಖ್ಯ ಶಿಕ್ಷಕ ಮಹಾಬಲೇಶ್ವರ ಉಡುಪ, ಜಿಲ್ಲಾ ಮರಾಠಿ ಸಂಘದ ಅಧ್ಯಕ್ಷ ಉಮೇಶ ನಾಯ್ಕ ಚೇರ್ಕಾಡಿ, ಚೇರ್ಕಾಡಿ ಗ್ರಾಮ ಪಂಚಾಯಿತಿ ಸದಸ್ಯರಾದ ಹರೀಶ್‌ ಶೆಟ್ಟಿ, ಕಮಲಾಕ್ಷ ಹೆಬ್ಬಾರ್‌, ಗ್ರಾಮಸ್ಥರಾದ ದಿನೇಶ್‌ ನಾಯ್ಕ, ಮಂಜುನಾಥ ನಾಯ್ಕ, ವಿಶ್ವನಾಥ ನಾಯ್ಕ ಇದ್ದರು.

ವಿಠಲ ನಾಯ್ಕ ಸ್ವಾಗತಿಸಿದರು. ಉದಯ ನಾಯ್ಕ ವಂದಿಸಿದರು. ರಾಜೇಶ್‌ ನಾಯ್ಕ ನಿರೂಪಿಸಿದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.