
ಪರೀಕ್ಷೆ
ಬ್ರಹ್ಮಾವರ: ಆರೂರು ಮೊರಾರ್ಜಿ ದೇಸಾಯಿ ವಸತಿ ಶಾಲೆಗೆ 2026–27ನೇ ಶೈಕ್ಷಣಿಕ ಸಾಲಿಗೆ 6ನೇ ತರಗತಿಗೆ ಪ್ರವೇಶ ಪಡೆಯಲು ಅರ್ಹ ಅಭ್ಯರ್ಥಿಗಳಿಂದ ಅರ್ಜಿ ಆಹ್ವಾನಿಸಲಾಗಿದೆ.
ಅಭ್ಯರ್ಥಿಗಳು ಅಥವಾ ಪೋಷಕರು ಇದೇ 10ರಿಂದ ಕರ್ನಾಟಕ ಪರೀಕ್ಷಾ ಪ್ರಾಧಿಕಾರದ ವೆಬ್‌ಸೈಟ್‌ನಿಂದ ಘೋಷಣಾ ಪತ್ರ ಡೌನ್‌ಲೋಡ್ ಮಾಡಬೇಕು. ಭರ್ತಿ ಮಾಡಿದ ಪತ್ರವನ್ನು ಇದೇ 25ರ ಸಂಜೆ 4 ಗಂಟೆಯೊಳಗೆ ಕರ್ನಾಟಕ ವಸತಿ ಶಿಕ್ಷಣ ಸಂಸ್ಥೆಗಳ ಸಂಘದ ಅಧೀನದಲ್ಲಿ ಕಾರ್ಯ ನಿರ್ವಹಿಸುತ್ತಿರುವ ಯಾವುದೇ ವಸತಿ ಶಾಲೆಗಳಿಗೆ ಸಲ್ಲಿಸಿ ಸ್ವೀಕೃತಿ ಪಡೆಯಬೇಕು. ಅರ್ಜಿಯನ್ನು ವಸತಿ ಶಾಲೆಗಳಲ್ಲಿಯೇ ಅಪ್‌ಲೋಡ್ ಮಾಡಬೇಕಾಗಿದ್ದು, ಅಭ್ಯರ್ಥಿಯ ಸ್ಯಾಟ್ಸ್ ಸಂಖ್ಯೆ, ಭಾವಚಿತ್ರ, ಆಧಾರ್ ಸಂಖ್ಯೆ, ಚಾಲ್ತಿಯಲ್ಲಿರುವ ಜಾತಿ ಮತ್ತು ಆದಾಯ ಪ್ರಮಾಣಪತ್ರದ ಆರ್‌ಡಿ ಸಂಖ್ಯೆ, ಸಂಬಂಧಿತ ಇತರೆ ಮೀಸಲಾತಿ ಪ್ರಮಾಣಪತ್ರ ಅಗತ್ಯವಿರುತ್ತದೆ.
ಪರಿಶಿಷ್ಟ ಜಾತಿ, ಪರಿಶಿಷ್ಟ ವರ್ಗಕ್ಕೆ ವಾರ್ಷಿಕ ಆದಾಯ ₹2.50 ಲಕ್ಷ, ಹಿಂದುಳಿದ ವರ್ಗ ಪ್ರವರ್ಗ ₹1 ಲಕ್ಷ, ಹಿಂದುಳಿದ ವರ್ಗ ₹2.50 ಲಕ್ಷ, 2ಎ, 2ಬಿ, 3ಎ, 3ಬಿ ವರ್ಗದವರಿಗೆ ₹1 ಲಕ್ಷ ಕುಟುಂಬದ ವಾರ್ಷಿಕ ಆದಾಯದ ಮಿತಿ ಇರುತ್ತದೆ. ಮಾಹಿತಿಗೆ 8277894672, 99648739918 ಸಂಪರ್ಕಿಸಬಹುದು.