ADVERTISEMENT

ಬ್ರಹ್ಮಾವರ| ‘ಎನ್ಎಸ್ಎಸ್ ಧ್ಯೇಯ ಅರಿತುಕೊಳ್ಳಿ’

​ಪ್ರಜಾವಾಣಿ ವಾರ್ತೆ
Published 9 ಅಕ್ಟೋಬರ್ 2024, 4:45 IST
Last Updated 9 ಅಕ್ಟೋಬರ್ 2024, 4:45 IST
ಎಸ್‌ಎಂಎಸ್‌ ಪಿಯು ಕಾಲೇಜಿನ ಎನ್‌ಎಸ್‌ಎಸ್‌ ವಾರ್ಷಿಕ ವಿಶೇಷ ಶಿಬಿರದ ಉದ್ಘಾಟನಾ ಸಮಾರಂಭದಲ್ಲಿ ಪ್ರಸನ್ನ ಅಡಿಗ ಮಾತನಾಡಿದರು
ಎಸ್‌ಎಂಎಸ್‌ ಪಿಯು ಕಾಲೇಜಿನ ಎನ್‌ಎಸ್‌ಎಸ್‌ ವಾರ್ಷಿಕ ವಿಶೇಷ ಶಿಬಿರದ ಉದ್ಘಾಟನಾ ಸಮಾರಂಭದಲ್ಲಿ ಪ್ರಸನ್ನ ಅಡಿಗ ಮಾತನಾಡಿದರು   

ಬ್ರಹ್ಮಾವರ: ಶಿಬಿರಾರ್ಥಿಗಳು ರಾಷ್ಟ್ರೀಯ ಸೇವಾ ಯೋಜನೆಯ ಧ್ಯೇಯ ಅರಿತುಕೊಳ್ಳಬೇಕು ಎಂದು ಇಲ್ಲಿನ ಒ.ಎಸ್‌.ಸಿ ಎಜುಕೇಷನಲ್‌ ಸೊಸೈಟಿ ಅಧ್ಯಕ್ಷ ಫಾ.ಎಂ.ಸಿ ಮಥಾಯಿ ಹೇಳಿದರು.

ಕೊಕ್ಕರ್ಣೆ ಕುಮುದಾ ಉಮಾಶಂಕರ ಶಿಕ್ಷಕರ ತರಬೇತಿ ಸಂಸ್ಥೆಯಲ್ಲಿ ಶಿಕ್ಷಣ ಇಲಾಖೆ (ಪದವಿ ಪೂರ್ವ) ಸಹಯೋಗದಲ್ಲಿ ಎಸ್‌.ಎಂ.ಎಸ್‌ ಪದವಿಪೂರ್ವ ಕಾಲೇಜಿನ ಎನ್‌ಎಸ್‌ಎಸ್‌ ವಾರ್ಷಿಕ ವಿಶೇಷ ಶಿಬಿರಕ್ಕೆ ಚಾಲನೆ ನೀಡಿ ಅವರು ಮಾತನಾಡಿದರು.

ರಾಷ್ಟ್ರೀಯ ಸೇವಾ ಯೋಜನೆ, ಶಾಲಾ ಶಿಕ್ಷಣ ಇಲಾಖೆ (ಪದವಿಪೂರ್ವ), ಮಂಗಳೂರು ವಿಭಾಗದ ವಿಭಾಗೀಯ ಅಧಿಕಾರಿ ಸವಿತಾ ಎರ್ಮಾಳ್‌ ಮಾತನಾಡಿ, ಸಾರ್ವಜನಿಕ ಸೇವೆ ಮೂಲಕ ವ್ಯಕ್ತಿತ್ವ ವೃದ್ಧಿಗೊಳಿಸುವ ಮುಖ್ಯ ಉದ್ದೇಶ ಇಟ್ಟುಕೊಂಡ ಎನ್‌ಎಸ್‌ಎಸ್‌ ವಿದ್ಯಾರ್ಥಿಗಳನ್ನು ಲೋಕಸೇವೆ ಮೂಲಕ ರಾಷ್ಟ್ರ ನಿರ್ಮಾಣ ಕಾರ್ಯಗಳಲ್ಲಿ ತೊಡಗಿಸಿಕೊಳ್ಳುವಂತೆ ಮಾಡುತ್ತದೆ. ರಾಷ್ಟ್ರ ಪ್ರೇಮ, ಸೇವಾಭಾವನೆಗಳನ್ನು ಬೆಳೆಸುವಲ್ಲಿ ಮುಖ್ಯ ಪಾತ್ರ ವಹಿಸುತ್ತದೆ ಎಂದರು.

ADVERTISEMENT

ಶಿಬಿರದಲ್ಲಿ ದೊರೆತ ಅನುಭವವನ್ನು ಜೀವನದಲ್ಲಿ ಅಳವಡಿಸಿಕೊಂಡರೆ, ಸಮರ್ಥ ನಾಯಕತ್ವ, ಸಮಾಜಪರ ಚಟುವಟಿಕೆಗಳನ್ನು ನಡೆಸಲು ಸ್ಫೂರ್ತಿ ನೀಡುತ್ತದೆ ಎಂದು ಅವರು ಹೇಳಿದರು.

ಪ್ರಾಂಶುಪಾಲ ಐವನ್‌ ದೊನಾತ್‌ ಸುವಾರಿಸ್‌ ಅಧ್ಯಕ್ಷತೆ ವಹಿಸಿದ್ದರು. ಕೊಕ್ಕರ್ಣೆ ಅನಿತಾ ವಿದ್ಯಾಸಂಸ್ಥೆಯ ಖಜಾಂಚಿ ಜಯರಾಂ ಶೆಟ್ಟಿ, ಪ್ರಾಂಶುಪಾಲ ಸುರೇಶ್ ಕುಮಾರ್‌ ಶೆಟ್ಟಿ, ಕೊಕ್ಕರ್ಣೆ ದುರ್ಗಾ ಆಂಗ್ಲಮಾಧ್ಯಮ ಶಾಲೆ ಪ್ರಾಂಶುಪಾಲ ಚಂದ್ರಶೇಖರ ನಾಯಕ್‌, ಒ.ಎಸ್‌.ಸಿ ಎಜುಕೇಶಷಲ್‌ ಸೊಸೈಟಿಯ ಪಿಯು ವಿಭಾಗದ ಕೋಶಾಧಿಕಾರಿ ಥೋಮಸ್‌ ಸುವಾರಿಸ್‌, ಶಿಬಿರದ ಸ್ವಯಂಸೇವಕರ ನಾಯಕಿ ಸ್ವಾತಿ, ನಾಯಕ ಸುಹಾನ್‌ ಇದ್ದರು. ಶಿಬಿರದ ಕಾರ್ಯಕ್ರಮಾಧಿಕಾರಿ ಪ್ರಸನ್ನ ಅಡಿಗ ಸ್ವಾಗತಿಸಿದರು. ಶಿಬಿರದ ನಾಯಕಿ ಸ್ವಾತಿ ವಂದಿಸಿದರು. ಉಪನ್ಯಾಸಕ ರಾಘವೇಂದ್ರ ಐತಾಳ ನಿರೂಪಿಸಿದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.