ಬೈಂದೂರು: ಬೈಂದೂರು ಪೊಲೀಸ್ ಠಾಣಾ ವ್ಯಾಪ್ತಿಯ ಶಿರೂರು ಪೇಟೆಯ ಮಂಜುನಾಥ ಹೊಟೇಲ್ ಎದುರುಗಡೆ ಖಾಲಿ ಜಾಗದಲ್ಲಿ ಮಲಗಿದ್ದ ಗೋವುಗಳನ್ನು ಕದ್ದು ಒಯ್ದಿದ್ದಾರೆ ಎಂದು ಶ್ರೀಧರ ಬಿಜೂರು ಎಂಬುವವರು ಬೈಂದೂರು ಪೊಲೀಸ್ ಠಾಣೆಯಲ್ಲಿ ನೀಡಿದ ದೂರಿನನ್ವಯ ಇಬ್ಬರು ಆರೋಪಿಗಳನ್ನು ಬೈಂದೂರು ಪೋಲಿಸರು ಬಂಧಿಸಿದ್ದಾರೆ.
ಕುಂದಾಪುರ ಕೋಡಿ ಕಸಬಾ ನಿವಾಸಿಗಳಾದ ಅಬ್ದುಲ್ ಸಮಾದ್ (27), ಅಬ್ದುಲ್ ರೆಹಮಾನ್ (25) ಬಂಧಿತ ಆರೋಪಿಗಳು.
ಜಿಲ್ಲಾ ಪೊಲೀಸ್ ಅಧೀಕ್ಷಕ ಅರುಣ್ ಕೆ. ಮಾರ್ಗದರ್ಶನದಲ್ಲಿ, ಹೆಚ್ಚುವರಿ ಪೊಲೀಸ್ ಅಧೀಕ್ಷಕ ಎಸ್.ಟಿ. ಸಿದ್ದಲಿಂಗಪ್ಪ, ಪರಮೇಶ್ವರ ಹೆಗಡೆ, ಕುಂದಾಪುರ ಉಪವಿಭಾಗದ ಉಪಾಧೀಕ್ಷಕರು ಬೆಳ್ಳಿಯಪ್ಪ ಕೆ.ಯು., ಬೈಂದೂರು ಪೊಲೀಸ್ ವೃತ್ತ ನಿರೀಕ್ಷಕ ಸವೀತ್ರ ತೇಜ್, ಬೈಂದೂರು ಪಿಎಸ್‌ಐ ತಿಮ್ಮೇಶ್ ಬಿ. ಎನ್., ಎಎಸ್‌ಐ ಸೂರ ನಾಯ್ಕ ಹಾಗೂ ಸಿಬ್ಬಂದಿ ಕಾರ್ಯಾಚರಣೆ ನಡೆಸಿ ಹಾಲಾಡಿ ರಸ್ತೆಯ ಕೊಟೇಶ್ವರ ಸನ್‌ರೈಸ್ ಫ್ಯಾಕ್ಟರಿ ಬಳಿ ಆರೋಪಿಗಳನ್ನು ವಶಕ್ಕೆ ಪಡೆಯಲಾಯಿತು.
ಆರೋಪಿಗಳಿಂದ ಕೃತ್ಯಕ್ಕೆ ಎರಡು ಕಾರುಗಳನ್ನು, ಮೊಬೈಲ್, ಚೂರಿಯನ್ನು ಪೊಲೀಸರು ವಶಪಡಿಸಿಕೊಂಡಿದ್ದಾರೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.