ADVERTISEMENT

ನಡುಮನೆ ಕಂಬಳದ ಸಂಭ್ರಮ

4 ವಿಭಾಗಗಳಲ್ಲಿ ಸ್ಪರ್ಧಿಸಿದ 49 ಜೊತೆ ಕೋಣಗಳು

​ಪ್ರಜಾವಾಣಿ ವಾರ್ತೆ
Published 5 ಡಿಸೆಂಬರ್ 2022, 5:02 IST
Last Updated 5 ಡಿಸೆಂಬರ್ 2022, 5:02 IST
ಕಂಬಳದ ರೋಚಕ ನೋಟ
ಕಂಬಳದ ರೋಚಕ ನೋಟ   

ಬಾರ್ಕೂರು(ಬ್ರಹ್ಮಾವರ): ಇತಿಹಾಸ ಪ್ರಸಿದ್ಧ ಬಾರ್ಕೂರು ನಡುಮನೆ ಕಂಬಳ ಮಹೋತ್ಸವ ಸಾಂಪ್ರದಾಯಿಕ ಶೈಲಿಯಿಂದ ಶನಿವಾರ ವಿಜೃಂಭಣೆಯಿಂದ ನಡೆಯಿತು. 49 ಜೊತೆ ಕೋಣಗಳು ಕಂಬಳದ 4 ವಿಭಾಗಗಳಲ್ಲಿ ಸ್ಪರ್ಧಿಸಿದವು.

ಸಭಾ ಕಾರ್ಯಕ್ರಮದಲ್ಲಿ ಕರ್ನಾಟಕ ರಾಜ್ಯೋತ್ಸವ ಪ್ರಶಸ್ತಿ ಪುರಸ್ಕೃತ ಬಿ.ಶಾಂತಾರಾಮ ಶೆಟ್ಟಿ ಮಾತನಾಡಿ ನಮ್ಮ ಸಂಪ್ರದಾಯ ಕಂಬಳ ಕ್ರೀಡೆಯನ್ನು ಪ್ರೋತ್ಸಾಹಿಸುತ್ತಿರುವ ನಡುಮನೆ ಕುಟುಂಬದ ಸದಸ್ಯರನ್ನು ಅಭಿನಂದಿಸಿದರು.

ಕಾರ್ಯಕ್ರಮದಲ್ಲಿ ಬೆಂಗಳೂರು, ಹುಬ್ಬಳ್ಳಿ ಧಾರವಾಡ, ಬೆಳಗಾವಿ ಹಾಗೂ ಬ್ರಹ್ಮಾವರದ ಬಂಟರ ಸಂಘದ ಅಧ್ಯಕ್ಷರಾದ ಎಂ.ಮುರಳೀಧರ ಹೆಗ್ಡೆ, ಸುಗ್ಗಿ ಸುಧಾಕರ ಶೆಟ್ಟಿ, ವಿಜಯ ಶೆಟ್ಟಿ ಹಾಗೂ ಎಂ.ಸುಧಾಕರ ಶೆಟ್ಟಿ ಅವರನ್ನು ಸನ್ಮಾನಿಸಲಾಯಿತು. ಕಂಬಳ ಕ್ರೀಡೆಯಲ್ಲಿ ವಿಶೇಷ ಸಾಧನೆ ಮಾಡಿ, ಕ್ರೀಡಾ ರತ್ನ ಪ್ರಶಸ್ತಿ ವಿಜೇತರಾದ ಗೋಪಾಲ ನಾಯ್ಕ ಶಿರೂರು ಅವರನ್ನು ಗೌರವಿಸಲಾಯಿತು. ಬೈಂದೂರು ಕಂಬಳ ಸಮಿತಿಯ ಅಧ್ಯಕ್ಷ ವೆಂಕಟ ಪೂಜಾರಿ, ಬಾರ್ಕೂರು ನಡುಮನೆ ಕುಟುಂಬಸ್ಥರು ಭಾಗವಹಿಸಿದ್ದರು.

ADVERTISEMENT

ಕೋಟಿ-ಚೆನ್ನಯ ಸೇನಾ ತರಬೇತಿ ಕೇಂದ್ರದ ಶಿಬಿರಾರ್ಥಿಗಳಿಗೆ ನಡೆದ ಓಟದ ಸ್ಪರ್ಧೆಯಲ್ಲಿ ಮಾಣಿಕ್ಯ ಕುಂದಾಪುರ, ಸೋಮರಾಜ್ ಕೊಪ್ಪಳ ಮತ್ತು ವಿಠಲ ಪೂಜಾರಿ ಮಲ್ಪೆ ಕ್ರಮವಾಗಿ ಪ್ರಥಮ, ದ್ವಿತೀಯ, ಹಾಗೂ ತೃತೀಯ ಬಹುಮಾನ ಪಡೆದರು. ಅಭಿಜಿತ್‌ ಪಾಂಡೇಶ್ವರ ಬಹುಮಾನ ವಿತರಣಾ ಕಾರ್ಯಕ್ರಮ ನಡೆಸಿಕೊಟ್ಟರು. ಆಶೋಕ ಕುಮಾರ ಶೆಟ್ಟಿ ಕಾಡೂರು ಕಾರ್ಯಕ್ರಮ ನಿರೂಪಿಸಿ ವಂದಿಸಿದರು. ಶಾಂತಾರಾಮ ಶೆಟ್ಟಿ ಹಂದಾಡಿ, ದೇವದಾಸ್ ಹೊಸ್ಕರ ಮುಂತಾದವರು ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.