ADVERTISEMENT

ಐದು ಸಾವು; 245 ‍ಪಾಸಿಟಿವ್ ಪ್ರಕರಣ

3,258 ಸೋಂಕಿತರು ಗುಣಮುಖ; ಮೃತರ ಸಂಖ್ಯೆ 55ಕ್ಕೇರಿಕೆ

​ಪ್ರಜಾವಾಣಿ ವಾರ್ತೆ
Published 7 ಆಗಸ್ಟ್ 2020, 14:41 IST
Last Updated 7 ಆಗಸ್ಟ್ 2020, 14:41 IST

ಉಡುಪಿ: ಜಿಲ್ಲೆಯಲ್ಲಿ ಶುಕ್ರವಾರ ಐವರು ಕೋವಿಡ್‌ ಸೋಂಕಿತರು ಮೃತಪಟ್ಟಿದ್ದು, 245 ಮಂದಿಗೆ ಕೋವಿಡ್‌ ಸೋಂಕು ದೃಢಪಟ್ಟಿದೆ. ಉಡುಪಿಯ 125, ಕುಂದಾಪುರದ 92 ಹಾಗೂ ಕಾರ್ಕಳದ 25 ಹಾಗೂ ಇತರೆ ಜಿಲ್ಲೆಗಳ ಮೂವರಿಗೆ ಸೋಂಕು ಕಾಣಿಸಿಕೊಂಡಿದೆ.

ಸೋಂಕು ತಗುಲಿದ್ದು ಹೇಗೆ

ಸೋಂಕಿತರ ಪ್ರಾಥಮಿಕ ಸಂಪರ್ಕದಿಂದ 91 ಮಂದಿಗೆ, ಐಎಲ್‌ಐ ಲಕ್ಷಣಗಳಿದ್ದ 57, ಸಾರಿ ಲಕ್ಷಣಗಳಿದ್ದ ಐವರಲ್ಲಿ, ಅಂತರ ಜಿಲ್ಲೆಗಳಿಗೆ ಪ್ರಯಾಣ ಬೆಳೆಸಿದ್ದ ಐವರಲ್ಲಿ, ವಿದೇಶದಿಂದ ಬಂದಿದ್ದ ಒಬ್ಬರಲ್ಲಿ ಸೋಂಕು ಪತ್ತೆಯಾಗಿದೆ. 86 ಜನರ ಸೋಂಕಿನ ಮೂಲ ಪತ್ತೆಹಚ್ಚಲಾಗುತ್ತಿದೆ.

ADVERTISEMENT

ಸೋಂಕಿತರಲ್ಲಿ ರೋಗದ ಲಕ್ಷಣಗಳಿರುವ 70 ಹಾಗೂ ರೋಗ ಲಕ್ಷಣಗಳು ಇಲ್ಲದ 175 ಮಂದಿ ಇದ್ದು, ಕೋವಿಡ್‌ ಕೇರ್‌ ಕೇಂದ್ರಗಳಲ್ಲಿ 15, ಹೋಂ ಐಸೊಲೇಷನ್‌ನಲ್ಲಿ 89, ಕೋವಿಡ್‌ ಆಸ್ಪತ್ರೆಗಳಲ್ಲಿ 135 ಸೋಂಕಿತರು ಚಿಕಿತ್ಸೆ ಪಡೆಯುತ್ತಿದ್ದಾರೆ.‌

1,357 ಮಾದರಿ ಸಂಗ್ರಹ

ಸೋಂಕಿತರ ಪ್ರಾಥಮಿಕ ಸಂಪರ್ಕಕ್ಕೆ ಬಂದ 1,357 ಜನರ ಮಾದರಿ ಸಂಗ್ರಹಿಸಿ ಪ್ರಯೋಗಾಲಯಗಳಿಗೆ ಕಳುಹಿಸಲಾಗಿದ್ದು, 1,203 ವರದಿಗಳು ಬರುವುದು ಬಾಕಿ ಇದೆ.

ಶುಕ್ರವಾರ 101 ಸೇರಿ ಜಿಲ್ಲೆಯಲ್ಲಿ ಇದುವರೆಗೆ 3,258 ಸೋಂಕಿತರು ಗುಣಮುಖರಾಗಿ ಆಸ್ಪತ್ರೆಯಿಂದ ಬಿಡುಗಡೆಯಾಗಿದ್ದಾರೆ. 2,292 ಸಕ್ರಿಯ ಸೋಂಕಿತ ಪ್ರಕರಣಗಳಿವೆ. ಸೋಂಕಿತರ ಸಂಖ್ಯೆ 5,605ಕ್ಕೇರಿಕೆಯಾಗಿದೆ.

ಐವರು ಸಾವು

ಕೋವಿಡ್ ಸೋಂಕಿತರ ಸಾವಿನ ಸಂಖ್ಯೆ ಹೆಚ್ಚುತ್ತಿದ್ದು, ಶುಕ್ರವಾರ ಐವರು ಮೃತಪಟ್ಟಿದ್ದಾರೆ. ಕಿಡ್ನಿ, ತೀವ್ರ ಉಸಿರಾಟದ ಸಮಸ್ಯೆ ಹಾಗೂ ಇತರೆ ಅನಾರೋಗ್ಯ ಸಮಸ್ಯೆಯಿಂದ ಬಳಲುತ್ತಿದ್ದ ಉಡುಪಿಯ 78 ವರ್ಷದ ವೃದ್ಧೆ, ಹೃದ್ರೋಗವಿದ್ದ ಕುಂದಾಪುರದ 75 ವರ್ಷದ ವೃದ್ಧ, ಮಧುಮೇಹ, ರಕ್ತದೊತ್ತಡವಿದ್ದ 70 ಹಾಗೂ 65 ವರ್ಷದ ವೃದ್ಧರು, ಕಾರ್ಕಳದ 49 ವರ್ಷದ ಸೋಂಕಿತ ವ್ಯಕ್ತಿ ಚಿಕಿತ್ಸೆಗೆ ಸ್ಪಂದಿಸದೆ ಮೃತಪಟ್ಟಿದ್ದಾರೆ. ಜಿಲ್ಲೆಯಲ್ಲಿ ಸೋಂಕಿತರ ಸಾವಿನ ಸಂಖ್ಯೆ 55ಕ್ಕೇರಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.