ಉಡುಪಿ: ಜಿಲ್ಲೆಯಲ್ಲಿ ಸೋಮವಾರ ಕೊರೊನಾ ಸೋಂಕಿತರ ಸಂಖ್ಯೆ ಶತಕದ ಗಡಿ ದಾಟಿದೆ. 101 ಮಂದಿಯಲ್ಲಿ ಕೋವಿಡ್ ದೃಢಪಟ್ಟಿದ್ದು, ಇವರಲ್ಲಿ ಉಡುಪಿಯ 63, ಕುಂದಾಪುರದ 22, ಕಾರ್ಕಳದ 14 ಹಾಗೂ ಬೇರೆ ಜಿಲ್ಲೆಗಳ ಇಬ್ಬರು ಇದ್ದಾರೆ.
ಸೋಂಕಿತರಲ್ಲಿ 62 ಪುರುಷರು, 39 ಮಹಿಳೆಯರಿದ್ದು, 52 ಮಂದಿಯಲ್ಲಿ ರೋಗದ ರಕ್ಷಣಗಳು ಕಾಣಿಸಿಕೊಂಡಿದ್ದು, 49 ಮಂದಿಯಲ್ಲಿ ಲಕ್ಷಣಗಳು ಇಲ್ಲ. 16 ಮಂದಿ ಆಸ್ಪತ್ರೆಗಳಲ್ಲಿ, 85 ಸೋಂಕಿತರು ಹೋಂಐಸೊಲೇಷನ್‌ನಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ.
ಜಿಲ್ಲೆಯಲ್ಲಿ ಒಟ್ಟು ಸೋಂಕಿತ ಪ್ರಕರಣಗಳ ಸಂಖ್ಯೆ 26,073 ಇದ್ದು, 390 ಸಕ್ರಿಯ ಸೋಂಕಿತರು ಇದ್ದಾರೆ. 25,491 ಸೋಂಕಿತರು ಗುಣಮುಖರಾಗಿದ್ದು, 182 ಮಂದಿ ಕೋವಿಡ್‌ನಿಂದ ಮೃತಪಟ್ಟಿದ್ದಾರೆ.
45 ವರ್ಷ ಮೇಲ್ಪಟ್ಟ 1,15,366 ಮಂದಿ ಕೋವಿಡ್ ಲಸಿಕೆ ಹಾಕಿಸಿಕೊಂಡಿದ್ದಾರೆ. 22245 ಆರೋಗ್ಯ ಕಾರ್ಯಕರ್ತರು ಮೊದಲ ಡೋಸ್, 16427 ಮಂದಿ ಎರಡನೇ ಡೋಸ್ ಪಡೆದರೆ, 6420 ಮಂಚೂಣಿ ಕಾರ್ಯಕರ್ತರು ಮೊದಲ ಡೋಸ್, 2705 ಮಂದಿ ಎರಡನೇ ಡೋಸ್ ಪಡೆದುಕೊಂಡಿದ್ದಾರೆ. ಜಿಲ್ಲೆಯಲ್ಲಿ ಇದುವರೆಗೂ 1.67 ಲಕ್ಷಕ್ಕೂ ಹೆಚ್ಚು ಮಂದಿ ಲಸಿಕೆ ಪಡೆದಿದ್ದಾರೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.