ADVERTISEMENT

ಕೋವಿಡ್‌:10 ಸಾವು, 1047 ಮಂದಿಗೆ ಸೋಂಕು

​ಪ್ರಜಾವಾಣಿ ವಾರ್ತೆ
Published 8 ಮೇ 2021, 16:37 IST
Last Updated 8 ಮೇ 2021, 16:37 IST

ಉಡುಪಿ: ಜಿಲ್ಲೆಯಲ್ಲಿ ಕೊರೊನಾ ಸೋಂಕಿತರ ಸಾವಿನ ಸಂಖ್ಯೆ ಹೆಚ್ಚುತ್ತಲೇ ಇದ್ದು, ಶನಿವಾರ 10 ಮಂದಿ ಕೋವಿಡ್‌ನಿಂದ ಮೃತಪಟ್ಟಿದ್ದಾರೆ. ಕಳೆದ 5 ದಿನಗಳಲ್ಲಿ‌ ಕೋವಿಡ್‌ನಿಂದ ಸಾವನ್ನಪ್ಪಿದವರ ಸಂಖ್ಯೆ 27ಕ್ಕೆ ಏರಿಕೆಯಾಗಿದೆ.

ಉಡುಪಿಯ 75, 79, 73 ಹಾಗೂ 68 ವರ್ಷದ ವೃದ್ಧೆ, 78 ವರ್ಷದ ವೃದ್ಧ, ಕಾರ್ಕಳ ತಾಲ್ಲೂಕಿನ 41, 69, 66 ವರ್ಷದ ಪುರುಷರು ಹಾಗೂ 76 ವರ್ಷದ ವೃದ್ಧೆ, ಕುಂದಾಪುರದ 55 ವರ್ಷದ ಮಹಿಳೆ ಮೃತಪಟ್ಟವರು. ಮೃತರೆಲ್ಲರೂ ತೀವ್ರ ಉಸಿರಾಟದ ಸಮಸ್ಯೆ ಸೇರಿದಂತೆ ಹಲವು ಗಂಭೀರ ಆರೋಗ್ಯ ಸಮಸ್ಯೆಗಳಿಂದ ಬಳಲುತ್ತಿದ್ದರು. ಚಿಕಿತ್ಸೆಗೆ ಸ್ಪಂದಿಸದೆ ಮೃತಪಟ್ಟಿದ್ದಾರೆ ಎಂದು ವೈದ್ಯರು ಮಾಹಿತಿ ನೀಡಿದ್ದಾರೆ.

ಶನಿವಾರ 1047 ಮಂದಿಗೆ ಕೋವಿಡ್‌ ದೃಢಪಟ್ಟಿದ್ದು, ಸೋಂಕಿತರಲ್ಲಿ 551 ಪುರುಷರು, 496 ಮಹಿಳೆಯರಿದ್ದು, 237 ಮಂದಿಗೆ ಸೋಂಕಿನ ಲಕ್ಷಣಗಳು ಕಾಣಿಸಿಕೊಂಡಿದ್ದು, 810 ಮಂದಿಗೆ ಲಕ್ಷಣಗಳು ಇಲ್ಲ. ‌

ADVERTISEMENT

ಉಡುಪಿಯ 645, ಕುಂದಾಪುರದ 347, ಕಾರ್ಕಳದ 45 ಹಾಗೂ ಬೇರೆ ಜಿಲ್ಲೆಗಳ 10 ಮಂದಿಗೆ ಸೋಂಕು ತಗುಲಿದ್ದು, 27 ಸೋಂಕಿತರು ಆಸ್ಪತ್ರೆಯಲ್ಲಿ, 1,020 ಮಂದಿ ಹೋಂಐಸೊಲೇಷನ್‌ನಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.