ADVERTISEMENT

ಉಡುಪಿ: 181 ಸಕ್ರಿಯ ಸೋಂಕಿತರು ಮಾತ್ರ

ಸೋಮವಾರ 11 ಮಂದಿಗೆ ಕೋವಿಡ್‌: ಇಳಿಮುಖವಾಗುತ್ತಿರುವ ಸೋಂಕು

​ಪ್ರಜಾವಾಣಿ ವಾರ್ತೆ
Published 23 ನವೆಂಬರ್ 2020, 16:34 IST
Last Updated 23 ನವೆಂಬರ್ 2020, 16:34 IST

ಉಡುಪಿ: ಜಿಲ್ಲೆಯಲ್ಲಿ ಸೋಮವಾರ 11 ಮಂದಿಯಲ್ಲಿ ಕೋವಿಡ್‌–19 ದೃಢಪಟ್ಟಿದೆ. ಉಡುಪಿಯ 5, ಕುಂದಾಪುರದ 4 ಹಾಗೂ ಕಾರ್ಕಳದ ಇಬ್ಬರಿಗೆ ಸೋಂಕು ತಗುಲಿದೆ. ಕೋವಿಡ್‌ ಆಸ್ಪತ್ರೆಯಲ್ಲಿ ಮೂವರು, ಹೋಂ ಐಸೊಲೇಷನ್‌ನಲ್ಲಿ 8 ಮಂದಿ ಚಿಕಿತ್ಸೆ ಪಡೆಯುತ್ತಿದ್ದಾರೆ. ಸೋಂಕಿತರಲ್ಲಿ ಐವರು ಮಹಿಳೆಯರು, 6 ಪುರುಷರು ಇದ್ದಾರೆ.

ಒಟ್ಟು ಸೋಂಕಿತ ಪ್ರಕರಣಗಳ ಸಂಖ್ಯೆ 22,523 ಇದ್ದು, 181 ಸಕ್ರಿಯ ಸೋಂಕಿತರು ಮಾತ್ರ ಇದ್ದಾರೆ. ಸೋಮವಾರ 28 ಮಂದಿ ಗುಣಮುಖರಾಗಿದ್ದು, ಇದುವರೆಗೂ ಗುಣರಾದವರ ಸಂಖ್ಯೆ 22,155ಕ್ಕೆ ಏರಿಕೆಯಾಗಿದೆ. 187 ಮಂದಿ ಸೋಂಕಿನಿಂದ ಮೃತಪಟ್ಟಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT