ADVERTISEMENT

ಕನಿಷ್ಠ ಮಟ್ಟಕ್ಕೆ ಕೋವಿಡ್‌: 6 ಪ್ರಕರಣ ದೃಢ

​ಪ್ರಜಾವಾಣಿ ವಾರ್ತೆ
Published 15 ಡಿಸೆಂಬರ್ 2020, 16:31 IST
Last Updated 15 ಡಿಸೆಂಬರ್ 2020, 16:31 IST

ಉಡುಪಿ: ಜಿಲ್ಲೆಯಲ್ಲಿ ಕೋವಿಡ್‌–19 ಪ್ರಮಾಣ ಗಣನೀಯವಾಗಿ ಇಳಿಮುಖವಾಗಿದ್ದು, ಮಂಗಳವಾರ 6 ಪ್ರಕರಣಗಳು ಮಾತ್ರ ದೃಢಪಟ್ಟಿವೆ. ಎರಡು ತಿಂಗಳಿನಿಂದ ಜಿಲ್ಲೆಯಲ್ಲಿ ಸೋಂಕು ಕುಸಿಯುತ್ತಿದ್ದು, ಮಂಗಳವಾರ ಕನಿಷ್ಟ ಸೋಂಕಿನ ಪ್ರಕರಣಗಳು ಪತ್ತೆಯಾಗಿದ್ದು, ಒಂದಂಕಿ ಮಟ್ಟಕ್ಕೆ ತಲುಪಿದೆ.‌

ಆಗಸ್ಟ್‌ನಲ್ಲಿ ಏರುಮುಖವಾಗಿದ್ದ ಕೋವಿಡ್‌ ಪ್ರಕರಣ ನವೆಂಬರ್ ಹಾಗೂ ಡಿಸೆಂಬರ್‌ನಲ್ಲಿ ಇಳಿಕೆ ಕಂಡಿರುವುದು ಸಾರ್ವಜನಿಕರಲ್ಲಿ ಸ್ವಲ್ಪ ನೆಮ್ಮದಿ ಮೂಡಿಸಿದೆ. ಜತೆಗೆ, ಸೋಂಕಿತರ ಮರಣ ಪ್ರಮಾಣವೂ ಕುಗ್ಗಿರುವುದು ಆತಂಕ ನಿಧಾನವಾಗಿ ದೂರವಾಗುತ್ತಿದೆ.

ದೃಢಪಟ್ಟ 6 ಸೋಂಕಿತರಲ್ಲಿ ಉಡುಪಿಯ ನಾಲ್ವರು, ಕುಂದಾಪುರ, ಕಾರ್ಕಳದ ತಲಾ ಒಬ್ಬರು ಇದ್ದಾರೆ. ಜಿಲ್ಲೆಯಲ್ಲಿ ಒಟ್ಟು ಪ್ರಕರಣಗಳ ಸಂಖ್ಯೆ 22,913 ಇದ್ದು, ಸಕ್ರಿಯ ಸೋಂಕಿತರ ಸಂಖ್ಯೆ 124 ಇವೆ. ಮಂಗಳವಾರ 16 ಮಂದಿ ಸೇರಿ 22,602 ಸೋಂಕಿತರು ಗುಣಮುಖರಾಗಿದ್ದಾರೆ. ಸೋಂಕಿನಿಂದ 187 ಮಂದಿ ಮೃತಪಟ್ಟಿದ್ದಾರೆ.

ADVERTISEMENT

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.