ADVERTISEMENT

263 ಕೋವಿಡ್‌ ಪ್ರಕರಣ; ಮೂರು ಸಾವು

198 ಮಂದಿ ಗುಣಮುಖ, ಸೋಂಕಿತರ ಸಂಖ್ಯೆ 6,773ಕ್ಕೇರಿಕೆ

​ಪ್ರಜಾವಾಣಿ ವಾರ್ತೆ
Published 12 ಆಗಸ್ಟ್ 2020, 16:05 IST
Last Updated 12 ಆಗಸ್ಟ್ 2020, 16:05 IST

ಉಡುಪಿ: ಜಿಲ್ಲೆಯಲ್ಲಿ ಬುಧವಾರ ಮೂವರು ಕೋವಿಡ್-19‌ ಸೋಂಕಿತರು ಮೃತಪಟ್ಟಿದ್ದು, 263 ಮಂದಿಯಲ್ಲಿ ಸೋಂಕು ಪತ್ತೆಯಾಗಿದೆ.

ಉಡುಪಿ ತಾಲ್ಲೂಕಿನ 142, ಕುಂದಾಪುರದ 95, ಕಾರ್ಕಳ ತಾಲ್ಲೂಕಿನ 23 ಜನರಲ್ಲಿ ಹಾಗೂ ಅಂತರ ಜಿಲ್ಲಾ ಪ್ರಯಾಣ ಬೆಳೆಸಿದ ಮೂವರಲ್ಲಿ ಸೋಂಕು ಕಾಣಿಸಿಕೊಂಡಿದೆ. 51 ಮಂದಿಗೆ ರೋಗ ಲಕ್ಷಣಗಳು ಕಾಣಿಸಿಕೊಂಡರೆ, 212 ಜನರಲ್ಲಿ ಸೋಂಕಿನ ಲಕ್ಷಣಗಳು ಕಂಡುಬಂದಿಲ್ಲ.

ಪ್ರಾಥಮಿಕ ಸಂಪರ್ಕದಿಂದ 97, ಐಎಲ್‌ಐ ಲಕ್ಷಣಗಳಿದ್ದ34 ಜನರಿಗೆ ಸೋಂಕು ತಗುಲಿದ್ದು, 128 ಮಂದಿಯ ಸೋಂಕಿನ ಮೂಲ ಪತ್ತೆ ಹಚ್ಚಲಾಗುತ್ತಿದೆ. 171 ರೋಗಿಗಳಿಗೆ ಕೋವಿಡ್‌ ಕೇರ್ ಸೆಂಟರ್ ಹಾಗೂ ಕೋವಿಡ್‌ ಆಸ್ಪತ್ರೆಗಳಲ್ಲಿ, ಉಳಿದ 92 ಸೋಂಕಿತರಿಗೆ ಹೋಂ ಐಸೊಲೇಷನ್‌ನಲ್ಲಿರಿಸಿ ಚಿಕಿತ್ಸೆ ನೀಡಲಾಗುತ್ತಿದೆ.

ADVERTISEMENT

1,577 ಮಾದರಿ ಸಂಗ್ರಹ

ಕೋವಿಡ್‌ ಶಂಕಿತ 666, ಸೋಂಕಿತರ ಪ್ರಾಥಮಿಕ ಸಂಪರ್ಕಕ್ಕೆ ಬಂದ 464, ಐಎಲ್‌ಐ ಲಕ್ಷಣಗಳಿದ್ದ 53, ಸಾರಿ ಲಕ್ಷಣಗಳಿದ್ದ ಇಬ್ಬರು ಹಾಗೂ ಇತರೆ 398 ಜನರ ಮಾದರಿಯನ್ನು ಪ್ರಯೋಗಾಲಯಗಳಿಗೆ ಕಳುಹಿಸಲಾಗಿದೆ.1,745 ವರದಿಗಳು ಬರುವುದು ಬಾಕಿ ಇದೆ.

198 ಗುಣಮುಖ

ಬುಧವಾರ 198 ಸೇರಿ ಇದುವರೆಗೂ 3,966 ಸೋಂಕಿತರು ಗುಣಮುಖರಾಗಿ ಆಸ್ಪತ್ರೆಯಿಂದ ಬಿಡುಗಡೆಯಾಗಿದ್ದಾರೆ. 2,738 ಸಕ್ರಿಯ ಸೋಂಕಿತ ಪ್ರಕರಣಗಳಿವೆ. ಜಿಲ್ಲೆಯಲ್ಲಿ ಒಟ್ಟು ಸೋಂಕಿತರ ಸಂಖ್ಯೆ 6,773ಕ್ಕೇರಿಕೆಯಾಗಿದೆ.

ಮೂವರು ಸಾವು

ಹೃದ್ರೋಗ, ಶ್ವಾಸಕೋಶ ಸಮಸ್ಯೆಯ ಜತೆಗೆ ಕೋವಿಡ್‌ ಸೋಂಕಿಗೆ ತುತ್ತಾಗಿದ್ದ ಕಾರ್ಕಳದ 81 ವರ್ಷದ ವೃದ್ಧ, ತೀವ್ರ ಉಸಿರಾಟದ ಸಮಸ್ಯೆಯಿಂದ ಬಳಲುತ್ತಿದ್ದ ಉಡುಪಿಯ 66 ಹಾಗೂ 35 ವರ್ಷದ ಸೋಂಕಿತರು ಬುಧವಾರ ಚಿಕಿತ್ಸೆಗೆ ಸ್ಪಂದಿಸದೆ ಮೃತಪಟ್ಟಿದ್ದಾರೆ. ಜಿಲ್ಲೆಯಲ್ಲಿ ಸೋಂಕಿತ ಮೃತರ ಸಂಖ್ಯೆ 69ಕ್ಕೇರಿಕೆಯಾಗಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.