ADVERTISEMENT

ಫಾಸ್ಟ್‌ಟ್ಯಾಗ್‌ ಸರಿಪಡಿಸುವುದಾಗಿ ₹ 99,997 ವಂಚನೆ

​ಪ್ರಜಾವಾಣಿ ವಾರ್ತೆ
Published 31 ಜನವರಿ 2023, 16:05 IST
Last Updated 31 ಜನವರಿ 2023, 16:05 IST

ಉಡುಪಿ: ಪೇಟಿಎಂ ಫಾಸ್ಟ್‌ ಟ್ಯಾಗ್‌ ಸರಿಪಡಿಸುವುದಾಗಿ ನಂಬಿಸಿ ಒಟಿಪಿ ಪಡೆದುಕೊಂಡು ವ್ಯಕ್ತಿಯೊಬ್ಬರ ಬ್ಯಾಂಕ್ ಖಾತೆಯಿಂದ ₹ 99,997 ದೋಚಲಾಗಿದೆ.

ಫ್ರಾನ್ಸಿಸ್‌ ಪಿಯುಸ್ ಪುಟಾರ್ಡೋ ವಂಚನೆಗೊಳಗಾದವರು. ಪೇಟಿಎಂ ಫಾಸ್ಟ್‌ ಟ್ಯಾಗ್ ನಿಷ್ಕ್ರಿಯವಾದ ಹಿನ್ನೆಲೆಯಲ್ಲಿ ಗೂಗಲ್‌ನಲ್ಲಿ ದೊರೆತ ಮೊಬೈಲ್‌ ನಂಬರ್‌ಗೆ ಫ್ರಾನ್ಸಿಸ್‌ ಕರೆ ಮಾಡಿದಾಗ, ಪೇಟಿಎಂ ಫಾಸ್ಟ್‌ ಟ್ಯಾಗ್ ವೆಬ್‌ಸೈಟ್ ಅಧಿಕಾರಿ ಎಂದು ವಂಚಕ ಪರಿಯಿಸಿಕೊಂಡಿದ್ದಾನೆ.

ಬಳಿಕ ಖಾತೆಗೆ ಸಂಬಂಧಿಸಿದ ಎಲ್ಲ ಮಾಹಿತಿ ಪಡೆದು ಮೊಬೈಲ್‌ಗೆ ಬಂದ ಒಟಿಪಿ ಪಡೆದುಕೊಂಡು ಫ್ರಾನ್ಸಿಸ್‌ ಖಾತೆಯಿಂದ ಕ್ರಮವಾಗಿ, ₹ 49,000, ₹ 19,999, ₹ 19998, ₹ 9,999, ₹ 1,000ದಂತೆ ಹಣವನ್ನು ವರ್ಗಾವಣೆ ಮಾಡಿಕೊಂಡಿದ್ದಾರೆ.

ADVERTISEMENT

ಉಡುಪಿ ಸೆನ್‌ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ಗಾಂಜಾ ಸೇವನೆ
ಉಡುಪಿ:
ಮಣಿಪಾಲದ ವಿದ್ಯಾರತ್ನ ನಗರದ ಆಸ್ತಾ ಅಬೋಡ್‌ ಅಪಾರ್ಟ್‌ಮೆಂಟ್‌ ಬಳಿಕ ಗಾಂಜಾ ಸೇವನೆ ಮಾಡಿದ ಆರೋಪ ಮೇಲೆ ಮೋಹಿತ್ ಖರೆ ಹಾಗೂ ಸಾಕ್ಷಿ ಶ್ರೀಯಾನ್ ಎಂಬುವರ ವಿರುದ್ಧ ಎನ್‌ಡಿಪಿಎಸ್‌ ಕಾಯ್ದೆಯಡಿ ಪೊಲೀಸರು ಪ್ರಕರಣ ದಾಖಲಿಸಿದ್ದಾರೆ.

ಇಬ್ಬರನ್ನೂ ವಶಕ್ಕೆ ಪಡೆದು ಮಣಿಪಾಲದ ಕಸ್ತೂರಬಾ ಆಸ್ಪತ್ರೆಯ ಫೊರೆನ್ಸಿಕ್ ವಿಭಾಗದಲ್ಲಿ ಪರೀಕ್ಷೆಗೊಳಪಡಿಸಲಾಗಿದ್ದು ಗಾಂಜಾ ಸೇವನೆ ದೃಢಪಟ್ಟಿದೆ ಎಂದು ಪೊಲೀಸರು ತಿಳಿಸಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.