ADVERTISEMENT

ಸಿಎಸ್ ಪರೀಕ್ಷೆ: 22 ವಿದ್ಯಾರ್ಥಿಗಳ ಸಾಧನೆ

​ಪ್ರಜಾವಾಣಿ ವಾರ್ತೆ
Published 26 ನವೆಂಬರ್ 2022, 5:06 IST
Last Updated 26 ನವೆಂಬರ್ 2022, 5:06 IST
ಶಿಬಾನಿ
ಶಿಬಾನಿ   

ಕುಂದಾಪುರ: ಇನ್‌ಸ್ಟಿಟ್ಯೂಟ್ ಆಫ್ ಕಂಪನಿ ಸೆಕ್ರೆಟರಿ ಆಫ್ ಇಂಡಿಯಾ ನಡೆಸಿದ ಸಿಎಸ್‌ಇಇಟಿ (ಸಿಎಸ್ ಫೌಂಡೇಷನ್) ಪರೀಕ್ಷೆಯಲ್ಲಿ ಇಲ್ಲಿನ ಕುಂದೇಶ್ವರ ರಸ್ತೆಯಲ್ಲಿನ ಶಿಕ್ಷ ಪ್ರಭ ಅಕಾಡೆಮಿ ಆಫ್ ಕಾಮರ್ಸ್ ಎಜುಕೇಷನ್ ಸಂಸ್ಥೆಯ 22 ವಿದ್ಯಾರ್ಥಿಗಳು ಉತ್ತಮ ಸಾಧನೆ ತೋರಿದ್ದಾರೆ.

ಸಂಸ್ಥೆಯ ವಿದ್ಯಾರ್ಥಿಗಳಾದ ಶಿಬಾನಿ (147 ಅಂಕ), ಪೂಜಾ ಶೆಟ್ಟಿ (144), ಧೀರಜ್ ಆರ್ ಕಾಮತ್ (131), ಉಜ್ವಲ್ ಕುಮಾರ್ ಶೆಟ್ಟಿ (129), ರೋಹನ್ (124), ಸುಮಂಗಲಾ (124), ದರ್ಶನ್( 122), ಶ್ರೀನಿಧಿ ಎನ್ (121), ಸುಮೇಧ್ (121), ನಿಖಿತ ಆರ್ ಪೂಜಾರಿ ( 119), ಶ್ರೀಕಾಂತ್ ಉಡುಪ (117), ಶ್ರೇಯಾ( 115), ಯು.ಆರ್. ಫಣೀಂದ್ರ ಮಯ್ಯ (113), ಬಿ.ಎಚ್. ಸನದ್ (110), ಪೃಥ್ವೀಶ್ ಹೆಬ್ಬಾರ್ (106), ಸೃಜನ್ ಆಚಾರ್ಯ(105), ಸುಜಯ್ ಶೆಟ್ಟಿ(102), ಅದಿತಿ ಆಚಾರ್(100), ಆಯಿಷ ಅಸೀಲ್(100), ದೀಕ್ಷಿತ (100), ಪೂಜಿತಾ(100), ಶರತ್(100) ಅಂಕಗಳೊಂದಿಗೆ ಸಿಎಸ್ ಪ್ರಥಮ ಹಂತದ ಪರೀಕ್ಷೆಯನ್ನು ತೇರ್ಗಡೆ ಹೊಂದಿ ಎಕ್ಸಿಕ್ಯೂಟಿವ್ ಹಂತಕ್ಕೆ ಆಯ್ಕೆಯಾಗಿದ್ದಾರೆ.

ಈ ಪರೀಕ್ಷೆಯಲ್ಲಿ ತೇರ್ಗಡೆ ಹೊಂದಿದ ವಿದ್ಯಾರ್ಥಿಗಳಿಗೆ ಡಿಸೆಂಬರ್ 1ರಿಂದ ಸಿಎಸ್ ಎಕ್ಸಿಕ್ಯೂಟಿವ್ ಪರೀಕ್ಷೆಗೆ ತರಬೇತಿಯನ್ನು ಸಂಸ್ಥೆಯಲ್ಲಿ ಪ್ರಾರಂಭಿಸಲಾಗುವುದು ಎಂದು ಸಂಸ್ಥೆಯ ಭರತ್ ಶೆಟ್ಟಿ ತಿಳಿಸಿದ್ದಾರೆ.

ADVERTISEMENT

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.