ADVERTISEMENT

ಸುರ್ಜೇವಾಲಾ ಜನರ ಕಷ್ಟ ಕೇಳಲು ಬಂದಿಲ್ಲ, ಕಪ್ಪ ಕೇಳಲು ಬಂದಿದ್ದಾರೆ: ಸಿ.ಟಿ. ರವಿ

​ಪ್ರಜಾವಾಣಿ ವಾರ್ತೆ
Published 30 ಜೂನ್ 2025, 13:12 IST
Last Updated 30 ಜೂನ್ 2025, 13:12 IST
   

ಉಡುಪಿ: ‘ಕಾಂಗ್ರೆಸ್‌ ರಾಜ್ಯ ಉಸ್ತುವಾರಿ ರಣದೀಪ್‌ ಸಿಂಗ್‌ ಸುರ್ಜೇವಾಲಾ ಅವರು ಜನರ ಕಷ್ಟ ಕೇಳಲು ರಾಜ್ಯಕ್ಕೆ ಬಂದಿಲ್ಲ. ಕಪ್ಪ ಕೇಳಲು ಬಂದಿದ್ದಾರೆ’ ಎಂದು ವಿಧಾನ ಪರಿಷತ್‌ ಸದಸ್ಯ ಸಿ.ಟಿ. ರವಿ ಹೇಳಿದರು.

ಸುದ್ದಿಗೋಷ್ಠಿಯಲ್ಲಿ ಸೋಮವಾರ ಮಾತನಾಡಿದ ಅವರು, ‘ಸುರ್ಜೇವಾಲಾ ಅವರು ಆಗಾಗ ಬರುತ್ತಿರುತ್ತಾರೆ. ಕಾಂಗ್ರೆಸ್‌ನಲ್ಲಿ ಕಪ್ಪ ಕೊಡುವ ವಾಡಿಕೆ ಇದೆ. ಹಿಂದೆ ಮೊಗಲರ ಆಳ್ವಿಕೆಯಲ್ಲಿ ಕಪ್ಪ ಕೊಡುವ ಪದ್ಧತಿ ಇತ್ತಂತೆ. ಕಾಂಗ್ರೆಸ್‌ ಆಡಳಿತದಲ್ಲಿಯೂ ಹಾಗೆಯೇ’ ಎಂದರು.

ರಾಜ್ಯ ಕಾಂಗ್ರೆಸ್‌ನವರು ಕೇಂದ್ರದ ಕಾಂಗ್ರೆಸ್‌ಗೆ ಕಪ್ಪ ಕೊಡಬೇಕು. ಕೊಡದಿದ್ದರೆ ಅವರು ಪದಚ್ಯುತಿಗೊಳ್ಳುತ್ತಾರೆ. ಹಿಂದೆ ಕಪ್ಪ ಕೊಡದ ಕಾರಣಕ್ಕೆ ವೀರೇಂದ್ರ ಪಾಟೀಲ ಅವರನ್ನು ಪಕ್ಷದಿಂದ ಪದಚ್ಯುತಿಗೊಳಿಸಲಾಗಿತ್ತು. ಯಾರು ಅಧಿಕಾರದಲ್ಲಿ ಉಳಿಯಬೇಕೋ ಅವರು ಕಪ್ಪ ಕೊಡುವ ಪರಿಪಾಠ ಇಟ್ಟುಕೊಂಡಿದ್ದಾರೆ. ಸುರ್ಜೇವಾಲ ಅವರಿಗೆ ಜನರ ಕಷ್ಟ ಕೇಳುವ ಅಭ್ಯಾಸ ಇಲ್ಲ ಎಂದು ಹೇಳಿದರು.

ADVERTISEMENT

ಬೆಲೆ ಏರಿಕೆಯ ಹೊರೆಯನ್ನು ಜನರಿಗೆ ಹೊರಿಸಿ ಇಡೀ ಸರ್ಕಾರವೇ ಕೈ ಎತ್ತಿದೆ. ಸರ್ಕಾರವು ಭ್ರಷ್ಟಾಚಾರ ಮತ್ತು ಭ್ರಷ್ಟಾಚಾರಿಗಳಿಗೆ ಶರಣಾಗಿದೆ. ಇನ್ನು ಜನರು ಕಾಂಗ್ರೆಸ್‌ ವಿರುದ್ಧ ಕೈ ಎತ್ತುವುದು ಬಾಕಿ ಇದೆ ಎಂದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.